Tuesday, 18th June 2019

Recent News

1 week ago

ಆಟವಾಡುತ್ತಾ ಗೆಳೆಯನ ತಲೆಗೇ ಚಾಕು ಇರಿದ- ಚರ್ಮ ಸೀಳ್ತಿದ್ದಂತೆ ಪರಾರಿ

ಬೆಂಗಳೂರು: ಸ್ನೇಹಿತರೆಲ್ಲರೂ ಕುಳಿತು ಮೊಬೈಲಿನಲ್ಲಿ ಗೇಮ್ ಆಡುತ್ತಿದ್ದಾಗ ಜಗಳ ಶುರುವಾಗಿದ್ದು, ಕೊನೆಗೆ ಗೆಳೆಯನನ್ನೇ ಕೊಲೆ ಮಾಡುವ ಮೂಲಕ ಅಂತ್ಯವಾದ ಘಟನೆ ನಗರದಲ್ಲಿ ನಡೆದಿದೆ. ಷೇಕ್ ಮಿಲನ್(32) ಕೊಲೆಯಾದವ. ಈತ ಕುಮಾರಸ್ವಾಮಿ ಲೇಔಟ್‍ನ ಇಲಿಯಾಸ್‍ನಗರದಲ್ಲಿ ಪತ್ನಿ ಜೊತೆ ವಾಸವಾಗಿದ್ದನು. ಖಾಸಗಿ ಫುಡ್ ಆಪ್‍ನಲ್ಲಿ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದನು. ಈತ ಶುಕ್ರವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದು ಊಟ ಮುಗಿಸಿ ಹೊರಗೆ ಬಂದು ಒಂದು ಜಾಗದಲ್ಲಿ ಕುಳಿತಿದ್ದನು. ಮಿಲನ್ ದಿನನಿತ್ಯ ಬಂದು ಸ್ನೇಹಿತರೊಟ್ಟಿಗೆ ಕೂರೋ ಜಾಗ ಇದಾಗಿದ್ದು, […]

3 months ago

ಪಬ್‍ಜಿ ಗೇಮ್ ಆಡುತ್ತಿದ್ದ 10 ಮಂದಿ ವಿದ್ಯಾರ್ಥಿಗಳ ಬಂಧನ

ಅಹಮದಾಬಾದ್: ವಿಶ್ವದಲ್ಲಿ ಅತಿ ಹೆಚ್ಚು ಕ್ರೇಜ್ ಹುಟ್ಟು ಹಾಕಿರುವ ಪಬ್‍ಜಿ ಗೇಮ್ ಆಡುತ್ತಿದ್ದ 10 ಮಂದಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳನ್ನು ಗುಜರಾತ್‍ನ ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ. ಗುಜರಾತ್‍ನ ಸೂರತ್ ಮತ್ತು ರಾಜ್‍ಕೋಟ್‍ನಲ್ಲಿ ನಿಷೇಧಿತ ಪಬ್‍ಜಿ ಗೇಮ್ ಆಡುತ್ತಿದ್ದ ಕಾರಣ ಯುವಕರ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಪಬ್‍ಜಿ ಗೇಮ್ ಯುವ ಜನಾಂಗದ...

ಆನ್‍ಲೈನ್ ಗೇಮ್ ಚಟಕ್ಕೆ ಬಿದ್ದು ಪೋಷಕರನ್ನೇ ಕೊಲೆಗೈದ ಮಗ!

8 months ago

ನವದೆಹಲಿ: 19 ವರ್ಷದ ಯುವಕನೊಬ್ಬ ಆನ್‍ಲೈನ್ ಗೇಮ್ ಚಟಕ್ಕೆ ಬಿದ್ದು ತನ್ನ ಪೋಷಕರು ಮತ್ತು ಸೋದರಿಯನ್ನು ಕೊಲೆ ಮಾಡಿರುವ ಘಟನೆ ಮೆಹ್ರಾಲಿಯಲ್ಲಿ ನಡೆದಿದೆ. ಸುರಾಜ್ ಅಲಿಯಾಸ್ ಸರ್ನಮ್ ವರ್ಮಾ ಹೆತ್ತವರನ್ನೇ ಕೊಲೆ ಮಾಡಿದ ಆರೋಪಿ. ತಂದೆ ಮಿಥಿಲೇಶ್, ತಾಯಿ ಸಿಯಾ ಮತ್ತು...

ಬ್ಲೂವೇಲ್‍ ಆಟಕ್ಕೆ ಬಲಿಯಾದ 12ರ ಬಾಲಕ!

8 months ago

ಕಲಬುರಗಿ: ನೇಣು ಬಿಗಿದುಕೊಂಡು 12 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ನಗರದ ಮಹಲಕ್ಷ್ಮಿ ಲೇಔಟ್ ನಲ್ಲಿ ನಡೆದಿದೆ. ಸಮರ್ಥ್(12) ಬ್ಲೂವೇಲ್‍ಗೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡ ಬಾಲಕ. ಸಮರ್ಥ್ ಬ್ಲೂವೇಲ್ ಗೇಮ್‍ನ ಟಾಸ್ಕ್ ಗೆ ಬಲಿಯಾಗಿದ್ದಾನೆ ಎಂದು ಶಂಕಿಸಲಾಗಿದೆ. ಸಮರ್ಥ್...

ಮೊಬೈಲ್‍ನಲ್ಲಿ ಗೇಮ್ ಆಡಲು ಬಿಡ್ಲಿಲ್ಲವೆಂದು ಆತ್ಮಹತ್ಯೆಗೆ ಯತ್ನಿಸಿದ ಬಾಲಕ

2 years ago

ಮುಂಬೈ: ತನ್ನ ತಂದೆ ಮೊಬೈಲ್‍ನಲ್ಲಿ ಗೇಮ್ ಆಡಲು ಬಿಡಲಿಲ್ಲವೆಂದು 14 ವರ್ಷದ ಬಾಲಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮುಂಬೈನಲ್ಲಿ ನೆಡೆದಿದೆ. ಜುಲೈ 27ರಂದು ಸಂಜೆ ಸುಮಾರು 6.30ರ ವೇಳೆ ಪರೇಲ್ ರೈಲ್ವೆ ನಿಲ್ದಾಣದಲ್ಲಿ ಬಾಲಕನೊಬ್ಬ ರೈಲಿನ ಮುಂದೆ ನಡೆದುಕೊಂಡು ಹೋಗುತ್ತಿದ್ದುದನ್ನು ಕರ್ತವ್ಯದಲ್ಲಿದ್ದ...

ಸಿಎಂ ಕಾರ್ಯಕ್ರಮದಲ್ಲಿ ಕ್ಯಾಂಡಿ ಕ್ರಶ್ ಆಡಿದ್ದಕ್ಕೆ 3 ಐಪಿಎಸ್ ಅಧಿಕಾರಿಗಳಿಗೆ ನೋಟಿಸ್

2 years ago

ಪಾಟ್ನಾ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಮಾದಕದ್ರವ್ಯಗಳ ಕಳ್ಳಸಾಗಣೆ ಬಗ್ಗೆ ನಡೆಯುತ್ತಿದ್ದ ಕಾರ್ಯಕ್ರಮದ ವೇಳೆ ಇಬ್ಬರು ಐಪಿಎಸ್ ಅಧಿಕಾರಿಗಳು ಫೋನ್‍ನಲ್ಲಿ ಕ್ಯಾಂಡಿ ಕ್ರಶ್ ಗೇಮ್ ಆಡಿದ್ದು, ಮತ್ತೊಬ್ಬರು ವಾಟ್ಸಪ್ ನೋಡುತ್ತಿದ್ದ ಕಾರಣ ಅವರಿಗೀಗ ನೋಟಿಸ್ ನೀಡಲಾಗಿದೆ. ಜೂನ್ 26ರಂದು ಬಿಹಾರದಲ್ಲಿ ಮಾದಕದ್ರವ್ಯಗಳ ಕಳ್ಳಸಗಣೆ...