Monday, 17th June 2019

4 months ago

ಸಾಧಕ ಕೋತಿರಾಜ್‍ಗೆ ಸರ್ಕಾರ ಕಲ್ಪಿಸುತ್ತಿಲ್ಲ ಮನೆ ಭಾಗ್ಯ!

ಚಿತ್ರದುರ್ಗ: ತನ್ನ ಜೀವದ ಹಂಗು ತೊರೆದು ಮತ್ತೊಬ್ಬರ ಜೀವರಕ್ಷಣೆ ಮಾಡುವ ಸ್ಪೈಡರ್ ಮ್ಯಾನ್ ಖ್ಯಾತಿಯ ಜ್ಯೋತಿರಾಜ್‍ಗೆ ಕರ್ನಾಟಕ ಸರ್ಕಾರ ಈವರೆಗೆ ಮನೆ ಭಾಗ್ಯ ಕರುಣಿಸಿಲ್ಲ. ಸತತ ನಾಲ್ಕು ವರ್ಷಗಳಿಂದ ಆಶ್ರಯ ಯೋಜನೆಯಡಿ ಮನೆ ಕಲ್ಪಿಸುವಂತೆ ಚಿತ್ರದುರ್ಗದಲ್ಲಿ ಅರ್ಜಿ ಸಲ್ಲಿಸುತ್ತಿರುವ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್, ರಾಕ್ ಕ್ಲೈಮಿಂಗ್ ಹಾಗು ವಾಲ್ ಕ್ಲೈಮಿಂಗ್‍ನಲ್ಲಿ ಇಡೀ ವಿಶ್ವವೇ ಭಾರತದತ್ತ ನೋಡುವಂತೆ ಸಾಧಿಸಿದ್ದಾರೆ. ಆದ್ರೆ ಈ ಸಾಧಕನಿಗೆ ಸೂರು ಕಲ್ಪಿಸುವಲ್ಲಿ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಅಲ್ಲದೆ ಈ ಸಾಧಕನ ಚಾತುರ್ಯತೆ ಗಮನಿಸಿರೊ ತಮಿಳುನಾಡು […]

10 months ago

ಕಾಲು ಜಾರಿ ಮಧುಗಿರಿ ಬೆಟ್ಟದಿಂದ 600 ಅಡಿ ಪ್ರಪಾತಕ್ಕೆ ಬಿದ್ದ ವ್ಯಕ್ತಿ ಶವವನ್ನು ಹೊರ ತೆಗೆದ ಕೋತಿರಾಜ್

ತುಮಕೂರು: ಜಿಲ್ಲೆ ಮಧುಗಿರಿಯ ಏಕಶಿಲಾ ಬೆಟ್ಟದಿಂದ ಬುಧವಾರ ವ್ಯಕ್ತಿಯೊಬ್ಬ ಕಾಲು ಜಾರಿ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದ. ಆತನ ಮೃತ ದೇಹ ಮೇಲೆ ತರಲು ಸಾಹಸವೇ ನಡೆದಿದ್ದು, ಇಂದು ಮಧ್ಯಾಹ್ನ ಸ್ಪೈಡರ್ ಮ್ಯಾನ್ ಖ್ಯಾತಿಯ ಚಿತ್ರದುರ್ಗದ ಜ್ಯೋತಿರಾಜ್ ಯಶಸ್ವಿಯಾಗಿ ಶವವನ್ನು ಮೇಲೆ ತಂದಿದ್ದಾರೆ. ಮಧುಗಿರಿ ತಾಲೂಕಿನ ತುಂಗೋಟಿ ಗ್ರಾಮದ ಹನುಮಂತರಾಯ (40) ಬೆಟ್ಟದಿಂದ ಕಾಲುಜಾರಿ ಬಿದ್ದಿದ್ದ ವ್ಯಕ್ತಿ....

ನಾನು ಜೀವಂತವಾಗಿ ವಾಪಸ್ ಬರ್ತೀನೋ ಇಲ್ವೋ ಗೊತ್ತಿಲ್ಲ- ಜೋಗಕ್ಕೆ ತೆರಳುವ ಮುನ್ನ ಸೆಲ್ಫೀ ವಿಡಿಯೋ ಮಾಡಿದ್ದ ಕೋತಿರಾಜ್..

1 year ago

ಶಿವಮೊಗ್ಗ: ಜೋಗ್ ಫಾಲ್ಸ್ ನಲ್ಲಿ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಮಂಗಳವಾರದಂದು ನಾಪತ್ತೆಯಾಗಿದ್ದು, ಜೋಗಕ್ಕೆ ತೆರಳುವ ಮುನ್ನ ಸೆಲ್ಫೀ ವಿಡಿಯೋ ಮಾಡಿದ್ದರು. ಸೆಲ್ಫೀ ವಿಡಿಯೋದಲ್ಲಿ ಜ್ಯೋತಿರಾಜ್, ನಾನು ಜೀವಂತವಾಗಿ ವಾಪಸ್ ಬರುತ್ತೇನೋ ಇಲ್ವೋ ಗೊತ್ತಿಲ್ಲ. ಆದರೆ ಸಹಾಯ ಮಾಡಬೇಕು ಎನ್ನುವ ದೃಷ್ಟಿಯಲ್ಲಿ ಹೋಗುತ್ತಿದ್ದೇನೆ....