Friday, 22nd November 2019

Recent News

4 months ago

ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ

ವಿಜಯಪುರ: ಸಾಲಬಾಧೆ ತಾಳಲಾರದೆ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಾಂದಕವಟೆ ಗ್ರಾಮದಲ್ಲಿ ನಡೆದಿದೆ. ಮೃತ ರೈತನನ್ನು 45 ವರ್ಷದ ಶಿವಯೋಗಿ ಬಿರಾದಾರ್ ಎಂದು ಗುರುತಿಸಲಾಗಿದೆ. 5.29 ಎಕರೆ ಜಮೀನು ಹೊಂದಿರುವ ಶಿವಯೋಗಿ, ತನ್ನ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಯೋಗಿ ಗ್ರಾಮೀಣ ಬ್ಯಾಂಕ್‍ನಲ್ಲಿ 2 ಲಕ್ಷ ಮತ್ತು 5 ಲಕ್ಷ ಕೈಸಾಲ ಮಾಡಿದ್ದರು. ಮಳೆ ಇಲ್ಲದೆ ಬೆಳೆಗಳು ಕೈಕೊಟ್ಟಿದ್ದು, ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ […]

4 months ago

ಜಮೀನಿನ ವಿವಾದಕ್ಕೆ ಗುಂಡಿನ ಮಳೆ- ಮೂವರು ಮಹಿಳೆಯರು ಸೇರಿ 9 ಜನರ ಹತ್ಯೆ

ಲಕ್ನೋ: ಜಮೀನು ವಿಚಾರವಾಗಿ ನಡೆದ ಗಲಾಟೆಯಲ್ಲಿ ಮೂವರು ಮಹಿಳೆಯರು ಸೇರಿದಂತೆ ಒಂಬತ್ತು ಜನರನ್ನು ಗುಂಡಿಕ್ಕಿ ಕೊಲೆಗೈದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಶೋನ್‍ಭಂದ್ರಾ ಜಿಲ್ಲೆಯ ಉಭಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಮುಖ್ಯಸ್ಥನಾಗಿದ್ದ ಯಾಗ್ಯ ದತ್ ಬೆಂಬಲಿಗರು ಗುಂಡು ಹಾರಿಸಿದ್ದಾರೆ. ಗುಂಡೇಟಿಗೆ 19 ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆಗಿದ್ದೇನು?:...

ಜಮೀನಿಗಾಗಿ ಬೆಂಗ್ಳೂರಿಂದ ಪುಂಡರನ್ನ ಕರೆಸಿ ಮಹಿಳೆ ಮೇಲೆ ಹಲ್ಲೆ

5 months ago

ತುಮಕೂರು: ಜಮೀನು ವಿವಾದ ಹಿನ್ನೆಲೆಯಲ್ಲಿ ಮಹಿಳೆಯೋರ್ವಳ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನ ಆದಿನಾಯಕನಹಳ್ಳಿಯಲ್ಲಿ ಜರುಗಿದೆ. ಅರುಣ್ ಕುಮಾರ್ ಹಾಗೂ ನಾಗಬಾಯಮ್ಮ ನಡುವೆ ಜಮೀನು ವಿವಾದ ಇತ್ತು. ಹಾಗಾಗಿ ಅರುಣ್ ಕುಮಾರ್ ಬೆಂಗಳೂರಿನಿಂದ ಪುಂಡ ಯುವಕರನ್ನು ಕರೆದುಕೊಂಡು...

ಗುಮ್ಮಟ ನಗರಿಯಲ್ಲಿ ಗಂಗೆಯ ಪವಾಡ- ಬರಗಾಲದಲ್ಲೂ ಉಕ್ಕಿ ಬಂದ ಜೀವಜಲ

7 months ago

– ಸಾಮೂಹಿಕ ವಿವಾಹ ಮಾಡಿ ಹರಕೆ ತೀರಿಸಲಿರುವ ರೈತ ವಿಜಯಪುರ: ಜಿಲ್ಲೆಯಲ್ಲಿ ಬರಗಾಲ ತಾಂಡವವಾಡುತ್ತಿದೆ. ನೂರಾರು ಅಡಿಗಳವರೆಗೆ ಕೊಳವೆ ಬಾವಿ ಕೊರೆದರು ನೀರು ಸಿಗದ ಪರಿಸ್ಥಿತಿ ಇದೆ. ಆದರೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಸಮೀಪದ ಬಂಗಾರಗುಂಡ ಗ್ರಾಮದಲ್ಲಿ ಕೇವಲ 48 ಅಡಿ...

ಗ್ರಾಮಸ್ಥರಿಂದ ಬೃಹತ್ ಗಾತ್ರದ ಮೊಸಳೆ ಸೆರೆ!

7 months ago

ಬೆಳಗಾವಿ(ಚಿಕ್ಕೋಡಿ): ಆಹಾರ ಅರಸಿ ಕಬ್ಬಿನ ಗದ್ದೆಗೆ ನುಗ್ಗಿದ್ದ ಬೃಹತ್ ಗಾತ್ರದ ಮೊಸಳೆಯೊಂದನ್ನು ಅಥಣಿ ತಾಲೂಕಿನ ಹುಲಗಬಾಳ ಗ್ರಾಮಸ್ಥರು ಹಿಡಿದಿದ್ದಾರೆ. ಕೃಷ್ಣ ನದಿ ತೀರದ ಹುಲಗಬಾಳ ಗ್ರಾಮದ ಹಿರೇಮಠ ತೋಟಕ್ಕೆ ಆಹಾರ ಅರಸಿ ನುಗ್ಗಿಬಂದ ದೊಡ್ಡ ಮೊಸಳೆಯನ್ನು ಸಾರ್ವಜನಿಕರು ಹಿಡಿದು ಅರಣ್ಯ ಅಧಿಕಾರಿಗಳಿಗೆ...

ತುಂಡಾಗಿ ಬಿದ್ದಿದ್ದ ತಂತಿ ತುಳಿದು ಒಂದೇ ಕುಟುಂಬದ ನಾಲ್ವರ ದುರ್ಮರಣ

8 months ago

ಬೆಳಗಾವಿ: ಬುಧವಾರ ಸುರಿದಿದ್ದ ಮಳೆ, ಗಾಳಿಗೆ ತುಂಡಾಗಿ ಬಿದ್ದಿದ್ದ ತಂತಿ ತುಳಿದು ಒಂದೇ ಕುಟುಂಬದ ನಾಲ್ವರು ಸೇರಿ ಎರಡು ಎತ್ತುಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಕೆ.ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ. ರೇವಪ್ಪ ಕಲ್ಲೋಳಿ(35), ಪತ್ನಿ ರತ್ನವ್ವ ಕಲ್ಲೋಳಿ(30), ಮಗ...

ಆಸ್ತಿಗಾಗಿ ನಾದಿನಿಗೆ ಬೆಂಕಿ ಹಚ್ಚಿ ಕೊಲೆಗೈದ ಬಾವ

8 months ago

ಬೆಂಗಳೂರು: ನಾದಿನಿಯ ಹೆಸರಿನಲ್ಲಿ ಇದ್ದ 2 ಎಕರೆ ಜಮೀನು ಆಸೆಗಾಗಿ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಅಮಾನುಷವಾಗಿ ಸುಟ್ಟುಹಾಕಿರುವ ಘಟನೆ ಬೆಂಗಳೂರು ಹೊರವಲಯದ ಬಿಡದಿಯಲ್ಲಿ ನಡೆದಿದೆ. ಅಂಬುಜಮ್ಮ (52) ಮೃತ ದುರ್ದೈವಿಯಾಗಿದ್ದು, ರಾಮಯ್ಯ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಘಟನೆಯ...

1.5 ಎಕರೆ ಜಮೀನಿನಲ್ಲಿ 60ಕ್ಕೂ ಅಧಿಕ ಬೆಳೆಗಳನ್ನ ಬೆಳೆಯುವ ಮೂಲಕ ಮಾದರಿಯಾದ ರೈತ ಮಹಿಳೆ

9 months ago

ಕೋಲಾರ: ಮಳೆಯನ್ನೇ ಆಧರಿಸಿ ಸುಮಾರು ಒಂದುವರೆ ಎಕರೆ ಜಮೀನಿನಲ್ಲಿ ಅರವತ್ತಕ್ಕೂ ಹೆಚ್ಚು ಬೆಳೆಗಳನ್ನ ಬೆಳೆಯುವ ಮೂಲಕ ಕೋಲಾರದ ಮಹಿಳೆಯೊಬ್ಬರು ಮಾದರಿ ರೈತ ಮಹಿಳೆ ಅನ್ನಿಸಿಕೊಂಡಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ತೊಂಡಹಳ್ಳಿ ಗ್ರಾಮದ ರಾಜಮ್ಮ ಎಂಬ ರೈತ ಮಹಿಳೆ ಕಳೆದ ಅರವತ್ತು...