Friday, 19th July 2019

7 months ago

ಅಂಬುಲೆನ್ಸ್ ಇಲ್ಲದೆ ಕುರಿ ಸಾಗಾಟದ ಟೆಂಪೋದಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆತಂದ್ರು!

ಚಿತ್ರದುರ್ಗ: ಅಂಬುಲೆನ್ಸ್ ಇಲ್ಲದೆ ಪರದಾಡಿ ಕೊನೆಗೆ ಗರ್ಭಿಣಿಯನ್ನು ಕುಟುಂಬಸ್ಥರು ಕುರಿ ಸಾಗಿಸೋ ಟೆಂಪೋದಲ್ಲಿ 40 ಕಿ.ಮೀ ಕ್ರಮಿಸಿ ಆಸ್ಪತ್ರೆಗೆ ಕರೆತಂದ ಅಮಾನವೀಯ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ವಿವಿಪುರ ಗ್ರಾಮದಲ್ಲಿ ನಡೆದಿದೆ. ಸಮಯಕ್ಕೆ ಸರಿಯಾಗಿ ಅಂಬುಲೆನ್ಸ್ ಬಾರದ ಕಾರಣಕ್ಕೆ ಕುರಿ ಸಾಗಿಸುವ ಟೆಂಪೋದಲ್ಲಿ ಗರ್ಭಿಣಿ ಲಕ್ಷ್ಮಕ್ಕ ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕರೆತರಲಾಯಿತು. ಹೆರಿಗೆ ನೋವಿನಿಂದ ಬಳಲುತ್ತಿದ್ದ ಪತ್ನಿಯನ್ನು ನೋಡಿ ಪತಿ ಮಹಾಲಿಂಗಪ್ಪ ಅಂಬುಲೆನ್ಸ್‍ಗೆ ಕರೆ ಮಾಡಿದ್ದಾರೆ. ಕರೆ ಮಾಡಿ ಮೂರು ಘಂಟೆಯಾದರೂ ಅಂಬುಲೆನ್ಸ್ ಬರಲೇ ಇಲ್ಲ. ಕೊನೆಗೆ […]

1 year ago

ಬೆಂಗ್ಳೂರಲ್ಲಿ ಟೆಂಪೊಗೆ ಮಿನಿ ಬಸ್ ಡಿಕ್ಕಿ- ಮೂವರಿಗೆ ಗಂಭೀರ ಗಾಯ

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ 407 ಟೆಂಪೊಗೆ ಮಿನಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನವರಂಗ್ ಸಿಗ್ನಲ್ ಬಳಿ ನಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಟೆಂಪೊ ಪಲ್ಟಿ ಹೊಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನು ಬಸ್ ಮಲ್ಲೇಶ್ವರಂನಿಂದ ವಿಜಯನಗರಕ್ಕೆ ಹೋಗುತ್ತಿತ್ತು ಎನ್ನಲಾಗಿದೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ....