Tuesday, 22nd October 2019

Recent News

4 hours ago

ದೆಹಲಿ ಹೈಕೋರ್ಟಿನಿಂದ ಡಿಕೆಶಿಗೆ ಸಿಗುತ್ತಾ ಬೇಲ್?

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಜಾಮೀನು ಭವಿಷ್ಯ ನಾಳೆ (ಬುಧವಾರ) ನಿರ್ಧಾರವಾಗಲಿದೆ. ಮಧ್ಯಾಹ್ನ 2.30ಕ್ಕೆ ದೆಹಲಿ ಹೈಕೋರ್ಟ್‍ನ ನ್ಯಾ.ಸುರೇಶ್ ಕುಮಾರ್ ಕೈಟ್ ತೀರ್ಪು ಪ್ರಕಟಿಸಲಿದ್ದಾರೆ. ಪಿಎಂಎಲ್‍ಎ ಕೇಸ್ ಅಡಿ ಇ.ಡಿಯಿಂದ ತಿಹಾರ್ ಜೈಲಿನಲ್ಲಿ ಡಿಕೆಶಿ, ಕಳೆದ ಒಂದೂವರೆ ತಿಂಗಳಿಂದ ಜೈಲಿನಲ್ಲಿದ್ದಾರೆ. ದೀರ್ಘ ವಾದ-ಪ್ರತಿವಾದ ಆಲಿಸಿದ್ದ ಪೀಠ ತೀರ್ಪು ಕಾಯ್ದಿರಿಸಿತ್ತು. ಡಿಕೆಶಿ ಪರ ವಾದ ಮಂಡಿಸಿದ ಅಭಿಷೇಕ್ ಮನುಸಿಂಘ್ವಿ ಅವರು, ಈಗಾಗಲೇ 45 ದಿನಗಳಿಂದ ಡಿಕೆ ಶಿವಕುಮಾರ್ ಅವರು […]

7 hours ago

ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದ ಮಾಜಿ ರಾಜ್ಯಸಭಾ ಸಂಸದ ರಾಮಮೂರ್ತಿ

ನವದೆಹಲಿ: ಕಳೆದ ಬುಧವಾರ ರಾಜ್ಯಸಭೆ ಮತ್ತು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಕೆ.ಸಿ.ರಾಮಮೂರ್ತಿ ಅವರು ಇಂದು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು. ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದರು. ಆ ಬಳಿಕ ಮಾತಾನಾಡಿದ ಅವರು, ಪ್ರಧಾನಿ ಮೋದಿ ಕೆಲಸಗಳನ್ನು...

ಪ್ರಿಯಕರನ ಜೊತೆಗಿರಲು ಪತಿಯನ್ನೇ 50 ಅಡಿ ಎತ್ತರದಿಂದ ತಳ್ಳಿದ್ಳು!

2 days ago

ನವದೆಹಲಿ: ಪ್ರಿಯಕರನ ಜೊತೆ ವಾಸಿಸಲು ಪತ್ನಿಯೊಬ್ಬಳು ತನ್ನ ಪತಿಯನ್ನು 50 ಅಡಿ ಎತ್ತರದಿಂದ ತಳ್ಳಿ ಕೊಲೆ ಮಾಡಿದ ಘಟನೆ ರಾಷ್ಟ್ರರಾಜಧಾನಿ ನವದೆಹಲಿಯ ಪಟೇಲ್ ನಗರದಲ್ಲಿ ನಡೆದಿದೆ. ದಯಾರಾಂ(42) ಕೊಲೆಯಾದ ಪತಿ. ಆರೋಪಿ ಅನಿತಾ ತನ್ನ ಪ್ರಿಯಕರ ಅರ್ಜುನ್ ಮಂಡಲ್ ನ ಜೊತೆ...

ವ್ಯಕ್ತಿಯ ಅಪಹರಣ- ಕೇವಲ 7 ನಿಮಿಷದಲ್ಲಿ ಆರೋಪಿಯನ್ನ ಬಂಧಿಸಿದ ಪೊಲೀಸರು

2 days ago

ನವದೆಹಲಿ: ಅಪಹರಿಸಿದ್ದ ಗ್ಯಾಂಗ್ ಪತ್ತೆ ಹಚ್ಚಿ ಕೇವಲ 7 ನಿಮಿಷದಲ್ಲಿ ಪೊಲೀಸರು ಯುವಕನನ್ನು ರಕ್ಷಿಸಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ. ಮೋಹನ್ ಗಾರ್ಡನ್ ನಿಂದ ಯುವಕನನ್ನು ಅಪಹರಿಸಿದ ನಂತರ ಕಾರ್ ಜಾಕರ್ ಗ್ಯಾಂಗ್‍ನ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತನನ್ನು ರಿಜ್ವಲ್ ಎಂದು ಗುರುತಿಸಲಾಗಿದ್ದು,...

ತಾಯಿಯನ್ನ ಕೊಂದು ಆತ್ಮಹತ್ಯೆಗೆ ಶರಣಾದ ಪುತ್ರ

2 days ago

ನವದೆಹಲಿ: ತಾಯಿಯನ್ನು ಕೊಲೆಗೈದು ಪುತ್ರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೆಹಲಿಯ ಪಿತಂಪುರ ವ್ಯಾಪ್ತಿಯಲ್ಲಿ ನಡೆದಿದೆ. ತಾಯಿಯ ಶವ ಆಶಿನಾ ಅಪಾರ್ಟ್‍ಮೆಂಟಿನ ಫ್ಲ್ಯಾಟ್ ನಲ್ಲಿ ದೊರೆತಿದ್ದು, ಪುತ್ರನ ಶವ ಸರೈ ರೇಲ್ವೇ ನಿಲ್ದಾಣದ ಬಳಿಯ ಟ್ರ್ಯಾಕ್ ನಲ್ಲಿ ಸಿಕ್ಕಿದೆ. ದೆಹಲಿಯ ಸೇಂಟ್ ಸ್ಟೆಫನ್...

ಗಾಂಧೀಜಿ ಆದರ್ಶಗಳನ್ನು ಜನಪ್ರಿಯಗೊಳಿಸಲು ಬಾಲಿವುಡ್ ಮಂದಿಗೆ ಮೋದಿ ಮಣೆ

3 days ago

ನವದೆಹಲಿ: ಮಹಾತ್ಮಾ ಗಾಂಧೀಜಿ ಅವರ ಆದರ್ಶಗಳನ್ನು ಚಲನಚಿತ್ರೋದ್ಯಮದ ಮೂಲಕ ಜನಪ್ರಿಯಗೊಳಿಸಲು ಪ್ರಧಾನಿ ಮೋದಿ ಅವರು ಬಾಲಿವುಡ್ ನಟ-ನಟಿಯರನ್ನು ಭೇಟಿ ಮಾಡಿ ಸಂವಾದ ನಡೆಸಿದ್ದಾರೆ. ಗಾಂಧೀಜಿ ಅವರ 150 ನೇ ಜನ್ಮದಿನದ ಅಂಗವಾಗಿ ಆಯೋಜನೆ ಮಾಡಿದ್ದ ಈ ಕಾರ್ಯಕ್ರಮದಲ್ಲಿ ಬಾಲಿವುಡ್ ಸ್ಟಾರ್ ನಟಿ-ನಟಿಯರು...

ಕಸ ಗುಡಿಸುವ ಮಹಿಳೆಯಿಂದ ರೋಗಿಗೆ ಇಂಜೆಕ್ಷನ್

5 days ago

ನವದೆಹಲಿ: ಕಸ ಗುಡಿಸುವ ಮಹಿಳೆಯೊಬ್ಬಳು ರೋಗಿಗೆ ಇಂಜೆಕ್ಷನ್ ನೀಡಲು ಮುಂದಾದ ಘಟನೆ ರಾಷ್ಟ್ರರಾಜಧಾನಿ ನವದೆಹಲಿಯ ಹರಿನಗರದ ದೀನದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ನಡೆದಿದೆ. ಮಹಿಳೆ ರೋಗಿಗೆ ಇಂಜೆಕ್ಷನ್ ನೀಡಲು ಮುಂದಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಮಹಿಳೆ ರೋಗಿಯ ಕೈಹಿಡಿದುಕೊಂಡು...

ಎಸ್‍ಎ ಬೊಬ್ಡೆ ಅವರನ್ನು ಮುಖ್ಯ ನ್ಯಾಯಾಧೀಶರನ್ನಾಗಿ ಮಾಡಿ – ಗೊಗೋಯ್ ಶಿಫಾರಸು

5 days ago

ನವದೆಹಲಿ: ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಾಧೀಶರಾದ ರಂಜನ್ ಗೊಗೋಯ್ ಅವರು ತನ್ನ ನಂತರ ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯಾಧೀಶ ಎಸ್.ಎ ಬೊಬ್ಡೆ ಅವರನ್ನು ಮುಖ್ಯ ನ್ಯಾಯಾಧೀಶರಾಗಿ ನೇಮಕ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ರಂಜನ್ ಗೊಗೋಯ್ ಅವರು ನವೆಂಬರ್ 17...