Tuesday, 28th January 2020

2 years ago

ಬ್ಯಾಟರಿ ಕದ್ದು ಸಿಕ್ಕಿಬಿದ್ದ ಇಕ್ಬಾಲ್ ಅನ್ಸಾರಿ ಆಪ್ತ – ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿ

ಕೊಪ್ಪಳ: ವಾಹನಗಳ ಬ್ಯಾಟರಿ ಕಳ್ಳತನ ಮಾಡುವ ವೇಳೆ ನಗರಸಭೆ ಸದಸ್ಯನೊಬ್ಬ ಸಿಕ್ಕಿಬಿದ್ದು, ಬಳಿಕ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಗಂಗಾವತಿಯಲ್ಲಿ ನಡೆದಿದೆ. ಜಿಲ್ಲೆ ಗಂಗಾವತಿ ನಗರಸಭೆ ನಾಮನಿರ್ದೇಶಿತ ಸದಸ್ಯ ಬಿಚ್ಚುಗತ್ತಿ ಸಲ್ಮಾನ್ ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಿ. ಶಾಸಕ ಇಕ್ಬಾಲ್ ಅನ್ಸಾರಿ ಬಲಗೈ ಬಂಟ ಎಂದು ಗುರುತಿಸಿಕೊಂಡಿರುವ ಸಲ್ಮಾನ್ ಕೆಲ ದಿನಗಳ ಹಿಂದೆ ಲಾರಿ ಬ್ಯಾಟರಿ ಕಳ್ಳತನ ಮಾಡುತ್ತಿದ್ದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯಗಳನ್ನ ಆಧರಿಸಿ ಕಳ್ಳತನದ ಆರೋಪಿ ಸಲ್ಮಾನ್ […]

2 years ago

ವಾಟ್ಸಪ್ ಗ್ರೂಪ್‍ನಿಂದ ಸಿಕ್ಕಿಬಿದ್ದ ಬೈಕ್ ಕಳ್ಳನಿಗೆ ಹಿಗ್ಗಾಮುಗ್ಗಾ ಥಳಿತ!

ಬಳ್ಳಾರಿ: ಸಾಮಾನ್ಯವಾಗಿ ವಾಟ್ಸಪ್ ಗ್ರೂಪ್ ಗಳು ಗುಡ್ ಮಾರ್ನಿಂಗ್, ಗುಡ್ ನೈಟ್ ಗೆ ಸಂದೇಶ ಕಳುಹಿಸಲು ಹೆಚ್ಚು ಬಳಕೆಯಾಗುತ್ತದೆ. ಆದರೆ ಬಳ್ಳಾರಿಯಲ್ಲಿ ವಾಟ್ಸಪ್ ಗ್ರೂಪ್ ನಿಂದ ಕಳೆದು ಹೋದ ಬೈಕ್ ಪತ್ತೆಯಾಗಿದೆ. ಹೌದು. ಬಳ್ಳಾರಿಯ ಜಿಸಿ ಲ್ಯಾಬ್ ಬಳಿ ನಿಲ್ಲಿಸಲಾಗಿದ್ದ ಫೋಟೋಗ್ರಾಫರ್ ಆನಂದ್ ಅವರ ಪಲ್ಸರ್ ಬೈಕ್ ಶುಕ್ರವಾರ ರಾತ್ರಿ ಕಳ್ಳತನವಾಗಿತ್ತು. ಬೈಕ್ ಕಳೆದು ಕೊಂಡ...

ಪೆಟ್ರೋಲ್ ಕಳ್ಳತನ ಮಾಡ್ತಿದ್ದ ಯುವಕನಿಗೆ ಸಾರ್ವಜನಿಕರಿಂದ ಗೂಸಾ

2 years ago

ಗದಗ: ಪೆಟ್ರೋಲ್ ಕಳ್ಳತನ ಮಾಡುತ್ತಿದ್ದ ಯುವಕನೊಬ್ಬನನ್ನು ಸಾರ್ವಜನಿಕರು ಹಿಡಿದು ಥಳಿಸಿದ ಘಟನೆ ಗದಗ್ ನಲ್ಲಿ ನಡೆದಿದೆ. ಗದಗ ನಗರ ತೋಂಟದಾರ್ಯ ಮಠದ ಬಳಿ ಸ್ಟೇಷನ್ ರೋಡ್ ನಲ್ಲಿ ಈ ಘಟನೆ ನಡೆದಿದ್ದು, ಥಳಿತಕ್ಕೊಳಗಾದ ಯುವಕನನ್ನು ಕರಿಯಪ್ಪ ಎಂದು ಗುರುತಿಸಲಾಗಿದೆ. ಕರಿಯಪ್ಪ ರಾತ್ರಿ...

ದಾಯಿರ ನುಡಿಸುತ್ತಾ ಬಂದ ಕಳ್ಳ ಫಕೀರ- ಮಂಕುಬೂದಿ ಎರಚಿ ಚಿನ್ನಕ್ಕೆ ಕನ್ನವಿಟ್ಟ

2 years ago

ಉಡುಪಿ: ಅಸಲಿ ಫಕೀರನಂತೆ ದಾಯಿರ ಬಾರಿಸಿಕೊಂಡು ಮನೆಗೆ ಬಂದ ಅಪರಿಚಿತ ವ್ಯಕ್ತಿ ಮಹಿಳೆಯೊಬ್ಬರಿಗೆ ವಂಚಿಸಿರೋ ಘಟನೆ ಉಡುಪಿಯ ಉದ್ಯಾವರದಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ನಯಾಝ್ ಎಂಬವರ ಪತ್ನಿ ಆಯಿಷಾ ಮೋಸಕ್ಕೊಳಗಾದ ಮಹಿಳೆ. ಫಕೀರನ ವೇಷದಲ್ಲಿ ಹಣ ಬೇಡುತ್ತಾ ಮನೆಯಿಂದ ಮನೆಗೆ ಹೋದ...

ಕಲ್ಯಾಣ ಮಂಟಪಕ್ಕೆ ನೆಂಟನಂತೆ ಬಂದು ಕಳ್ಳತನ ಮಾಡಲೆತ್ನಿಸಿದ ಖದೀಮನಿಗೆ ಬಿತ್ತು ಸಖತ್ ಗೂಸ

2 years ago

ಶಿವಮೊಗ್ಗ: ಕಲ್ಯಾಣ ಮಂಟಪಕ್ಕೆ ನೆಂಟನಂತೆ ಬಂದು ಕೈಚಳಕ ತೋರಲು ಯತ್ನಿಸಿದ ಕಳ್ಳನಿಗೆ ಮದುವೆಗೆ ಬಂದವರೇ ಭರ್ಜರಿ ಗೂಸಾ ಕೊಟ್ಟ ಘಟನೆ ಶಿವಮೊಗ್ಗದ ಗೌಡಸಾರಸ್ವತ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಶಿವಮೊಗ್ಗದ ಬೊಮ್ಮನಕಟ್ಟೆಯ ಜುಬೇರ್ ಮದುವೆ ಮನೆಗೆ ಕಳ್ಳತನಕ್ಕೆ ಹೋಗಿ ಪೊಲೀಸರ ಅತಿಥಿಯಾದ ಯುವಕ....

ಉಡುಪಿಯ ಕೊರಗಜ್ಜನ ಮಹಿಮೆ ಮತ್ತೊಮ್ಮೆ ಸಾಬೀತು- ಕದ್ದ ಬೆಳ್ಳಿ ಆಭರಣಗಳನ್ನು ಹಿಂದುರಿಗಿಸಿದ ಖದೀಮರು

2 years ago

ಉಡುಪಿ: ಕರಾವಳಿಯಲ್ಲಿ ದೈವ ಮತ್ತೆ ಕಾರಣಿಕ ತೋರಿದೆ. ದೈವಸ್ಥಾನದಿಂದ ಕದ್ದ ಆಭರಣಗಳನ್ನು ಕಳ್ಳರು ವಾಪಾಸ್ ತಂದಿಟ್ಟಿದ್ದಾರೆ. ಉಡುಪಿ ಜಿಲ್ಲೆ ಕಟಪಾಡಿಯಲ್ಲಿ ಈ ಕೌತುಕ ನಡೆದಿದೆ. ತುಳುನಾಡ ದೈವಸ್ಥಾನಗಳು ಕಾರಣಿಕ ಶಕ್ತಿಯನ್ನು ಹೊಂದಿದೆ ಎನ್ನುವುದು ಎಲ್ಲರಿಗೂ ತಿಳಿದಿರೋ ವಿಚಾರ. ಇಂತಹ ದೈವಸ್ಥಾನದ ಮುಂದೆ...

ನಟೋರಿಯಸ್ ಗ್ಯಾಂಗ್‍ಸ್ಟಾರ್ ಸೆರೆ ಹಿಡಿದ ನಯನತಾರಾ!

2 years ago

ಪಾಟ್ನಾ: ಪೊಲೀಸರು ತುಂಬಾ ಬುದ್ಧಿವಂತಿಕೆಯಿಂದ ದಕ್ಷಿಣ ಭಾರತದ ಪ್ರಸಿದ್ಧ ನಟಿ ನಯನತಾರಾ ಫೋಟೋ ಬಳಸಿ ನಟೋರಿಯಸ್ ಗ್ಯಾಂಗ್‍ಸ್ಟಾರ್ ಒಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಮಹಮ್ಮದ್ ಹಸ್‍ನೈನ್ ನಯನತಾರಾ ಫೋಟೋ ನೋಡಿ ಬಲೆಗೆ ಬಿದ್ದ ಕಳ್ಳ. ಹಿರಿಯ ಪೊಲೀಸ್ ಅಧಿಕಾರಿ ಮಧುಬಾಲಾ ದೇವಿ...

ಬೆಂಗ್ಳೂರಿನ ಈ ಏರಿಯಾದ ಜನ ನೆಮ್ಮದಿಯಾಗಿ ನಿದ್ದೆ ಮಾಡುವಂಗಿಲ್ಲ- ಯಾಕೆ ಅಂತಿರಾ ಈ ಸುದ್ದಿ ಓದಿ

2 years ago

ಬೆಂಗಳೂರು: ಈ ಏರಿಯಾದಲ್ಲಿ ಅಂಗಡಿ ವ್ಯಾಪಾರಿಗಳು ನೆಮ್ಮದಿಯಾಗಿ ನಿದ್ದೆ ಮಾಡಂಗಿಲ್ಲ. ವ್ಯಾಪಾರ ಮಾಡಿದ್ದ ದುಡ್ಡನ್ನು ತಿಜೋರಿಯಲ್ಲಿ ಇಟ್ಟು ಹೋದರೆ ಬೆಳಗ್ಗೆ ಬಂದು ನೋಡಿದರೆ ಇರುತ್ತೋ ಇಲ್ಲವೋ ಎನ್ನುವ ಚಿಂತೆ. ಅದು ಚೆನ್ನಾಗಿ ನಿದ್ದೆಯಲ್ಲಿರುವ ಸಮಯ. ಈ ಸಮಯವೇ ಖದೀಮರಿಗೆ ಅಮೃತ ಘಳಿಗೆ...