ಧಾರವಾಡ: ಮನೆ ಹಿಂದೆ ಕಟ್ಟಿ ಹಾಕಿದ್ದ ಕೋಣದ ನಾಲಗೆ ಕತ್ತರಿಸಿ ಬಲಿ ಪಡೆದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಬೆಳವಟಗಿ ಗ್ರಾಮದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಮಹಾಲಯ ಅಮವಾಸ್ಯೆ ಇರುವ ಕಾರಣ ದುಷ್ಕರ್ಮಿಗಳು ವಾಮಾಚಾರಕ್ಕೆ ಬಳಕೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.
Advertisement
ಗ್ರಾಮದ ಶರಣಪ್ಪ ಅಣ್ಣಿಗೇರಿ ಎಂಬವರ ಕೋಣದ ನಾಲಿಗೆಯನ್ನು ದುಷ್ಕರ್ಮಿಗಳು ಕತ್ತರಿಸಿದ್ದಾರೆ. ಅಲ್ಲದೇ ಕತ್ತು ಕೊಯ್ದು ಸಾಯಿಸಲು ಕೂಡ ಪ್ರಯತ್ನಿಸಿದ್ದಾರೆ. ನಾಲಿಗೆ ಕಟ್ ಮಾಡಿದ್ದರಿಂದ ಕೋಣ ಸಾವನ್ನಪ್ಪಿದ್ದು, ಈ ಘಟನೆಯಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.