Thursday, 19th September 2019

Recent News

1 week ago

ರಾಜ್ ಕುಮಾರ್ ಭಾರತೀಯ ಚಿತ್ರರಂಗದ ಚಕ್ರವರ್ತಿ: ಅನಿಲ್ ಕಪೂರ್

ಬೆಂಗಳೂರು: ವರನಟ ಡಾ.ರಾಜ್ ಕುಮಾರ್ ಅವರು ಭಾರತೀಯ ಚಿತ್ರರಂಗದ ಚಕ್ರವರ್ತಿ ಎಂದು ಬಾಲಿವುಡ್ ನಟ ಅನಿಲ್ ಕಪೂರ್ ಹೇಳಿದ್ದಾರೆ. ಬಸವನಗುಡಿಯ ಗಣೇಶೋತ್ಸವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಅವರು, ಕನ್ನಡ ಚಿತ್ರರಂಗ ಕಂಡ ಮೇರು ನಟ ಡಾ. ರಾಜ್ ಕುಮಾರ್ ಅವರನ್ನು ಹಾಡಿಹೊಗಳಿದ್ದಾರೆ. ರಾಜ್ ಕುಮಾರ್ ಅವರು ಕನ್ನಡಕ್ಕೆ ಮಾತ್ರ ಅಲ್ಲ ಇಡೀ ಭಾರತೀಯ ಚಿತ್ರರಂಗದ ಹೆಮ್ಮೆ ಎಂದು ಶ್ಲಾಘಿಸಿದರು. ರಾಜ್ ಕುಮಾರ್ ಅವರು ಕೇವಲ ರಾಜ್ ಕುಮಾರ್ ಅಲ್ಲ ಅವರು ಚಕ್ರವರ್ತಿ ರಾಜ್ ಕುಮಾರ್, ಭಾರತೀಯ ಚಿತ್ರರಂಗದ […]

1 week ago

ಗಣಪತಿ ಕೂರಿಸಲು 500 ರೂ. ಒಂದು ಫುಲ್ ಬಾಟಲ್ ಕೊಡ್ಬೇಕು: ಪೊಲೀಸಪ್ಪನ ಬೇಡಿಕೆ

ಮಡಿಕೇರಿ: ನಿನ್ನೆಯಷ್ಟೇ ಗಣೇಶ ಮೂರ್ತಿ ವಿಸರ್ಜನೆ ವೇಳೆ ಡಿಜೆ ಹಾಡಿಗೆ ಸ್ಟೆಪ್ ಹಾಕಿದ್ದ ಹೆಡ್ ಕಾನ್‍ಸ್ಟೇಬಲ್ ಮದ್ಯಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಅವರದ್ದೇ ಎನ್ನಲಾಗಿರುವ ಆಡಿಯೋ ಈಗ ವೈರಲ್ ಆಗಿದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನನಗೆ 500 ರೂ. ಹಾಗೂ ಒಂದು ಫುಲ್ ಬಾಟಲ್ ಎಣ್ಣೆ ಕೊಡಬೇಕು ಎಂದು ಮೊಬೈಲ್‍ನಲ್ಲಿ ಸ್ಥಳೀಯ ಯುವಕರೊಂದಿಗೆ ಮಾತನಾಡಿದ್ದಾರೆ ಎನ್ನುವ...

ಗಣೇಶ ಪೂಜೆ ವೇಳೆ ಮುಖ್ಯ ಶಿಕ್ಷಕನಿಂದ ವಿದ್ಯಾರ್ಥಿನಿಗೆ ಕಿರುಕುಳ

2 weeks ago

ಭುವನೇಶ್ವರ: ಶಾಲೆಯಲ್ಲಿ ಗಣೇಶ ಪೂಜೆ ನಡೆಯುತ್ತಿರುವ ಸಂದರ್ಭದಲ್ಲಿ 8ನೇ ತರಗತಿ ವಿದ್ಯಾರ್ಥಿನಿಗೆ ಶಾಲೆಯ ಮುಖ್ಯ ಶಿಕ್ಷಕ ಕಿರುಕುಳ ನೀಡಿರುವ ಘಟನೆ ಓಡಿಶಾದಲ್ಲಿ ನಡೆದಿದೆ. ಪರಾರಿಯಾಗಿರುವ ಆರೋಪಿ ಮುಖ್ಯ ಶಿಕ್ಷಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಪತ್ತೆಗಾಗಿ ಪೊಲೀಸರು ಬಲೆ...

ಚಂದ್ರಯಾನ ವಿಶೇಷ – ಗಣೇಶನಾದ ಇಸ್ರೋ ಅಧ್ಯಕ್ಷ ಕೆ. ಶಿವನ್

2 weeks ago

ಬೆಂಗಳೂರು: ನಾಡಿನೆಲ್ಲೆಡೆ ವಿಘ್ನ ವಿನಾಶಕ ವಿಘ್ನೇಶ್ವರನ ಆರಾಧನೆ ಜೋರಾಗಿ ನಡೆಯುತ್ತಿದೆ. ನಗರದಲ್ಲಿ ಒಂದಕ್ಕಿಂತ ಒಂದು ವಿಶೇಷ, ವಿಭಿನ್ನವಾದ ಗಣೇಶಗಳು ಕಣ್ಮನ ಸೆಳೆಯುತ್ತಿವೆ. ಅದರಲ್ಲೂ ಬೆಂಗಳೂರಿನ ಕಬ್ಬನ್ ಪೇಟೆಯ ಲಕ್ಕಿ ಬಾಯ್ಸ್ ಗಣೇಶೋತ್ಸವ ಮಂಡಳಿ ವತಿಯಿಂದ ವಿಶೇಷವಾದ ವಿನಾಯಕನನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇಸ್ರೋದ...

ಹುಲಿವೇಷಧಾರಿಗಳ ಟೆಂಪೋ ಪಲ್ಟಿ – ಓರ್ವ ಸಾವು, ಮೂವರಿಗೆ ಗಾಯ

2 weeks ago

ಉಡುಪಿ: ಹುಲಿವೇಷಧಾರಿಗಳ ಟೆಂಪೋ ಪಲ್ಟಿಯಾಗಿ ಓರ್ವ ವೇಷಧಾರಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಉಡುಪಿ ಸಂತೆಕಟ್ಟೆ ಸಮೀಪದ ನೇಜಾರಿನಲ್ಲಿ ನಡೆದಿದೆ. ಘಟನೆಯಲ್ಲಿ ಸಾವನ್ನಪ್ಪಿದ ಹುಲಿವೇಷಧಾರಿಯನ್ನು 22 ವರ್ಷದ ಸುಮಂತ್ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡ ಮೂವರು ವೇಷಧಾರಿಗಳನ್ನು ಹತ್ತಿರದ ಮಣಿಪಾಲ ಕೆಎಂಸಿ...

ಕುಡಿದ ಮತ್ತಲ್ಲಿ ಗಣೇಶನ ಮೂರ್ತಿ ಧ್ವಂಸ – ಪ್ರಶ್ನಿಸಿದವರಿಗೆ ಅವಾಜ್

2 weeks ago

ಹಾಸನ: ಕುಡಿದ ಮತ್ತಿನಲ್ಲಿ ಇಬ್ಬರು ಯುವಕರು ಪ್ರತಿಷ್ಠಾಪನೆ ಮಾಡಿದ್ದ ಗಣಪತಿಯ ಮೂರ್ತಿಯನ್ನು ಧ್ವಂಸಗೊಳಿಸಿ ದುಷ್ಟತನ ಮೆರೆದಿದ್ದಾರೆ. ಜಿಲ್ಲೆಯ ಆಲೂರು ತಾಲೂಕು ಕಳ್ಳಿಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳ್ಳಿಕೊಪ್ಪಲು ಗ್ರಾಮದ ನಿವಾಸಿಗಳಾದ ಹರೀಶ ಮತ್ತು ಸಚಿನ್ ಈ ಕೃತ್ಯವೆಸೆಗಿದ್ದಾರೆ. ತಮ್ಮ ಇಚ್ಛೆಗೆ...

ಗಣೇಶ ಹಬ್ಬದಿಂದ ದೂರ ಉಳಿದ ರಾಯಚೂರು ಗ್ರಾಮಸ್ಥರು

2 weeks ago

ರಾಯಚೂರು: ದೇಶಾದ್ಯಂತ ಈಗ ವಿಘ್ನನಿವಾರಕ ಗಣೇಶನದ್ದೇ ಹವಾ, ಎಲ್ಲಿ ನೋಡಿದ್ರೂ ಗಣೇಶನ ಪ್ರತಿಷ್ಠಾಪನೆ, ವಿಸರ್ಜನೆಯದ್ದೇ ಸಂಭ್ರಮ. ಆದರೆ ವರುಣನ ಕೋಪಕ್ಕೆ ತುಂಬಿ ಹರಿದ ಕೃಷ್ಣೆಯ ಪ್ರವಾಹದಿಂದ ಸಂತ್ರಸ್ತರಾದ ನೆರೆಪೀಡಿತ ಜನ ಗಣೇಶ ಹಬ್ಬವನ್ನು ಆಚರಿಸುವ ಸ್ಥಿತಿಯಲ್ಲಿಲ್ಲ. ರಾಯಚೂರಿನ ಗುರ್ಜಾಪುರ ಗ್ರಾಮಸ್ಥರು ಮನೆಮಠ...

ಹಿಂದೂ ಮುಸ್ಲಿಂ ಗೆಳೆಯರಿಂದ ಅದ್ಧೂರಿಯಾಗಿ ಗಣೇಶ ಪ್ರತಿಷ್ಠಾಪನೆ

2 weeks ago

ದಾವಣಗೆರೆ: ಇಂದು ದೇಶದೆಲ್ಲಡೆ ಗಣೇಶ ಪ್ರತಿಷ್ಠಾಪನೆ ಮಾಡಿ ಅದ್ಧೂರಿಯಾಗಿ ಪೂಜೆ ಮಾಡುತ್ತಿದ್ದು, ಆದರಲ್ಲೂ ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಹಿಂದೂ ಮುಸ್ಲಿಂ ಭಾಂದವರು ಕೂಡಿ ಭಾವೈಕ್ಯತೆಯಿಂದ ಗಣೇಶ ಪ್ರತಿಷ್ಠಾಪನೆ ಮಾಡಿದ್ದಾರೆ. ದಾವಣಗೆರೆಯ ವಿನೋಭಾನಗರದ 7ನೇ ಕ್ರಾಸ್ ನಲ್ಲಿ ಹ್ಯಾಪಿ ಫ್ರೆಂಡ್ಸ್ ಗ್ರೂಪ್ ವತಿಯಿಂದ...