Tuesday, 21st January 2020

1 month ago

ಐಎಂಎ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಮೌಲ್ವಿಗೆ ಅದ್ದೂರಿ ಸನ್ಮಾನ

ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಜೈಲು ಸೇರಿ, ಜಾಮೀನಿನ ಮೇಲೆ ಬಿಡುಗಡೆಯಾದ ಮೌಲ್ವಿಗೆ ಅದ್ದೂರಿಯಾಗಿ ಸನ್ಮಾನ ಮಾಡಿರುವ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರ್.ಟಿ.ನಗರ ಮೂಲದ ಮೌಲ್ವಿ ಅಫ್ಸರ್ ಹನೀಜ್ ಮನ್ಸೂರ್ ಖಾನ್‍ನಿಂದ ಮೂರು ಕೋಟಿ ರೂ. ಮೌಲ್ಯದ ಬಂಗಲೆ ಪಡೆದುಕೊಂಡಿದ್ದ. ಬಂಗಲೆ ಪಡೆದಿದ್ದರಿಂದ ತನ್ನ ಸಮುದಾಯದವರಿಗೆ ಐಎಂಎನಲ್ಲಿ ಹೂಡಿಕೆ ಮಾಡುವಂತೆ ಪ್ರೇರಣೆ ನೀಡುತ್ತಿದ್ದ. ಮಸೀದಿಯಲ್ಲಿ ಪ್ರಾರ್ಥನೆಗೆ ಬಂದ ವೇಳೆ ಪ್ರೇರೇಪಣೆ ನೀಡಿ ಹೂಡಿಕೆ ಮಾಡುವಂತೆ ಸೂಚನೆ ನೀಡುತ್ತಿದ್ದ. ಈ ಹಿನ್ನೆಲೆ ಸೆಪ್ಟೆಂಬರ್ ನಲ್ಲಿ […]

2 months ago

ಶಿವಾಜಿನಗರ ಉಪ ಚುನಾವಣೆಯಲ್ಲಿ ಐಎಂಎ ಸದ್ದು- ಹೂಡಿಕೆದಾರರಿಂದ ಅಸ್ತ್ರ ಪ್ರಯೋಗ

ಬೆಂಗಳೂರು: ಶಿವಾಜಿನಗರ ಉಪ ಚುನಾವಣೆಯಲ್ಲಿ ಐಎಂಎ ಹಗರಣ ಸದ್ದು ಮಾಡುತ್ತಿದ್ದು, ಹೂಡಿಕೆದಾರರು ಎಲೆಕ್ಷನ್ ನಲ್ಲಿ ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಎಲ್ಲಾ ಪಕ್ಷಗಳ ಮುಖಂಡರುಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ರಣತಂತ್ರ ಹೆಣೆಯುತ್ತಿದ್ದಾರೆ. ಉಪಚುನಾವಣೆ ರಂಗು ಪಡೆದುಕೊಂಡಿರುವ ಶಿವಾಜಿ ನಗರದಲ್ಲಿ ಜನರ ಆಕ್ರೋಶ ಕಟ್ಟೆಯೊಡೆದಿದ್ದು, ಅಭ್ಯರ್ಥಿಗಳ ವಿರುದ್ಧ ಸಿಡಿದೆದಿದ್ದಾರೆ. ಕಳೆದ ಆರೇಳು ತಿಂಗಳಿಂದ ಬೂದಿ ಮುಚ್ಚಿದ...

ಯೆಲ್ಲೋ ಎಕ್ಸ್​​ಪ್ರೆಸ್ ಲಾಜಿಸ್ಟಿಕ್ ಕಂಪನಿ ಮೇಲೆ ಸಿಐಡಿ ದಾಳಿ

3 months ago

ಬೆಂಗಳೂರು: ನೆಲಮಂಗಲ ಮತ್ತು ಮತ್ತೀಕೆರೆಯಲ್ಲಿರುವ ಯೆಲ್ಲೋ ಎಕ್ಸ್​​ಪ್ರೆಸ್ ಲಾಜಿಸ್ಟಿಕ್ ಕಂಪನಿ ಮೇಲೆ ಸಿಐಡಿ ದಾಳಿ ನಡೆಸಿದೆ. ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಈ ಹಿಂದೆ ದಾಳಿ ನಡೆಸಿತ್ತು. ನಂತರ ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾವಣೆ ಮಾಡಿತ್ತು. ...

ಐಎಂಎ ವಂಚನೆ ಪ್ರಕರಣ- ಎಫ್‌ಐಆರ್‌ನಲ್ಲಿದ್ದ ಹೆಸರು ಚಾರ್ಜ್ ಶೀಟ್‍ನಲ್ಲಿ ಕಣ್ಮರೆ

4 months ago

ಬೆಂಗಳೂರು: ಭಾರೀ ಸುದ್ದಿಯಾಗಿದ್ದ ಐಎಂಎ ಜ್ಯುವೆಲ್ಸ್ ಮಾಲೀಕ ಮನ್ಸೂರ್ ಖಾನೆ ವಂಚನೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ದೊರೆತಿದೆ. ಗ್ರಾಹಕರಿಗೆ ವಂಚನೆ ಮಾಡಿರುವ ಸಂಬಂಧ ಎಫ್‌ಐಆರ್‌ನಲ್ಲಿದ್ದ ಆರೋಪಿಗಳ ಹೆಸರು ಚಾರ್ಜ್ ಶೀಟ್‍ನಲ್ಲಿ ಕಣ್ಮರೆಯಾಗಿದೆ. ಚಾರ್ಜ್ ಶೀಟ್‍ನಲ್ಲಿ ಐವರು ಆರೋಪಿಗಳ ಹೆಸರನ್ನು ಸಿಬಿಐ ಕೈಬಿಟ್ಟಿದೆ....

ಐಎಂಎ ವಂಚನೆ ಪ್ರಕರಣ-ಜಮೀರ್ ಅಹ್ಮದ್‍ಗೆ ಮುಂದುವರಿದ ವಿಚಾರಣೆ

4 months ago

ಬೆಂಗಳೂರು: ಐಎಂಎ ವಂಚನೆ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಿದ್ದು, ಮಾಜಿ ಸಚಿವ ಜಮೀರ್ ಅಹ್ಮದ್ ಅವರನ್ನು ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಆರ್.ಟಿ.ನಗರದ ಸಿಬಿಐ ಕಚೇರಿಯಲ್ಲಿ ಜಮೀರ್ ಅಹ್ಮದ್ ವಿಚಾರಣೆ ನಡೆಯಲಿದೆ. ಜಮೀರ್ ಅಹ್ಮದ್ ಸರ್ಫೆಂಟೈನ್ ರಸ್ತೆಯಲ್ಲಿರುವ ನಿವೇಶನವನ್ನು ಕಡಿಮೆ ಬೆಲೆಯಲ್ಲಿ ಮನ್ಸೂರ್...

ಐಎಂಎ ಪ್ರಕರಣದಲ್ಲಿ ರೋಷನ್ ಬೇಗ್ ಆರೋಪಿಯೋ? ಸಾಕ್ಷಿಯೋ?

4 months ago

-ಗೊಂದಲಕ್ಕೆ ಕಾರಣವಾಯ್ತು ರಾಜ್ಯಪಾಲರು ಬರೆದ ಪತ್ರ ಬೆಂಗಳೂರು: ರಾಜ್ಯಪಾಲ ವಜುಭಾಯಿ ವಾಲಾ ಅವರು ಬರೆದ ಪತ್ರವೊಂದು ಹಲವು ಅನುಮಾನ ಮತ್ತು ಗೊಂದಲಕ್ಕೆ ಕಾರಣವಾಗಿದೆ. ಐಎಂಎ ಪ್ರಕರಣದಲ್ಲಿ ಮಾಜಿ ಸಚಿವ, ರೋಷನ್ ಬೇಗ್ ಆರೋಪಿಯೋ ಅಥವಾ ಸಾಕ್ಷಿಯೋ ಎಂಬ ಗೊಂದಲವನ್ನು ಹುಟ್ಟು ಹಾಕಿದೆ....

ಐಎಂಎ ಸಾಕ್ಷ್ಯ ನಾಶ – ಮುಂದಿನ ವಾರ ರಾಜಕಾರಣಿಗಳಿಗೆ ಸಿಬಿಐನಿಂದ ಸಮನ್ಸ್?

4 months ago

ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಬಹುಕೋಟಿ ಹಗರಣ ಸಂಬಂಧ ವಿಚಾರಣೆ ನಡೆಸುತ್ತಿರುವ ಸಿಬಿಐ ಮುಂದಿನ ವಾರ ರಾಜ್ಯದ ಪ್ರಮುಖ ರಾಜಕಾರಣಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡುವ ಸಾಧ್ಯತೆಯಿದೆ. ಬಂಧನಕ್ಕೆ ಒಳಗಾಗಿರುವ ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ ವಿಚಾರಣೆಯ ಸಮಯದಲ್ಲಿ...

ಶಾ ಎರಡನೇ ಆದೇಶ-ಘಟಾನುಘಟಿಗಳು ಲಾಕ್, ಬಿಎಸ್‍ವೈ ರಾಕ್!

5 months ago

-ಐಎಂಎ ಪ್ರಕರಣ ಸಿಬಿಐಗೆ? ಬೆಂಗಳೂರು: ಫೋನ್ ಟ್ಯಾಪಿಂಗ್ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಫೋನ್ ಕದ್ದಾಲಿಕೆ ಪ್ರಕರಣವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆ ಮೇರೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿಬಿಐಗೆ ವರ್ಗಾಯಿಸಿದ್ದಾರೆ. ಇದೀಗ ಅಮಿತ್ ಶಾ ಎರಡನೇ ಸಂದೇಶವೊಂದನ್ನು...