5 days ago

ಉದ್ಯೋಗ ಅರಿಸಿ ಬೆಂಗ್ಳೂರಿಗೆ ಬಂದ- ಕೆಲಸಕ್ಕೆ ಸೇರಿದ ದಿನವೇ ಹೆಣವಾದ

ಬೆಂಗಳೂರು: ಉದ್ಯೋಗ ಅರಿಸಿ ದೂರದ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಿಂದ ಬೆಂಗಳೂರಿಗೆ ಬಂದಿದ್ದ ಯುವಕನೊಬ್ಬ ಕೆಲಸಕ್ಕೆ ಸೇರಿದ ದಿನವೇ ಸಾವನ್ನಪ್ಪಿದ್ದಾನೆ. ರಾಣೆಬೆನ್ನೂರು ಮೂಲದ ಪ್ರಕಾಶ್ ಸಾವನ್ನಪ್ಪಿದ ಯುವಕ, ಊರಿನಲ್ಲಿ ಕೆಲಸವಿಲ್ಲದ ಹಿನ್ನೆಲೆ ಪ್ರಕಾಶ್ ಕೆಲಸ ಅರಸಿ ಬೆಂಗಳೂರಿನ ರಾಜಗೋಪಾಲನಗರಕ್ಕೆ ಬಂದಿದ್ದ. ಬೆಂಗಳೂರಿನಲ್ಲಿಯೂ ಯಾವುದೇ ಕೆಲಸ ಸಿಗದ ಹಿನ್ನೆಲೆ ಲೈನ್ ಮ್ಯಾನ್ ಕಂಟ್ರಾಕ್ಟರ್ ಆಗಿದ್ದ ವ್ಯಕ್ತಿಯೊಬ್ಬರ ಬಳಿ ಕೆಲಸಕ್ಕೆ ಸೇರಿದ್ದನು. ಸೇರಿದ ಮೊದಲ ದಿನವೇ, ವಿದ್ಯುತ್ ಶಾಕ್‍ನಿಂದ ಸಾವನ್ನಪ್ಪಿದ್ದಾನೆ. ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ರಿಪೇರಿ ಕೆಲಸಕ್ಕಾಗಿ ಯುವಕನನ್ನು ಕಂಬ ಹತ್ತಿಸಿದ್ದಾರೆ. […]

3 weeks ago

‘ಮೋದಿ ಬಂದ್ರೂ ನನ್ನೇನು ಮಾಡಲ್ಲ, ನೀನ್ ಯಾವ್ ಲೆಕ್ಕ’ – ನಗರಸಭೆ ಕಮಿಷನರ್‌ಗೆ ಕುಂಚ ಕಲಾವಿದನಿಂದ ಅವಾಜ್

ಯಾದಗಿರಿ: ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಬಂದರೂ ನನ್ನನ್ನು ಏನು ಮಾಡಲ್ಲ, ನೀನು ಯಾವ ಲೆಕ್ಕ ಅಂತ ನಗರಸಭೆ ಕಮಿಷನರ್‌ಗೆ ಯಾದಗಿರಿ ಕುಂಚ ಕಲಾವಿದನೋರ್ವ ತರಾಟೆಗೆ ತೆಗೆದುಕೊಂಡಿದ್ದಾನೆ. ಕೆಲಸ ಕೊಡದಕ್ಕೆ ಕೋಪಗೊಂಡ ಕುಂಚ ಕಲಾವಿದ, ಯಾದಗಿರಿ ನಗರಸಭೆ ಕಮಿಷನರ್ ರಮೇಶ್‍ಗೆ ನಗರದ ಡಿಸಿ ಸರ್ಕಾರಿ ಮನೆ ಎದುರು ನಡು ರಸ್ತೆಯಲ್ಲಿ ಮಲ್ಲು ಆರ್ಟ್ಸ್ ಮಾಲೀಕ ಮಲ್ಲಿಕಾರ್ಜುನ...

ಹಣಕ್ಕಾಗಿ 12ರ ಮಗಳನ್ನು ಕೆಲಸಕ್ಕೆ ಬಿಟ್ಟೋದ ತಾಯಿ – ತುಂಗಾನದಿ ತೀರದಲ್ಲಿ ಬಾಲಕಿ ಪತ್ತೆ

1 month ago

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಸಮೀಪದ ಕೆಳಕೆರೆ ಗ್ರಾಮದ ತುಂಗಾನದಿ ತೀರದಲ್ಲಿ ಸುಮಾರು 12 ವರ್ಷದ ಬಾಲಕಿ ಪತ್ತೆಯಾಗಿದ್ದು, ಗ್ರಾಮಸ್ಥರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಬಾಲಕಿಯನ್ನು ಒಪ್ಪಿಸಿದ್ದಾರೆ. ಶಿಕಾರಿಪುರ ತಾಲೂಕಿನ ಬಾಲಕಿ ಹಲವು ದಿನದ ಹಿಂದೆ ಬುಕ್ಲಾಪುರದ...

ಅತ್ಯಾಚಾರವೆಸಗಿ ಐರನ್ ಬಾಕ್ಸ್‌ನಿಂದ ಸುಟ್ಟು ವಿಕೃತಿ ಮೆರೆದ ಮೌಲ್ವಿ

1 month ago

ಬೆಂಗಳೂರು: ಯುವತಿಗೆ ಕೆಲಸಕ್ಕೆಂದು ಕರೆ ತಂದು ಗೃಹಬಂಧನದಲ್ಲಿಟ್ಟು ಮೌಲ್ವಿಯೊಬ್ಬ ಅತ್ಯಾಚಾರವೆಸಗಿ ರಾಕ್ಷಕನ ರೀತಿಯಲ್ಲಿ ನಡೆದುಕೊಂಡಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ. ಫರ್ವೆಜ್ ಯುವತಿಗೆ ಅಮಾನಿಯವಾಗಿ ನಡೆಸಿಕೊಂಡಿರುವ ಮೌಲ್ವಿ. ಆರೋಪಿ ಮೌಲ್ವಿ ಕೋರಮಂಗಲದ 8ನೇ ಕ್ರಾಸ್‍ನಲ್ಲಿ ಮದರಸ ಹಾಗೂ ಟ್ಯುಟೋರಿಯಲ್ ನಡೆಸುತ್ತಿದ್ದನು. ಅಲ್ಲದೆ...

ಕೆಲಸಕ್ಕೆ ಹೋಗು ಎಂದ ತಂದೆಯ ಕತ್ತನ್ನೇ ಕಡಿದ ಮಗ

2 months ago

ಮಂಗಳೂರು: ಮನೆಯಲ್ಲೇ ಸೋಮಾರಿಯಾಗಿದ್ದ ಮಗನನ್ನು ಕೆಲಸಕ್ಕೆ ಹೋಗು ಎಂದಿದ್ದಕ್ಕೆ ಸಿಟ್ಟಿಗೆದ್ದು ಆತ ತಂದೆಯ ಕತ್ತನ್ನೇ ಕಡಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರಿನ ಪಾಣಾಜೆ ಗ್ರಾಮದ ಬೊಳ್ಳಿಂಬಳ ಗ್ರಾಮದ ನಿವಾಸಿ ಕೃಷ್ಣ ನಾಯ್ಕ್(65) ಮೃತ...

ಶಾಲೆ ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಿದ್ದ 50 ಮಕ್ಕಳ ರಕ್ಷಣೆ

2 months ago

ಯಾದಗಿರಿ: ಶಾಲೆ ಬಿಟ್ಟು ಕೂಲಿ ಕೆಲಸಕ್ಕೆ ತೆರಳುತ್ತಿದ್ದ ವಿವಿಧ ಶಾಲೆಗಳ 50 ಮಕ್ಕಳನ್ನು ಇಂದು ಬೆಳಂಬೆಳಗ್ಗೆ ಮಕ್ಕಳ ಹಕ್ಕು ರಕ್ಷಣಾ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯಲ್ಲಿ ವ್ಯಾಪ್ತಿಯಲ್ಲಿ ಈ ರಕ್ಷಣಾ ಕಾರ್ಯ ನಡೆದಿದೆ. ಕೆಂಭಾವಿ ವ್ಯಾಪ್ತಿಯಲ್ಲಿ...

ಕೇಂದ್ರ ಸರ್ಕಾರ ಕೆಲಸ ಕೇಳಿದ ಯುವಕರಿಗೆ ಚಂದ್ರನನ್ನು ತೋರಿಸುತ್ತಿದೆ: ರಾಹುಲ್ ಗಾಂಧಿ

3 months ago

– ಇಂದಿನ ದೇಶದ ಈ ಪರಿಸ್ಥಿತಿಗೆ ಮಾಧ್ಯಮಗಳೇ ಕಾರಣ ಮುಂಬೈ: ಕೇಂದ್ರ ಸರ್ಕಾರ ಕೆಲಸ ಕೇಳಿದ ಯುವಕರಿಗೆ ಚಂದ್ರನನ್ನು ತೋರಿಸುತ್ತಿದೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ಮಾಡಿದ್ದಾರೆ. ಇಂದು ಮಹಾರಾಷ್ಟ್ರದ ಲಾತೂರ್...

ಕೆಲಸದಿಂದ ಏಕಾಏಕಿ ತೆಗೆದಿದ್ದಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆಗೆ ಯತ್ನ

4 months ago

ಚಾಮರಾಜನಗರ: ಹಿರಿಯ ಅಧಿಕಾರಿಗಳು ಕೆಲಸದಿಂದ ತೆಗೆದಿದ್ದಕ್ಕೆ ಮನನೊಂದು ಹೊರಗುತ್ತಿಗೆ ನೌಕರನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ಸಿಡಿಪಿಒ ಕಚೇರಿಯಲ್ಲಿ ನಡೆದಿದೆ. ಹೊರಗುತ್ತಿಗೆ ನೌಕರ ಮೋಹನ್ ಕುಮಾರ್ (42) ಆತ್ಮಹತ್ಯೆಗೆ ಯತ್ನಿಸಿದ ನೌಕರ. ಮೋಹನ್ ಕುಮಾರ್ ಸಿಡಿಪಿಒ ಕಚೇರಿಯಲ್ಲಿ 3...