Tuesday, 25th February 2020

Recent News

1 month ago

ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಬಂದ ಗಣೇಶ

– ಹೆಲ್ಮೆಟ್ ಧರಿಸಿ, ಜೀವ ಉಳಿಸಿಕೊಳ್ಳಲು ಮನವಿ ಹಾವೇರಿ: ಜಿಲ್ಲೆಯಲ್ಲಿ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹವನ್ನ ಗಣೇಶ ವೇಷಧಾರಿ ಮೂಲಕ ಬೈಕ್ ಸವಾರರಿಗೆ ಗುಲಾಬಿ ಹೂ ನೀಡುವ ಮೂಲಕ ಜಾಗೃತಿ ಮೂಡಿಸಿದರು. ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಹಾವೇರಿ ಸಂಚಾರಿ ಠಾಣೆಯ ಸಿಬ್ಬಂದಿ ಆಯೋಜನೆ ಮಾಡಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಎಸ್‍ಪಿ ದೇವರಾಜ್ ಚಾಲನೆ ನೀಡಿದರು. ಬೈಕ್ ಸವಾರರನ್ನ ನಿಲ್ಲಿಸಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಕೊಂಡು ಬೈಕ್ ಚಾಲನೆ ಮಾಡಿ ಜೀವ ಉಳಿಸಿಕೊಳ್ಳಿ. 50 ಸಾವಿರ […]

3 months ago

ಬಯಲು ಉದ್ಭವ ವಿನಾಯಕನಿಗೆ ಕಲ್ಯಾಣೋತ್ಸವ – ಸಿದ್ಧಿಬುದ್ದಿ ಜೊತೆ ಗಣೇಶನಿಗೆ ಕಲ್ಯಾಣ

ಬೆಂಗಳೂರು: ನೆಲಮಂಗಲ ಪಟ್ಟಣ ಹೊನ್ನಗಂಗಯ್ಯನಪಾಳ್ಯದಲ್ಲಿರುವ ಪುರಾತನ ಬಯಲು ಉದ್ಭವ ಗಣಪತಿ ದೇವಾಲಯಲ್ಲಿ ಗಣೇಶನ ಮದುವೆ ನಡೆಯಿತು. ನೂರಾರು ವರ್ಷದ ಇತಿಹಾಸವಿರುವ ಈ ಬಯಲು ಗಣೇಶನ ದೇವಾಲಯಲ್ಲಿ ಸನಾತನ ಕಾಲದಿಂದಲು ಈ ಕಲ್ಯಾಣೋತ್ಸವ ನಡೆಯಿತು. ದೇವತಾ ಕನ್ಯೆಯರಾದ ಸಿದ್ಧಿಬುದ್ದಿ ಜೊತೆ ವಿಜೃಂಭಣೆಯಿಂದ ವಿವಾಹಮಹೋತ್ಸವ ನಡೆಯುತ್ತಿದೆ. ಸಾವಿರಾರು ಜನಭಕ್ತಾಧಿಗಳು ಸರತಿಸಾಲಿನಲ್ಲಿ ನಿಂತು ಸಿದ್ಧಿಬುದ್ದಿ ವಿನಾಯಕನ ಕಲ್ಯಾಣೋತ್ಸವವನ್ನು ನೋಡಿ ಕಣ್ತುಂಬಿಕೊಂಡರು....

ಗಣೇಶ ಹಬ್ಬದಿಂದ ದೂರ ಉಳಿದ ರಾಯಚೂರು ಗ್ರಾಮಸ್ಥರು

6 months ago

ರಾಯಚೂರು: ದೇಶಾದ್ಯಂತ ಈಗ ವಿಘ್ನನಿವಾರಕ ಗಣೇಶನದ್ದೇ ಹವಾ, ಎಲ್ಲಿ ನೋಡಿದ್ರೂ ಗಣೇಶನ ಪ್ರತಿಷ್ಠಾಪನೆ, ವಿಸರ್ಜನೆಯದ್ದೇ ಸಂಭ್ರಮ. ಆದರೆ ವರುಣನ ಕೋಪಕ್ಕೆ ತುಂಬಿ ಹರಿದ ಕೃಷ್ಣೆಯ ಪ್ರವಾಹದಿಂದ ಸಂತ್ರಸ್ತರಾದ ನೆರೆಪೀಡಿತ ಜನ ಗಣೇಶ ಹಬ್ಬವನ್ನು ಆಚರಿಸುವ ಸ್ಥಿತಿಯಲ್ಲಿಲ್ಲ. ರಾಯಚೂರಿನ ಗುರ್ಜಾಪುರ ಗ್ರಾಮಸ್ಥರು ಮನೆಮಠ...

21 ದೇಶಗಳ ನೋಟಿನ ಯಥಾಪ್ರತಿ ಬಳಸಿಕೊಂಡು ಗಣೇಶಮೂರ್ತಿ ನಿರ್ಮಾಣ

6 months ago

ಉಡುಪಿ: ಭಾರತ ಸೇರಿದಂತೆ ಸುಮಾರು 21 ದೇಶಗಳ ನೋಟಿನ ಯಥಾಪ್ರತಿಯನ್ನು ಬಳಸಿಕೊಂಡು ಉಡುಪಿಯಲ್ಲಿ ಗಣೇಶಮೂರ್ತಿಯನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿನ ಸ್ಯಾಂಡ್ ಆರ್ಟ್ ಕಲಾವಿದರು ರಚಿಸಿದ ನೋಟ್ ಗಣಪ ಎಲ್ಲರ ಆಕರ್ಷಣೆಗೆ ಪಾತ್ರನಾಗಿದ್ದಾನೆ. ಭಾರತವೂ ಸೇರಿದಂತೆ ಸುಮಾರು 21 ದೇಶಗಳ ನೋಟಿನ ಯಥಾಪ್ರತಿಯನ್ನು...

ನಗರದ ಹಲವು ಕೆರೆಗಳಲ್ಲಿ ಕಲ್ಯಾಣಿ ವ್ಯವಸ್ಥೆ -ಪಿಓಪಿ ಗಣೇಶ ಬಂದ್ರೆ ವಿಸರ್ಜನೆಗೆ ಅವಕಾಶ ಇಲ್ಲ

6 months ago

ಬೆಂಗಳೂರು: ರಾಜ್ಯಾದ್ಯಂತ ಗೌರಿ- ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಮಾರುಕಟ್ಟೆಗಳಲ್ಲಿ ಭಾನುವಾರ ಗಣಪತಿ ಮೂರ್ತಿ, ಹೂ-ಹಣ್ಣಿನ ಖರೀದಿ ಜೋರಾಗಿದ್ದು, ಇಂದು ಮುಂಜಾನೆಯಿಂದಲೇ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಗಣೇಶ ಮೂರ್ತಿ ವಿಸರ್ಜನೆಗಾಗಿ ಬಿಬಿಎಂಪಿ ವತಿಯಿಂದ ನಗರದ ಹಲವು ಕೆರೆಗಳಲ್ಲಿ ಕಲ್ಯಾಣಿ...

ಪೂಜೆಗೂ ಮುನ್ನ ವಿಸರ್ಜನೆಗೊಂಡ ಗಣಪ

6 months ago

ಬೆಳಗಾವಿ: ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಪೂಜೆಗೂ ಮುನ್ನ ಗಣಪತಿ ವಿಸರ್ಜನೆಗೊಂಡಿದ್ದು, ನೂರಾರು ಜನರ ಬದುಕು ಬೀದಿಗೆ ಬಿದ್ದಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಗಣಪತಿ ಹಬ್ಬ ಬಂದರೆ ರಾಜ್ಯ ಹೊರ ರಾಜ್ಯದ ಜನರು ಇಲ್ಲಿಗೆ ಬಂದು...

ಚೌತಿ ದಿನ ಚಂದ್ರನನ್ನು ನೋಡಿದ್ದಕ್ಕೆ ‘ಕಳ್ಳ’ನಾದ ಕೃಷ್ಣ

6 months ago

ಪ್ರತಿ ತಿಂಗಳು ಹಿಂದೂಗಳು ಕೃಷ್ಣ ಚತುರ್ಥಿಯಂದು ಸಂಕಷ್ಟ ಆಚರಿಸುತ್ತಾರೆ. ಅಂದು ಉಪವಾಸ ವ್ರತ ಆಚರಿಸುತ್ತಾರೆ. ಸಂಕಷ್ಟ ಹರ ಚತುರ್ಥಿಯ ವಿಶೇಷತೆಗಳೇನು ಎಂಬುದರ ಕುರಿತಾದ ಕಿರು ಮಾಹಿತಿ ಇಲ್ಲಿದೆ. ಬಹಳ ಹಿಂದೆ ಯಾದವ ಕುಲದಲ್ಲಿ ಸತ್ರಾರ್ಜಿತ ಎಂಬ ರಾಜನಿದ್ದನು. ಸತ್ರಾರ್ಜಿತ ನೂರು ವರ್ಷ...

ಶಾಲೆಯ ಛಾವಣಿ ಕಿತ್ತುಹಾಕಿ ಗಣೇಶನ ಮೂರ್ತಿಯನ್ನು ಬೀದಿಗೆ ತಂದ ಎಂಜಿನಿಯರ್!

1 year ago

ದಾವಣಗೆರೆ: ಶಾಲೆಯಲ್ಲಿ ಗಣೇಶ ಮೂತಿಯನ್ನು ಪ್ರತಿಷ್ಠಾಪನೆ ಮಾಡಿದ್ದೇವೆ ಎಂದು ಕೇಳದ, ಎಂಜಿನಿಯರ್ ಅಧಿಕಾರಿಯೊಬ್ಬರು ಶಾಲೆಯ ಛಾವಣಿಯನ್ನು ತೆಗೆಸಿದ ಘಟನೆ ಹರಪನಹಳ್ಳಿ ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ. ಎಂಜಿನಿಯರ್ ಮಹಾಂತೇಶ್ ಹಾಗೂ ಕಾರ್ಮಿಕ ನವಾಜ್ ಶಾಲೆಯ ಛಾವಣಿ ತೆಗೆಸಿ ಹಾಕಿದವರು. ಗುರುವಾರ ಬೆಳಗ್ಗೆ...