Monday, 19th November 2018

Recent News

7 days ago

ಸರ್ಕಾರಿ ಆಸ್ಪತ್ರೆಯ ಶೌಚಾಲಯದಲ್ಲಿ ಹೆರಿಗೆ- ನವಜಾತ ಶಿಶು ಸಾವು

ಡೆಹರಾಡೂನ್: ಸರ್ಕಾರಿ ಆಸ್ಪತ್ರೆಯಲ್ಲಿ ಶೌಚಾಲಯದಲ್ಲಿ ಹೆರಿಗೆಯ ನಂತರ ನವಜಾತ ಶಿಶು ಮೃತ ಪಟ್ಟಿರುವ ಘಟನೆ ಉತ್ತರಾಖಂಡದ ಡೆಹರಾಡೂನ್ ನ ದೂನ್ ಮಹಿಳಾ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ನಡೆದಿದೆ. 27 ವರ್ಷದ ಗರ್ಭಿಣಿಯು ಭಾನುವಾರ ಬೆಳಗ್ಗೆ ದೂನ್ ಮಹಿಳಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಶೌಚಾಲಯಕ್ಕೆ ಹೋದಾಗ ಅಲ್ಲಿಯೇ ಹೆರಿಗೆಯಾಗಿದೆ. ಇದನ್ನ ಕಂಡ ಆಕೆಯ ಅಜ್ಜಿ ವೈದ್ಯರಿಗೆ ವಿಷಯ ತಿಳಿಸಿ ನರ್ಸ್ ಹಾಗೂ ವೈದ್ಯರು ಸ್ಥಳಕ್ಕೆ ಬಂದು ಮಹಿಳೆಯನ್ನು ಹೆರಿಗೆ ಕೋಣೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ನವಜಾತ ಶಿಶು […]

1 month ago

ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯ: ದಯಾಮರಣಕ್ಕಾಗಿ ಧರಣಿ ನಡೆಸಿದ ರೈತ ಕುಟುಂಬ

ಚಿಕ್ಕಬಳ್ಳಾಪುರ: ಕಂದಾಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಬಡ ರೈತ ಕುಟುಂಬವೊಂದು ದಯಾಮರಣ ಕೋರಿ ಧರಣಿ ನಡೆಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದಿದೆ. ದೇವನಹಳ್ಳಿ ತಾಲೂಕಿನ ಬೈಚಾಪುರ ಗ್ರಾಮದ ನಿವಾಸಿ ಲಕ್ಷ್ಮಮ್ಮ ಎಂಬುವವರಿಗೆ ತಂದೆಯಿಂದ ವಿಲ್ ಮುಖಾಂತರ 1.15 ಎಕರೆ ಜಮೀನು ಬಂದಿತ್ತು. ಆದರೆ ಈ ಜಮೀನಿನ ಮೇಲೆ ಸಂಬಂಧಿಗಳು ಕಣ್ಣು ಹಾಕಿ...

ವೈದ್ಯನ ಚುಚ್ಚುಮದ್ದಿಗೆ ಬಾಲಕ ಬಲಿ!

2 months ago

ಹಾವೇರಿ: ವೈದ್ಯನೊಬ್ಬ ನೀಡಿದ್ದ ಚುಚ್ಚುಮದ್ದಿನಿಂದ ಆರೋಗ್ಯದಲ್ಲಿ ಏರುಪೇರಾಗಿ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಹಾವೇರಿ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಹೊಸಳ್ಳಿ ಗ್ರಾಮದ ಹರೀಶ್ ದುರುಗಣ್ಣನವರ್ (13) ಮೃತ ಬಾಲಕ. ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಹರೀಶ್‍ನನ್ನು ಪೋಷಕರು ಅದೇ ಗ್ರಾಮದ...

ಗೋದಾಮಿನಲ್ಲಿ ಕೊಳೆಯುತ್ತಿವೆ ಕೊಡಗು, ಕೇರಳ ಸಂತ್ರಸ್ತರಿಗೆ ನೀಡಿದ ದವಸ ಧಾನ್ಯಗಳು

2 months ago

ಬಳ್ಳಾರಿ: ಕೊಡಗು, ಕೇರಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಪರಿಸ್ಥಿತಿಗೆ ನಾಡಿನ ಜನರು ಸಾಕಷ್ಟು ನೆರವು ನೀಡಿದ್ದಾರೆ. ಸಂತ್ರಸ್ತರಿಗಾಗಿ ಸಾವಿರಾರು ಜನರು ಆಹಾರ ಧಾನ್ಯ, ದವಸ, ಬಟ್ಟೆ ಬರೆ, ಔಷಧಿಗಳನ್ನು ಸಂತ್ರಸ್ತರಿಗಾಗಿ ನೀಡಿದ್ದಾರೆ. ಆದರೆ ಸಂತ್ರಸ್ತರಿಗೆ ತಲುಪಬೇಕಾಗಿದ್ದ ರಾಶಿ ರಾಶಿ ವಸ್ತುಗಳು ಇದೀಗ...

ಬದುಕಿದ್ದೇನೆಂದು ತಿಳಿಸಲು 3 ವರ್ಷಗಳಿಂದ ಹೋರಾಡುತ್ತಿದ್ದಾನೆ ರೈತ!

3 months ago

ಮಂಡ್ಯ: ತಾನು ಬದುಕಿದ್ದೇನೆ ಎನ್ನುವುದನ್ನು ಸಾಬೀತು ಪಡಿಸಲು ರೈತರೊಬ್ಬರು ಕಳೆದ ಮೂರು ವರ್ಷಗಳಿಂದ ಹರಸಾಹಸ ಪಡುತ್ತಿರುವ ಶೋಚನಿಯ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚಿಕ್ಕಹಾರೋಹಳ್ಳಿ ಗ್ರಾಮದಲ್ಲಿ ನಡೆದಿದೆ. ಚಿಕ್ಕಹಾರೋಹಳ್ಳಿ ಗ್ರಾಮದ ರಾಮೇಗೌಡ ದಾಖಲೆಗಳಲ್ಲಿ ಮೃತಪಟ್ಟು ನಿಜ ಜೀವನದಲ್ಲಿ ಬದುಕಿರುವ ರೈತನಾಗಿದ್ದಾರೆ. ಸರ್ಕಾರಿ...

10 ವರ್ಷದಿಂದ ಪತ್ರಗಳನ್ನೇ ಹಂಚದೇ ತನ್ನಲ್ಲೇ ಉಳಿಸಿಕೊಂಡ ಪೋಸ್ಟ್ ಮ್ಯಾನ್

3 months ago

ಭುವನೇಶ್ವರ್: 10 ವರ್ಷಗಳಿಂದ ಪೋಸ್ಟ್ ಆಫೀಸ್ ಗೆ ಬಂದಿದ್ದ ಸುಮಾರು 1 ಸಾವಿರಕ್ಕೂ ಹೆಚ್ಚು ಪತ್ರಗಳನ್ನು ಮತ್ತು ಪ್ಯಾಕೇಜ್ ಗಳನ್ನು ಸಂಬಂಧಿಸಿದವರಿಗೆ ನೀಡದೆ ಇರುವ ಘಟನೆ ಒಡಿಶಾದ ಭದ್ರಾಕ್ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಕರ್ತವ್ಯ ಲೋಪದ ಆರೋಪದಲ್ಲಿ ಅಂಚೆ ಕಚೇರಿ ಉದ್ಯೋಗಿಯನ್ನು...

ವೈದ್ಯರ ನಿರ್ಲಕ್ಷ್ಯದಿಂದಾಗಿ ಗೃಹಿಣಿ ಸಾವು

4 months ago

ದಾವಣಗೆರೆ: ವೈದ್ಯರ ನಿರ್ಲಕ್ಷದಿಂದಾಗಿ ಗೃಹಿಣಿ ಸಾವನ್ನಪ್ಪಿರುವ ಘಟನೆ ನಗರದ ಸುಚೇತನಾ ಆಸ್ಪತ್ರೆಯಲ್ಲಿ ನಡೆದಿದೆ. ಚಿತ್ತಾನಹಳ್ಳಿ ಗ್ರಾಮದ ಶಾರದಮ್ಮ (35) ಮೃತ ದುರ್ದೈವಿಯಾಗಿದ್ದಾರೆ. ಶಾರದಮ್ಮರವರು 15 ದಿನಗಳ ಹಿಂದೆ ನಗರದ ಸುಚೇತನಾ ಆಸ್ಪತ್ರೆಯಲ್ಲಿ ಗರ್ಭಕೋಶದ ಆಪರೇಷನ್ ಮಾಡಿಸಿಕೊಂಡಿದ್ದರು. ಇಂದು ಆಪರೇಷನ್ ಮಾಡಿದ ಹೊಲಿಗೆ...

ಅನ್ನಭಾಗ್ಯ ಜಾಹೀರಾತಿನ ಅನ್ನದಾತನೊಂದಿಗೆ ವಾಣಿವಿಲಾಸ ಆಸ್ಪತ್ರೆ ಸಿಬ್ಬಂದಿಯ ಅಮಾನವೀಯ ವರ್ತನೆ

4 months ago

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರ ಅನ್ನಭಾಗ್ಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಅನ್ನದಾತನನ್ನು ನಗರದ ವಾಣಿವಿಲಾಸ ಆಸ್ಪತ್ರೆಯಲ್ಲಿ ಪಶುವಿನಂತೆ ನೋಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಎಂ.ಸಿ.ರಾಜು ಆಸ್ಪತ್ರೆ ಸಿಬ್ಬಂದಿಯಿಂದ ಅವಮಾನಕ್ಕೊಳದ ರೈತ. ಇವರು ಮೂಲತಃ ಬೆಂಗಳೂರು ಗ್ರಾಮಂತರ ಜಿಲ್ಲೆಯ ಮಾರಹಳ್ಳಿ ನಿವಾಸಿಯಾಗಿದ್ದಾರೆ. ಇವರು...