Saturday, 17th August 2019

20 hours ago

ಏಕಾಏಕಿ ಹಾಸ್ಟೆಲ್ ಲಾಡ್ಜ್‌ಗೆ ಶಿಫ್ಟ್- ಅಧಿಕಾರಿ ವಿರುದ್ಧ ವಿದ್ಯಾರ್ಥಿನಿಯರು ಕಿಡಿ

ಕಲಬುರಗಿ: ಬಿಸಿಎಂ ಹಾಸ್ಟೆಲ್‍ನಲ್ಲಿ ಆರಾಮಾಗಿ ಓದಿಕೊಂಡಿದ್ದ ವಿದ್ಯಾರ್ಥಿನಿಯರನ್ನು ಇದ್ದಕ್ಕಿದ್ದ ಹಾಗೆ ಲಾಡ್ಜ್ ಗೆ ಶಿಫ್ಟ್ ಮಾಡುವಂತೆ ಒತ್ತಡ ಹಾಕಲಾಗಿದೆ. ರೊಚ್ಚಿಗೆದ್ದ ವಿದ್ಯಾರ್ಥಿನಿಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೌದು. ಕಲಬುರಗಿಯ ದೇವರಾಜ್ ಅರಸು ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ಇಷ್ಟು ದಿನ ಸುಸಜ್ಜಿತವಾಗಿರೋ ಹಾಸ್ಟೆಲ್‍ನಲ್ಲಿ ಆರಾಮಾಗಿ ಓದಿಕೊಂಡಿದ್ದರು. ಆದರೆ ಇದೀಗ ವಿದ್ಯಾರ್ಥಿನಿಯರನ್ನು ಏಕಾಏಕಿಯಾಗಿ ಬಿಸಿಎಂ ಇಲಾಖೆ ಅಧಿಕಾರಿ ಮೆಹಬೂಬ್ ಪಾಷಾ, ಲಾಡ್ಜ್ ಗೆ ಶಿಫ್ಟ್ ಆಗುವಂತೆ ಒತ್ತಡ ಹೇರಿದ್ದಾನೆ. ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿನಿಯರು ವಸತಿ ನಿಲಯಕ್ಕೆ ಬೀಗ […]

2 weeks ago

ಉತ್ತರ ಕರ್ನಾಟಕದಲ್ಲಿ ವಿಚಿತ್ರ ಸನ್ನಿವೇಶ – ಒಂದೆಡೆ ಪ್ರವಾಹ, ಮತ್ತೊಂದೆಡೆ ಕುಡಿಯುವ ನೀರು ಸೇಲ್

ಕಲಬುರಗಿ: ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಟ್ಟ ಹಿನ್ನೆಲೆಯಲ್ಲಿ ರಾಜ್ಯದ ಐದು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇತ್ತ ಕಲಬುರಗಿಯ ಭೀಮಾನದಿ ತೀರದಲ್ಲಿ ಕುಡಿಯುವ ನೀರನ್ನು ಬಕೆಟ್‍ಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿನ ಭೀಕರ ಮಳೆಯಿಂದ ಕೋಯ್ನಾ ಜಲಾಶಯದ ಮೂಲಕ ಕರ್ನಾಟಕಕ್ಕೆ ಅಪಾರ ನೀರು ಬಿಡಲಾಗುತ್ತಿದ್ದು, ಬೆಳಗಾವಿ, ರಾಯಚೂರು ಸೇರಿದಂತೆ ರಾಜ್ಯದ 5 ಜಿಲ್ಲೆಗಳಲ್ಲಿ...

ನಾಳೆ ಬಿಎಸ್‍ವೈ ಬಹುಮತ ಸಾಬೀತು ಪಡಿಸ್ತಾರೆ- ಕೈ ಶಾಸಕ ಅಜಯ್‍ಸಿಂಗ್

3 weeks ago

– ವಿಪಕ್ಷದಲ್ಲಿ ಕೂರಲು ಕಾಂಗ್ರೆಸ್ ಸಿದ್ಧ ಕಲಬುರಗಿ: ನಾಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸದನದಲ್ಲಿ ಬಹುಮತ ಸಾಬೀತು ಪಡಿಸುತ್ತಾರೆ ಎಂದು ಕಾಂಗ್ರೆಸ್ ಜೇವರ್ಗಿ ಶಾಸಕ ಡಾ ಅಜಯ್‍ಸಿಂಗ್ ಹೇಳಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬೈಯಲ್ಲಿರೋ ಅತೃಪ್ತ ಶಾಸಕರು ವಾಪಸ್...

ಮತ್ತೊಮ್ಮೆ ಸಾಬೀತು – ಚಿಂಚೋಳಿಯಲ್ಲಿ ಗೆದ್ದವರಿಗೆ ವಿಧಾನಸಭೆಯ ಗದ್ದುಗೆ

3 weeks ago

ಕಲಬುರಗಿ: ಚಿಂಚೋಳಿ ವಿಧಾನಸಭಾ ಕ್ಷೇತ್ರದ ಮಹಿಮೆಯೋ ಅಥವಾ ಕಾಕತಾಳೀಯವೋ ಗೊತ್ತಿಲ್ಲ. ಈ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಯಾವ ಪಕ್ಷ ಆಯ್ಕೆ ಆಗುತ್ತೋ ಅದೇ ಪಕ್ಷ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯುತ್ತಿರುವುದು ವಿಶೇಷ. ಚಿಂಚೋಳಿ ವಿಧಾನಸಭಾ ಕ್ಷೇತ್ರ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೇ...

ಹಲವು ಪ್ರಕರಣಗಳಲ್ಲಿ ಬೇಕಿದ್ದ ಕುಖ್ಯಾತ ಡಕಾಯಿತರ ಬಂಧನ

1 month ago

– ಬಂಧಿತರಿಂದ 5, 62, 550ರೂ. ಮೌಲ್ಯದ ವಸ್ತುಗಳು ಜಪ್ತಿ ರಾಯಚೂರು: ಹಲವು ಪ್ರಕರಣಗಳಲ್ಲಿ ಬೇಕಿದ್ದ ಕುಖ್ಯಾತ ಡಕಾಯಿತರನ್ನು ರಾಯಚೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರನ್ನು ಕಲಬುರಗಿ ಮೂಲದವರಾದ ಮಲ್ಲು, ರವಿ, ಯಲ್ಲಾಲಿಂಗ, ಹನುಮಂತ, ಶಾಮ್ ಸಿಂಗ್ ಮತ್ತು...

ವಾಹನ ಪಲ್ಟಿ – 20ಕ್ಕೂ ಅಧಿಕ ಕೂಲಿ ಕಾರ್ಮಿಕರ ಸ್ಥಿತಿ ಚಿಂತಾಜನಕ

1 month ago

ಕಲಬುರಗಿ: ಎಕ್ಸೆಲ್ ತುಂಡಾಗಿ ಟಾಟಾ ಮ್ಯಾಕ್ಸ್ ಪಲ್ಟಿಯಾದಂತಹ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಪಂಚಿಮಪಳ್ಳಿ ಗ್ರಾಮದ ಬಳಿ ನಡೆದಿದೆ. ವೇಗವಾಗಿ ಹೋಗುತ್ತಿದ್ದ ವಾಹನದ ಎಕ್ಸೆಲ್ ಕಟ್ ಆಗಿ ರಸ್ತೆ ಬದಿಗೆ ಪಲ್ಟಿಯಾಗಿದ್ದರಿಂದ ಅದರಲ್ಲಿದ್ದ ಇಪ್ಪತ್ತಕ್ಕೂ ಅಧಿಕ ಜನರ ಸ್ಥಿತಿ ತೀರಾ...

ತಲೆ ಮೇಲೆ ಕಲ್ಲು ಎತ್ತಿಹಾಕಿ ಪ್ರಿಯಕರನಿಂದ ಪ್ರಿಯತಮೆಯ ಬರ್ಬರ ಕೊಲೆ

1 month ago

ಕಲಬುರಗಿ: ತಲೆ ಮೇಲೆ ಕಲ್ಲು ಎತ್ತಿಹಾಕಿ ಪ್ರಿಯಕರನೇ ಪ್ರಿಯತಮೆಯ ಬರ್ಬರ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಸಿಂದಗಿ ಬಿ ಗ್ರಾಮದಲ್ಲಿ ನಡೆದಿದೆ. ಕೊಲೆ ಮಾಡಿದ ಪ್ರಿಯಕರನನ್ನು ಸಿದ್ದು ಎಂದು ಗುರುತಿಸಲಾಗಿದ್ದು, ಕೊಲೆಯಾದ ಪ್ರಿಯತಮೆಯನ್ನು 31 ವರ್ಷದ ಮಲ್ಲಮ್ಮ...

ಮುಂದಿನ ಸಲ ಮೋದಿ ಹೆಸರು ಹೇಳಿದ್ರೆ ಬಾಯಲ್ಲಿ ಬೂಟು ಹಾಕ್ತೀವಿ: ಮುತಾಲಿಕ್

1 month ago

ಕಲಬುರಗಿ: ಮುಂದಿನ ಸಲ ಮೋದಿ ಹೆಸರು ಹೇಳಿದರೆ ಬಾಯಲ್ಲಿ ಬೂಟು ಹಾಕ್ತೇವಿ ಎಂದು ಬಿಜೆಪಿ ಸಂಸದರ ವಿರುದ್ಧ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು,...