ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಯುವತಿಯರಿಗೆ ಕಿರುಕುಳ ನೀಡಿದ ಕಾಯುಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಹೊಸ ವರ್ಷಾಚರಣೆ 2020: ಖಾಕಿ ಸಮ್ಮುಖದಲ್ಲೇ ನಡೀತು ಲೈಂಗಿಕ ಕಿರುಕುಳ
ನಗರದಲ್ಲಿ ಪ್ರತಿಗೊಷ್ಠಿಯಲ್ಲಿ ಮಾತನಾಡಿದ ಬಾಸ್ಕರ್ ರಾವ್, ಯುವತಿಯರಿಗೆ ಕಿರುಕುಳ ನೀಡಿರುವ ಸಿಸಿಟಿವಿ ವಿಡಿಯೋಗಳನ್ನ ಪಡೆದು ಕಾಮುಕರ ವಿರುದ್ಧ ದೂರು ಕೊಡುವಂತೆ ಅಪ್ರೋಚ್ ಮಾಡಲಾಗುತ್ತೆ. ಒಂದು ವೇಳೆ ನೊಂದ ಯುವತಿಯರು ಯಾರು ಕೂಡ ಪೊಲೀಸ್ ಠಾಣೆಗೆ ಬಂದು ದೂರು ಕೊಡದಿದ್ದರೂ, ನಾವೇ ಸ್ವಯಂಪ್ರೇರಿತವಾಗಿ ಸೊಮೊಟೊ ಕೇಸ್ ದಾಖಲಿಕೊಂಡು ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಲಾಗುತ್ತೆ. ತಪ್ಪು ಮಾಡಿದವರಿಗೆ ರಕ್ಷಣೆ ಮಾಡುವ ಪ್ರಮೇಯವೇ ಬರುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಜನ್ರ ಸಮ್ಮುಖದಲ್ಲೇ ಜೋಡಿ ಲಿಪ್‍ಲಾಕ್ – ಪೊಲೀಸ್ರು ನಿಯೋಜನೆ ಮಾಡಿದ್ದ ರಸ್ತೆಯಲ್ಲೇ ಪ್ರೇಮಿಗಳು ಅರೆಬೆತ್ತಲೆ
Advertisement
Advertisement
ಹೊಸ ವರ್ಷದ ಸಂಭ್ರಮಾಚರಣೆಗೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಜನರು ಬಂದಿದ್ದರು. ಬ್ರಿಗೇಡ್ ರೋಡ್, ಚರ್ಚ್ ಸ್ಟ್ರಿಟ್‍ನಿಂದ ಹೆಚ್ಚು ಜನ ಕೋರಮಂಗಲಕ್ಕೆ ಬಂದಿದ್ದರು. ಸುಮಾರು ಮೂರು ಲಕ್ಷದಷ್ಟು ಮಂದಿಯನ್ನ ನಮ್ಮ ಪೊಲೀಸರು ಹತೋಟಿಗೆ ತಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಗರ ಭಾಸ್ಕರ್ ರಾವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.