Saturday, 15th December 2018

Recent News

2 months ago

ಮತ್ತೆ ಸಿಡಿದ ಶೃತಿ ಹರಿಹರನ್-ಫಿಲ್ಮ್ ಚೇಂಬರ್ ವಿರುದ್ಧ ಪರೋಕ್ಷವಾಗಿ ಆಕ್ರೋಶ ಹೊರ ಹಾಕಿದ ನಟಿ

ಬೆಂಗಳೂರು: ಅರ್ಜುನ್ ಸರ್ಜಾ ವಿರುದ್ಧ ಮೀಟೂ ಕೇಸ್ ದಾಖಲಿಸಿ ಸ್ಯಾಂಡಲ್‍ವುಡ್ ನಲ್ಲಿ ಸಂಚಲ ಸೃಷ್ಟಿಸಿರುವ ನಟಿ ಶೃತಿ ಹರಿಹರನ್ ಟ್ಟಿಟ್ಟರ್ ನಲ್ಲಿ ಮತ್ತೆ ಗರಂ ಆಗಿದ್ದಾರೆ. ಇಂಗ್ಲಿಷ್ ಪತ್ರಿಕೆಯ ಲೇಖನವನ್ನು ರೀಟ್ವೀಟ್ ಮಾಡಿಕೊಂಡಿರುವ ಶೃತಿ ಹರಿಹರನ್ ಪರೋಕ್ಷವಾಗಿ ಫಿಲ್ಮ್ ಚೇಂಬರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ‘ಕನ್ನಡ ಸಿನಿಮಾ ಇಂಡಸ್ಟ್ರಿಗೆ ಸಾಮಾನ್ಯ ಬೆಂಗಳೂರಿಗಳ ಪತ್ರ’ ಶೀರ್ಷಿಕೆಯಲ್ಲಿರುವ ಬೆಂಗಳೂರಿನ ಮಹಿಳೆಯೊಬ್ಬರ ಅಭಿಪ್ರಾಯವನ್ನು ಶೃತಿ ರೀಟ್ವೀಟ್ ಮಾಡಿಕೊಂಡಿದ್ದಾರೆ. ಈ ಪತ್ರದಲ್ಲಿರುವ ಎಲ್ಲ ಮಾತುಗಳು ಶೃತಿ ಸಮ್ಮತಿ ಸೂಚಿಸಿದ್ದು, ನನ್ನ ಮನದಾಳದ ಮಾತಿದು […]

3 months ago

ರಚಿತಾ ಒಪ್ಪಿಕೊಳ್ಳದ ಕಥೆಯನ್ನು ಹರಿಪ್ರಿಯಾ ಅಪ್ಪಿಕೊಂಡರಾ?

ಬೆಂಗಳೂರು: ಹರಿಪ್ರಿಯಾ ‘ಕನ್ನಡ್ ಗೊತ್ತಿಲ್ಲ’ ಎಂಬ ಚಿತ್ರದಲ್ಲಿ ನಟಿಸಲು ತಯಾರಾಗಿರೋ ಸುದ್ದಿ ಇತ್ತೀಚೆಗಷ್ಟೇ ಜಾಹೀರಾಗಿತ್ತು. ಆರ್‍ಜೆ ಮಯೂರ್ ನಿರ್ದೇಶನ ಮಾಡಲಿರೋ ಈ ಮೊದಲ ಚಿತ್ರದ ಬಗ್ಗೆ ಈಗಾಗಲೇ ಎಲ್ಲೆಡೆ ನಿರೀಕ್ಷೆಗಳು ಶುರುವಾಗಿವೆ. ಇದರ ಜೊತೆ ಜೊತೆಗೇ ಮತ್ತೊಂದು ಸುದ್ದಿಯೂ ಹರಿದಾಡಲಾರಂಭಿಸಿದೆ. ಈ ಚಿತ್ರದ ಕಥೆಯನ್ನು ಆರಂಭದಲ್ಲಿಯೇ ರಚಿತಾ ರಾಮ್ ಕೇಳಿದ್ದರಂತೆ. ಆದರೆ ಕಾರಣಾಂತರಗಳಿಂದ ಅವರು ಈ...

ಮುಂದಿನ ವಾರ ಹೈಪರ್ ಎಂಟ್ರಿ!

6 months ago

ಬೆಂಗಳೂರು: ಶೀರ್ಷಿಕೆಗೆ ತಕ್ಕುದಾಗಿಯೇ ಟ್ರೈಲರ್, ಹಾಡು ಸೇರಿದಂತೆ ಪ್ರತಿಯೊಂದರಲ್ಲಿಯೂ ಅಬ್ಬರಿಸುತ್ತಾ ಬಂದಿದ್ದ ಹೈಪರ್ ಚಿತ್ರ ಇದೇ 29ರಂದು ತೆರೆ ಕಾಣಲಿದೆ. ಎಂ ಕಾರ್ತಿಕ್ ನಿರ್ಮಾಣದ, ಗಣೇಶ್ ವಿನಾಯಕ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರ ಬಿಡುಗಡೆಯ ಸರದಿಯಲ್ಲಿರುವ ಸಿನಿಮಾಗಳಲ್ಲಿ ಬಹು ನಿರೀಕ್ಷಿತ...

ಈ ವಾರ ಥೇಟರುಗಳನ್ನು ಆವರಿಸಿಕೊಳ್ಳಲಿದೆ ‘ವೆನಿಲ್ಲಾ’ ಫ್ಲೇವರ್!

7 months ago

ಬೆಂಗಳೂರು: ವೆನಿಲ್ಲಾ ಅಂದಾಕ್ಷಣ ಬಹುತೇಕರಿಗೆ ನೆನಪಾಗೋದು ಐಸ್‍ಕ್ರೀಮು. ಅಂಥಾ ನಯವಾದ ಹೆಸರಿನ ಸುತ್ತಾ ಅಪ್ಪಟ ಸಸ್ಪೆನ್ಸ್ ಥ್ರಿಲ್ಲರ್ ಮರ್ಡರ್ ಮಿಸ್ಟರಿಯ ಕಥೆ ಅನಾವರಣಗೊಳ್ಳುತ್ತದೆ ಎಂದಾದರೆ ಖಂಡಿತಾ ಆ ಬಗೆಗೊಂದು ಕುತೂಹಲ ಹುಟ್ಟಿಕೊಳ್ಳುತ್ತದೆ. ಈಗಾಗಲೇ ಹಲವು ಕಾರಣಗಳಿಂದ ಕ್ಯೂರಿಯಾಸಿಟಿಗೆ ಕಾರಣವಾಗಿರುವ ‘ವೆನಿಲ್ಲಾ’ ಈ...

ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎನ್ನುತ್ತ ಯಂಗ್ ಜನರೇಷನ್‍ಗೆ ಅನಂತನಾಗ್ ಟಕ್ಕರ್ !

7 months ago

ಬೆಂಗಳೂರು: ಅನಂತ ನಾಗ್ ಸ್ಯಾಂಡಲ್‍ವುಡ್ ಕಂಡ ಮೇರು ಕಲಾವಿದ. ಇಂದಿಗೂ ಸಿನಿಮಾಗಳಲ್ಲಿ ನಟಿಸುತ್ತ ತಮ್ಮದೇ ಆದ ಫ್ಯಾನ್ ಫಾಲೋವರ್ಸ್ ಗಳನ್ನು ಅನಂತನಾಗ್ ಹೊಂದಿದ್ದಾರೆ. ಹಿಂದೆಯೆಲ್ಲಾ ಲವ್ವರ್ ಬಾಯ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅನಂತನಾಗ್ ಇಂದು ಪೋಷಕ ಪಾತ್ರಗಳಿಗೆ ತಮ್ಮ ಅನುಭವದ ಮೂಲಕ ಜೀವ...

ಶುಕ್ರವಾರ ಕರ್ನಾಟಕದ ಸಿನಿಮಾ ಮಂದಿರಗಳು ಬಂದ್

9 months ago

ಬೆಂಗಳೂರು: ಶುಕ್ರವಾರ ಬಂದ್ರೆ ಸಾಕು ಸ್ಯಾಂಡಲ್‍ವುಡ್ ರಂಗೇರಿಬಿಡುತ್ತೆ. ಆದರೆ ನಾಳೆ ಕರ್ನಾಟಕದಲ್ಲಿ ಚಿತ್ರ ರಸಿಕರ ಪಾಲಿಗೆ ನಿರಾಶೆಯ ದಿನ. ನಾಳೆ ಇಡೀ ದಿನ ಕರ್ನಾಟಕದಲ್ಲಿ ಯಾವುದೇ ಸಿನಿಮಾ ಪ್ರದರ್ಶನ ಇರುವುದಿಲ್ಲ. ಹೊಸ ಸಿನಿಮಾಗಳು ರಿಲೀಸ್ ಆಗಲ್ಲ. ಹಳೆಯ ಸಿನಿಮಾಗಳ ಪ್ರದರ್ಶನವೂ ಇರಲ್ಲ....

ರಂಗ್‍ಬಿರಂಗಿಯ ಕಲರ್ ಫುಲ್ ರಂಗೀನ್ ಹಾಡುಗಳಿಗೆ ಮನಸೋತ ಪ್ರೇಕ್ಷಕ-ನಾಳೆ ತೆರೆಗೆ

10 months ago

ಬೆಂಗಳೂರು: ನಿರ್ದೇಶಕ ಮಲ್ಲಿಕಾರ್ಜುನ್ ಮುತ್ತಲಗೇರಿ ನಿರ್ದೇಶನದ ‘ರಂಗ್‍ಬಿರಂಗಿ’ ಸಿನಿಮಾದ ಮೆಲೋಡಿಯಸ್ ಹಾಡುಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸಂಪೂರ್ಣ ನವಕಲಾವಿದರನ್ನು ಒಳಗೊಂಡಿರುವ ರಂಗ್‍ಬಿರಂಗಿ ನಾಳೆ ರಾಜ್ಯಾದ್ಯಂತ ತೆರೆಕಾಣಲಿದೆ. ಚಿತ್ರದ ಟ್ರೇಲರ್ ಮತ್ತು ಹಾಡುಗಳಿಂದ ‘ರಂಗ್‍ಬಿರಂಗಿ’ ಭರವಸೆಯನ್ನು ಮೂಡಿಸಿದೆ. ಚಿತ್ರ ಒಟ್ಟು ಐದು ಹಾಡುಗಳನ್ನು...

ಯಾರೇ ಎಷ್ಟೇ ಹತ್ರ ಇದ್ದರೂ, ತಮ್ಮ ಮೊಬೈಲ್ ಮುಟ್ಟೋಕೆ ಬಿಡೋದಿಲ್ಲ- ಅಂತರಂಗದ ಕಥೆ ಹೇಳಲು ಬರ್ತಿದೆ ‘ಗೂಗಲ್’ ಸರ್ಚ್

10 months ago

ಬೆಂಗಳೂರು: ಗೀತ ಸಾಹಿತಿ, ಕವಿ ವಿ.ನಾಗೇಂದ್ರ ಪ್ರಸಾದ್ ನಿರ್ದೇಶಿಸಿರುವ ‘ಗೂಗಲ್-ಈ ಭೂಮಿ ಬಣ್ಣದ ಬುಗುರಿ’ ಸಿನಿಮಾ ಫೆಬ್ರವರಿ 16ರಂದು ತೆರೆಕಾಣಲಿದೆ. ಫೆಬ್ರವರಿ 3ರಂದು ಗೂಗಲ್ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಚಂದನವನದಲ್ಲಿ ಭರವಸೆಯನ್ನು ಮೂಡಿಸಿದೆ. 2.27 ನಿಮಿಷದ ಗೂಗಲ್ ಟ್ರೇಲರ್ ಹಲವು...