Sunday, 20th January 2019

4 days ago

ತಮಿಳುನಾಡಿನ ಪಂಚಾಂಗ ಬಂದಿದೆ, ನಮ್ದು ಬಂದ್ಮೇಲೆ ನೋಡಿ ಹೇಳ್ತೀನಿ: ರೇವಣ್ಣ ವ್ಯಂಗ್ಯ

ಹಾಸನ: ಆಪರೇಷನ್ ಕಮಲದ ಬಗ್ಗೆ ಯಾವುದೇ ಟೆನ್ಷನ್ ಇಲ್ಲ. ನಿನ್ನೆ ತಮಿಳುನಾಡು ಪಂಚಾಂಗ ಬಂದಿದೆ. ನಮ್ಮ ಪಂಚಾಂಗ ಬರಬೇಕಲ್ಲ. ಅದನ್ನು ನೋಡಿ ಮುಂದೆ ಎನಾಗುತ್ತದೆ ಎನ್ನುವುದನ್ನು ಹೇಳ್ತೀನಿ ಅಂತ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಪರೇಷನ್ ಕಮಲ ಮಾಡಿದರೆ ನಮಗೇನು ಟೆನ್ಷನ್ ಇಲ್ಲ. ನಾವು ಆರಾಮವಾಗಿದ್ದೇವೆ. ಏನಾದ್ರು ಹೊಲ ಮನೆ ಕಳೆದುಕೊಳ್ಳೊದಾದ್ರೆ ಟೆನ್ಷನ್ ತಗೋಬೇಕು. ನಮ್ಮದು ಯಾವುದೂ ಹೋಗಿಲ್ಲ ಎಂದರು. ನಾವು ಯಾವಾಗಲೂ ಕೂಲ್, ಸಿಟ್ಟು ಇಟ್ಟುಕೊಂಡು […]

1 week ago

ತುರ್ತು ಕಾಮಗಾರಿ ನಿಯಮದಡಿ ಪರಂಗಾಗಿ ರೇವಣ್ಣ ಲಕ್ಷ ಲಕ್ಷ ಖರ್ಚು..!

ಬೆಂಗಳೂರು: ರಾಜ್ಯದಲ್ಲಿ ಬರಗಾಲವಿದ್ರೂ ಸಮ್ಮಿಶ್ರ ಸರ್ಕಾರದಲ್ಲಿ ಖರ್ಚಿಗೆ ಕಮ್ಮಿಯೇನಿಲ್ಲ. ವಿಧಾನಸೌಧದಲ್ಲಿರುವ ಉಪ ಮುಖ್ಯಮಂತ್ರಿ ಪರಮೇಶ್ವರ್ ಕೊಠಡಿಯ ನವೀಕರಣಕ್ಕೆ 70 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಪರಮೇಶ್ವರ್‍ಗೆ ಗೃಹ ಖಾತೆ ಹೋದಾಗ ದಲಿತರಿಗೆ ಅನ್ಯಾಯ ಎಂದು ರೇವಣ್ಣ ಹೇಳಿದ್ದರು. ಈಗ ಪರಮೇಶ್ವರ್ ಮೇಲಿನ ಪ್ರೀತಿಗೆ ರೇವಣ್ಣ ಅವರು ಇಲಾಖೆ ನಿಯಮವೇ ಬ್ರೇಕ್ ಮಾಡಿದ್ದಾರೆ. ಕಾಂಗ್ರೆಸ್‍ನಲ್ಲಿ ಯಾರ ಕೆಲಸ...

ಮಂತ್ರಿಗಿರಿಯನ್ನೇ ಪುಟಗೋಸಿ ಅಂದ್ರು ಸಚಿವ ರೇವಣ್ಣ

3 weeks ago

– ಸೂಪರ್ ಸಿಎಂ ವಿರುದ್ಧ ಮಾಜಿ ಸಚಿವ ಸುರೇಶ್ ವಾಗ್ದಾಳಿ ಬೆಂಗಳೂರು: ಬಿಸ್ಕೆಟ್ ಆಯ್ತು, ಟೋಪಿ ಆಯ್ತು, ಈಗ ಪುಟಗೋಸಿ. ಮಂತ್ರಿಗಿರಿಯನ್ನೇ ಪುಟಗೋಸಿ ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಕರೆದಿದ್ದಾರೆ. ಎಚ್.ಡಿ ರೇವಣ್ಣ ಅವರು ಮಂತ್ರಿಗಿರಿ ಹೇಳಿಕೆ ವಿರುದ್ಧ ಬಿಜೆಪಿಯಿಂದ...

ಸಚಿವ ರೇವಣ್ಣ ದಾರಿಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

4 weeks ago

ಬೆಳಗಾವಿ: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ದಾರಿಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೋಗುತ್ತಿದ್ದಾರೆ. ನಾನು ವಾಸ್ತು ಹಾಗೂ ಭವಿಷ್ಯವನ್ನು ನಂಬುತ್ತೇನೆ ಎಂದು ಹೇಳಿದ್ದಾರೆ. ನಾನೂ ಕೂಡಾ ವಾಸ್ತು ಫಾಲೋ ಮಾಡುತ್ತೀನಿ. ಯಾವುದೇ ಕ್ಷೇತ್ರಕ್ಕೆ ಭೇಟಿ ನೀಡುವಾಗ ಸ್ವಲ್ಪ ಸಮಯ ನೋಡುತ್ತೇನೆ. ದಿನಾಲು ರಾಶಿ...

ವಾಸ್ತು ಪ್ರಕಾರ ಮೀಟಿಂಗ್ ಹಾಲ್ ಟೇಬಲ್ ದಿಕ್ಕು ಬದಲಾಯಿಸಲು ರೇವಣ್ಣ ಸೂಚನೆ

1 month ago

ಹುಬ್ಬಳ್ಳಿ: ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಅವರು ಪ್ರವಾಸಿ ಮಂದಿರ ಉದ್ಘಾಟನೆಗೆ ಹೋಗಿ ವಾಸ್ತು ಪ್ರಕಾರ ಮೀಟಿಂಗ್ ಹಾಲ್ ಟೇಬಲ್‍ನ ದಿಕ್ಕನ್ನೇ ಬದಲಾಯಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಪ್ರವಾಸಿ ಮಂದಿರ ಉದ್ಘಾಟನೆಗಾಗಿ ಸಚಿವ ರೇವಣ್ಣ ಅವರು ಆಗಮಿಸಿದ್ದರು. ಈ ವೇಳೆ ಮೀಟಿಂಗ್ ಹಾಲ್ ನ...

ರಾಹುಕಾಲ ನೋಡಿ ವಾಹನದಿಂದಿಳಿದ ಸಚಿವ ರೇವಣ್ಣ

1 month ago

ಬೆಳಗಾವಿ: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಬೆಳಗಾವಿಯಲ್ಲೂ ಮತ್ತೆ ರಾಹುಕಾಲ ನೋಡಿ ವಾಹನದಿಂದ ಇಳಿದಿದ್ದಾರೆ. ಬೆಳಗಾವಿ ಕೆಶಿಪ್ ಅವತಿಯಿಂದ ರಸ್ತೆ ಸುರಕ್ಷತಾ ಅಭಿಯಾನದಲ್ಲಿ ಭಾಗವಹಿಸಲು ರೇವಣ್ಣ ಅವರು ರಾಹುಕಾಲ ವೀಕ್ಷಿಸಿದ್ದಾರೆ. ಕಾರ್ಯಕ್ರಮ ಸ್ಥಳಕ್ಕೆ ರೇವಣ್ಣ ಬಂದರೂ ವಾಹನದಿಂದ ಇಳಿಯಲಿಲ್ಲ. ರಾಹುಕಾಲ ಮುಗಿದ ಬಳಿಕವೇ...

ಲೋಕೋಪಯೋಗಿ ಇಲಾಖೆಯಿಂದ ಕಬ್ಬನ್ ಪಾರ್ಕ್ ಗೆ ಸ್ಕೆಚ್..!

1 month ago

ಬೆಂಗಳೂರು: ಕಬ್ಬನ್ ಪಾರ್ಕ್ ವ್ಯಾಪ್ತಿಯಲ್ಲಿ ಹೋಟೆಲ್ ನಿರ್ಮಾಣಕ್ಕೆ ಅನುಮತಿ ನೀಡುವ ಮೂಲಕ ಪಾರ್ಕ್‍ಗೆ ಲೋಕೋಪಯೋಗಿ ಇಲಾಖೆ ಸ್ಕೆಚ್ ಹಾಕಿರುವುದು ಇದೀಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಕಬ್ಬನ್ ಪಾರ್ಕ್ ವ್ಯಾಪ್ತಿಯಲ್ಲಿ ಹೆಚ್ಚು ಬಿಲ್ಡಿಂಗ್  ಗಳ ನಿರ್ಮಾಣ ನಿಷಿದ್ಧವಾಗಿದೆ. ಆದರೂ, ಅಕ್ರಮ ಕಟ್ಟಡ, ಹೋಟೆಲ್‍ಗಳ...

ಮಾಟ ಮಂತ್ರ ಮಾಡಿದ್ರೆ ನಮಗೆ ತಟ್ಟಲ್ಲ, ಮಾಡಿದವರಿಗೆ ಅದು ರಿವರ್ಸ್ ಆಗುತ್ತೆ- ರೇವಣ್ಣ

1 month ago

ಹಾಸನ: ನಮ್ಮ ಸರ್ಕಾರಕ್ಕೆ ಯಾರೇ ಮಾಟ ಮಂತ್ರ ಮಾಡಿದರೂ ತಟ್ಟಲ್ಲ, ಯಾರು ಮಾಡಿಸುತ್ತಾರೋ ಅವರಿಗೆ ಅದು ರಿವರ್ಸ್ ಆಗುತ್ತದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಹೇಳಿದ್ದಾರೆ. ಯಡಿಯೂರಪ್ಪ ಅವರು ಕೇರಳಕ್ಕೆ ಮಾಟ ಮಂತ್ರ ಮಾಡಿಸಿಕೊಂಡು ಬರಲು ಹೋಗಿದ್ದಾರೆ ಎನ್ನುವ ಸುದ್ದಿಗೆ...