Monday, 20th May 2019

4 hours ago

ಭೀಕರ ಬರಗಾಲಕ್ಕೆ ಬೇಸತ್ತು ಗುಳೆ ಹೊರಟ ಬಿಸಿಲನಾಡಿನ ಜನ!

– ಇದುವರೆಗೆ 50 ಸಾವಿರಕ್ಕೂ ಹೆಚ್ಚು ಜನ ಗುಳೆ – ಉದ್ಯೋಗ ಖಾತ್ರಿ ಹೆಸ್ರಿಗೆ ಮಾತ್ರ, ಕೂಲಿ ಕೆಲಸವೇ ಇಲ್ಲ – ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಿಂದಲೇ ಗುಳೆ ರಾಯಚೂರು: ಭೀಕರ ಬರಗಾಲದಿಂದಾಗಿ ರಾಯಚೂರು ಜಿಲ್ಲೆಯಲ್ಲಿ ಶನಿವಾರ, ಭಾನುವಾರ ಬಂದರೆ ಸಾಕು ಒಂದಿಲ್ಲೊಂದು ಗ್ರಾಮ ಖಾಲಿಯಾಗುತ್ತಿದೆ. ಮಹಾನಗರಗಳತ್ತ ಜೀವನ ನಡೆಸಲು ಕೆಲಸ ಅರಸಿ ಹಳ್ಳಿ ಜನರು ಗುಳೆ ಹೋಗುತ್ತಿದ್ದಾರೆ. ಸಿಂಧನೂರು ಬಸ್ ನಿಲ್ದಾಣದಿಂದ ಶನಿವಾರ ತಡರಾತ್ರಿ ಹತ್ತಾರು ಹಳ್ಳಿಗಳ ನೂರಾರು ಜನ ದುಡಿಯಲು ಬೆಂಗಳೂರಿಗೆ ಗುಳೆ ಹೋಗಿದ್ದಾರೆ. […]

1 week ago

ಭೀಕರ ಬರಗಾಲಕ್ಕೆ ಜನ, ಜಾನುವಾರು ಕಂಗಾಲು- ದಿನ ಕಳೆದಂತೆ ಹೆಚ್ಚಾಗ್ತಿದೆ ನೀರಿಗಾಗಿ ಹಾಹಾಕಾರ

ಕೊಪ್ಪಳ: ರಾಜ್ಯದ ಉತ್ತರ ಭಾಗದಲ್ಲಿ ಭೀಕರ ಬರಗಾಲ ಎದುರಾಗಿದ್ದು, ಬರ ತಾಂಡವವಾಡುತ್ತಿದೆ. ಅಲ್ಲದೆ ನೀರಿಲ್ಲದೆ ಬರ ಒಂದು ಕಡೆಯಾದರೆ ಇನ್ನೊಂದೆಡೆ ಮೇವು ಇಲ್ಲದೆ ಜಾನುವಾರುಗಳೂ ಪರಿತಪಿಸುತ್ತಿವೆ. ಕುಷ್ಟಗಿ, ಯಲಬುರ್ಗಾ, ಕನಕಗಿರಿ ಮತ್ತು ಕೊಪ್ಪಳ ಭಾಗದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತೆ ತೆಗೆದುಕೊಂಡಿದ್ದರೂ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಸಾಕಷ್ಟು ಕಡೆ ಬೋರ್ ವೇಲ್ ಕೊರೆಸಿದ್ದಾರೆ....

ಅರ್ಧ ಗಂಟೆಯಲ್ಲಿ ಬೆಂಕಿಯಿಂದ 14 ಜನರ ಪ್ರಾಣ ಉಳಿಸಿದ ಯುವಕ – ವಿಡಿಯೋ ವೈರಲ್

1 week ago

ಬೀಜಿಂಗ್: 19 ವರ್ಷದ ಯುವಕನೊಬ್ಬ ಕ್ರೇನ್ ಸಹಾಯದಿಂದ ಅರ್ಧ ಗಂಟೆಯಲ್ಲಿ 14 ಮಂದಿ ಜನರ ಪ್ರಾಣವನ್ನು ಕಾಪಾಡಿರುವ ಘಟನೆ ಚೀನಾದ ಫೂಶುನ್ ನಗರದಲ್ಲಿ ನಡೆದಿದೆ. ಯುವಕ ಲ್ಯಾನ್ ಜುನ್ಸ್ ಜನರನ್ನು ಕಾಪಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ ಆಗುತ್ತಿದೆ....

ಸಿಎಂ ವಿಶ್ರಾಂತಿ ಪಡೆಯಲಿರುವ ರೆಸಾರ್ಟ್ ವಿಶೇಷತೆ ಏನು? 1 ದಿನದ ಬಾಡಿಗೆ ಎಷ್ಟು?

1 week ago

ಬೆಂಗಳೂರು: ರಾಜ್ಯದಲ್ಲಿ ಭೀಕರ ಬರಗಾಲ ಇದ್ದು, ಎಲ್ಲೆಡೆ ಜನರು ನೀರಿಗಾಗಿ ಹಾಹಕಾರ ಕೇಳಿಬರುತ್ತಿದೆ. ಆದರೆ ಸಿಎಂ ಕುಮಾರಸ್ವಾಮಿ ಮಾತ್ರ ರೆಸಾರ್ಟ್‍ನಲ್ಲಿ ಕಾಲ ಕಳೆಯಲು ಮುಂದಾಗಿದ್ದಾರೆ. ಕಾಪು ರೆಸಾರ್ಟ್, ಟೆಂಪಲ್ ರನ್ ಬಳಿಕ ಸಿಎಂ ಮತ್ತೆ ರೆಸಾರ್ಟ್ ನತ್ತ ಮುಖ ಮಾಡಿದ್ದಾರೆ. ಮಡಿಕೇರಿ...

ಖಚಿತ ಮಾಹಿತಿ ನೀಡಿ 10 ಲಕ್ಷ ಮಂದಿಯನ್ನು ರಕ್ಷಿಸಿದ್ದ ಭಾರತೀಯ ಹವಾಮಾನ ಇಲಾಖೆಗೆ ವಿಶ್ವಸಂಸ್ಥೆ ಶ್ಲಾಘನೆ

2 weeks ago

ನವದೆಹಲಿ: ಭಾರತದ ಪೂರ್ವ ಕರಾವಳಿಗೆ ಅಪ್ಪಳಿಸಿದ ಫೋನಿ ಚಂಡಮಾರುತದ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ 10 ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಿಸುವ ಮೂಲಕ ಸಾವು ನೋವಿನ ಪ್ರಮಾಣವನ್ನು ಕನಿಷ್ಟ ಮಟ್ಟಕ್ಕೆ ಇಳಿಸಿದ ಭಾರತದ ಕಾರ್ಯ ವೈಖರಿಗೆ ವಿಶ್ವಸಂಸ್ಥೆ ಹಾಗೂ ವಿವಿಧ ರಂಗದ...

ಒಂದೆಡೆ ಉಪಚುನಾವಣೆ ಇನ್ನೊಂದೆಡೆ ಹನಿ ನೀರಿಗಾಗಿ ನರಕಯಾತನೆ!

2 weeks ago

ಕಲಬುರಗಿ: ಜಿಲ್ಲೆಯ ಚಿಂಚೋಳಿಯಲ್ಲಿ ಒಂದೆಡೆ ಉಪಚುನಾವಣೆಯ ಕಾವು ಏರುತ್ತಿದ್ದರೆ, ಇತ್ತ ಅದೇ ಕ್ಷೇತ್ರದ ರುಮ್ಮನಗುಡ ತಾಂಡಾದ ಜನ ಹನಿ ನೀರಿಗಾಗಿ ನರಕಯಾತನೆ ಪಡುತ್ತಿದ್ದಾರೆ. ಹೌದು. ಚಿಂಚೋಳಿಯಲ್ಲಿ ಉಪಚುನಾವಣೆಯ ಕಾವು ಹೆಚ್ಚಾಗುವುದರ ಮಧ್ಯೆ ಬಿಸಿಲ ಕಾವು ಕೂಡ ಜೋರಾಗಿಯೇ ಇದೆ. ಆದ್ದರಿಂದ ಈ...

ಐದು ನಿಮಿಷ ಬೀಸಿದ ಬಿರುಗಾಳಿಗೆ ಉಡುಪಿ ಅಲ್ಲೋಲ ಕಲ್ಲೋಲ – ವಿಡಿಯೋ ನೋಡಿ

4 weeks ago

ಉಡುಪಿ: ಜಿಲ್ಲೆಯಲ್ಲಿ 5 ನಿಮಿಷ ಬೀಸಿದ ಭಾರೀ ಗಾಳಿ ಎಲ್ಲರನ್ನೂ ತಬ್ಬಿಬ್ಬು ಮಾಡಿದೆ. ಎರಡು ದಿನಗಳ ಹಿಂದೆ ಮಳೆಗೂ ಮುನ್ನ ಬಂದ ಬಿರುಗಾಳಿ ಜನ ಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿರುವ ವಿಡಿಯೋ ನೋಡಿದರೆ ಒಂದು ಕ್ಷಣ ಎದೆ ಝಲ್ ಎನಿಸುತ್ತದೆ. ಏಕಾಏಕಿ...

ಡೀಸೆಲ್ ಟ್ಯಾಂಕರ್ ಪಲ್ಟಿ- ಮುಗಿಬಿದ್ದು ಡೀಸೆಲ್ ಹೊತ್ತೊಯ್ದ ಜನ

1 month ago

ಚಿತ್ರದುರ್ಗ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಡೀಸೆಲ್ ಟ್ಯಾಂಕರ್ ಪಲ್ಟಿಯಾಗಿದ್ದು, ಅದರಿಂದ ಸೋರಿಕೆಯಾಗುತ್ತಿದ್ದ ಡೀಸೆಲ್‍ಗಾಗಿ ಜನರು ಮುಗಿಬಿದ್ದಿದ್ದ ದೃಶ್ಯ ಜಿಲ್ಲೆಯ ಹೊಸದುರ್ಗ ತಾಲೂಕಿನ ಬೆಲಗೂರು ಗ್ರಾಮ ಬಳಿ ಕಂಡುಬಂದಿದೆ. ಇಂದು ಬೆಲಗೂರು ಬಳಿಕ ಡೀಸೆಲ್ ಟ್ಯಾಂಕರ್ ಪಲ್ಟಿಯಾಗಿತ್ತು. ಈ ವೇಳೆ...