Monday, 16th July 2018

2 months ago

ತನ್ನ ನಾಲಗೆಯನ್ನೇ ಕತ್ತರಿಸಿ ದೇವಿಗೆ ಅರ್ಪಿಸಿದ ಭಕ್ತೆ!

ಭೋಪಾಲ್: 45 ವರ್ಷದ ಮಹಿಳೆಯೊಬ್ಬರು ದೇವಸ್ಥಾನದಲ್ಲಿ ದೇವಿಯ ಮುಂದೆಯೇ ನಾಲಗೆ ಕತ್ತರಿಸಿದ ಅರ್ಪಿಸಿದ ಅಚ್ಚರಿಯ ಘಟನೆಯೊಂದು ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ತರ್ಸಮಾ ಗ್ರಾಮದಲ್ಲಿ ನಡೆದಿದೆ. ಬಾಯಿಂದ ರಕ್ತ ಸೋರುತ್ತಿರುವಾಗಲೇ ಪ್ರಕರಣ ಬೆಳಕಿಗೆ ಬಂದಿರುವುದಾಗಿ ಮಹಿಳೆಯ ಸಂಬಂಧಿಕರು ತಿಳಿಸಿದ್ದಾರೆ. ಆದ್ರೆ ಮಹಿಳೆ ಯಾವ ಬೇಡಿಕೆಯಿಟ್ಟು ಈ ಕೃತ್ಯ ಎಸಗಿದ್ದಾರೆಂದು ತಿಳಿದುಬಂದಿಲ್ಲ. ಮಹಿಳೆ ಪ್ರತಿನಿತ್ಯ ಸ್ಥಳೀಯ ಬಿಜಾಸನ ಮಾತಾ ದೇವಸ್ಥಾನಕ್ಕೆ ತೆರಳುತ್ತಿದ್ದರು. ಎಂದಿನಂತೆ ದೇವಸ್ಥಾನಕ್ಕೆ ತೆರಳಿದ್ದ ಮಹಿಳೆ ಏಕಾಏಕಿ ದೇವಿಯ ಮುಂದೆ ತನ್ನ ನಾಲಗೆಯನ್ನು ಕತ್ತರಿಸಿದ್ದಾರೆ. ಕೂಡಲೇ ಪ್ರಜ್ಞಾಹೀನರಾಗಿ ಬಿದ್ದಿದ್ದಾರೆ. […]

9 months ago

ಅತೀ ಉದ್ದದ ನಾಲಗೆಗಾಗಿ ವಿಶ್ವ ದಾಖಲೆ ಪುಟ ಸೇರಿತು ಈ ನಾಯಿ

  ವಾಷಿಂಗ್ಟನ್: ಅತೀ ಉದ್ದವಾದ ನಾಲಗೆಯನ್ನು ಹೊಂದಿರುವ ಅಮೆರಿಕದ ನಾಯಿ ಗಿನ್ನೀಸ್ ಬುಕ್ ಆಫ್ ರೆಕಾಡ್ರ್ಸ್‍ನ ಪುಟ ಸೇರಿದೆ. ಮೋಚಿ ಎಂಬ ಹೆಸರಿನ ಈ ನಾಯಿಗೆ 7.30 ಇಂಚು(18.58 ಸೆ.ಮೀ) ಉದ್ದದ ನಾಲಗೆಯಿದೆ. ಸೇಂಟ್ ಬರ್ನಾರ್ಡ್ ಜಾತಿಗೆ ಸೇರಿದ 8 ವರ್ಷದ ಈ ನಾಯಿಯನ್ನ ಸೌತ್ ಡಕೋಟಾದ ಸಿಯೋಸ್ ಫಾಲ್ಸ್‍ನಲ್ಲಿ ಕಾರ್ಲಾ ಮತ್ತು ಕ್ರೇಗ್ ರಿಕರ್ಟ್...