Tuesday, 19th March 2019

2 days ago

ಸಂಸದ ಮುನಿಯಪ್ಪ ವಿರುದ್ಧ ಎದ್ದಿದೆ ಬೃಹತ್ ಆಂದೋಲನ

ಕೋಲಾರ: ಕೋಲಾರ ಸಂಸದ ಕೆ.ಎಚ್.ಮುನಿಯಪ್ಪ ವಿರುದ್ಧ ಬೃಹತ್ ಆಂದೋಲನಗಳೇ ಶುರುವಾಗಿದೆ. ಒಂದು ಕಡೆ ಟಿಕೆಟ್ ತಪ್ಪಿಸಲು ಸ್ವಪಕ್ಷೀಯರೇ ಹೈಕಮಾಂಡ್‍ಗೆ ಒತ್ತಡ ಹಾಕುತ್ತಿದ್ರೆ, ಸರ್ಕಾರಿ ಭೂಮಿ ಕಬಳಿಕೆ ಹಾಗೂ ಬೇನಾಮಿ ಉರುಳು ಸುತ್ತಿಕೊಂಡಿದೆ. ಮತ್ತೆ ಕೆ.ಎಚ್.ಹಠಾವೋ ಕೋಲಾರ ಬಚಾವೋ ಆಂದೋಲನ ಜೀವ ಪಡೆದುಕೊಂಡಿದೆ. ಈಗಾಗಲೇ ಶತಾಯಗತಾಯ ಸಂಸದ ಮುನಿಯಪ್ಪಗೆ ಟಿಕೆಟ್ ನೀಡಬಾರದೆಂದು ಸ್ವಪಕ್ಷೀಯರೇ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಕಳೆದ ಅಕ್ಟೋಬರ್ ನಿಂದಲೆ ಕೆ.ಎಚ್.ಹಠಾವೋ ಆಂದೋಲನ ಶುರುವಾಗಿದೆ. ಈ ಮಧ್ಯೆ ಮೀಸಲಾತಿ ಬಳಸಿಕೊಂಡು ಕೋಲಾರ ಸಂಸದ ಕೆ.ಎಚ್.ಮುನಿಯಪ್ಪ ಕೋಟ್ಯಂತರ ರೂಪಾಯಿ ಸರ್ಕಾರಿ […]

2 months ago

ವೇದಿಕೆಯಲ್ಲೇ ಖರ್ಗೆ, ಮುನಿಯಪ್ಪ ವಾಗ್ದಾಳಿ – ಪಕ್ಕದಲ್ಲೇ ಕುಳಿತಿದ್ದರೂ ಮಾತಿಲ್ಲ

ಬೆಂಗಳೂರು: ನಗರದಲ್ಲಿ ಇಂದು ನಡೆದಿದ್ದ ರಾಜ್ಯ ಆದಿ ಜಾಂಬವ ಅಭಿವೃದ್ಧಿ ನಿಗಮ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ದಲಿತ ಎಡಗೈ, ಬಲಗೈ ಕಾಂಗ್ರೆಸ್ ನಾಯಕರ ನಡುವಿನ ಸಂಘರ್ಷ ಮತ್ತೊಮ್ಮೆ ಬಯಲಿಗೆ ಬಂದಿದೆ. ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಎಚ್.ಮುನಿಯಪ್ಪ ಪರಸ್ಪರ ವಾಗ್ದಾಳಿ ನಡೆಸಿದ ಪ್ರಸಂಗ ನಡೆಯಿತು. ಸಂಸದ ಕೆ.ಎಚ್.ಮುನಿಯಪ್ಪ ಅವರು...