1 week ago

11 ದುಬಾರಿ ಕಾರುಗಳಿಗೆ ಆಯುಧ ಪೂಜೆ ಸಲ್ಲಿಸಿದ ದಚ್ಚು

– ಪುಟ್ಟ ಪೋರಿಯೊಂದಿಗೆ ಡಿಬಾಸ್ ಡ್ಯಾನ್ಸ್ ಬೆಂಗಳೂರು: ಸ್ಯಾಂಡಲ್‍ವುಡ್‍ನ ದುಬಾರಿ ಕಾರುಗಳ ಒಡೆಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದು ದಿನ ತಡವಾಗಿ ಆಯುಧ ಪೂಜೆಯನ್ನು ಆಚರಿಸಿದ್ದಾರೆ. ಆರ್.ಆರ್. ನಗರದಲ್ಲಿರುವ ತೂಗುದೀಪ್ ಮನೆಯ ಮುಂದೆ ಕಾರುಗಳ ಪೂಜೆ ಮಾಡುವ ಮೂಲಕ ಅದ್ಧೂರಿ ಆಯುಧ ಪೂಜೆಯನ್ನು ನೆರವೇರಿಸಿದ್ದಾರೆ. ಒಂದು ದಿನತಡವಾದ್ರು ಲೆಟೇಸ್ಟಾಗಿ ಆಯುಧ ಪೂಜೆ ಮಾಡಿರುವ ದಾಸನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನವರಾತ್ರಿಯ ಆಯುಧ ಪೂಜೆಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಯಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. […]

2 weeks ago

ಕೆರೆಯಲ್ಲಿ ಸೈಕಲ್ ತೊಳೆದು, ಈಜಲು ಇಳಿದ ಮೂವರು ಬಾಲಕರು ನೀರುಪಾಲು

ಚಿಕ್ಕಮಗಳೂರು: ಆಯುಧ ಪೂಜೆಯ ಹಿನ್ನೆಲೆ ಕೆರೆಯಲ್ಲಿ ತಮ್ಮ ಸೈಕಲ್‍ಗಳನ್ನು ತೊಳೆದು, ಬಳಿಕ ಈಜಲು ನೀರಿಗೆ ಇಳಿದಿದ್ದ ಮೂವರು ಬಾಲಕರು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ಬಿಳೇಕಲ್ಲಳ್ಳಿ ಗ್ರಾಮದಲ್ಲಿ ನಡೆದಿದೆ. ಹೌಸಿಂಗ್ ಬೋರ್ಡ್ ನಿವಾಸಿಗಳಾದ ಮುರುಳಿ(15), ಜೀವಿತ್(14), ಚಿರಾಗ್(15) ಮೃತ ದುರ್ದೈವಿಗಳು. ಸೋಮವಾರ ಆಯುಧ ಪೂಜೆ ಇದ್ದ ಕಾರಣಕ್ಕೆ ಸಂಜೆ ತಮ್ಮ ಸೈಕಲ್‍ಗಳನ್ನು ತೊಳೆಯಲೆಂದು ಬಿಳೇಕಲ್ಲಳ್ಳಿ ಗ್ರಾಮದ...

ಗನ್‍ಗಳನ್ನಿಟ್ಟು ಮುತ್ತಪ್ಪ ರೈಯಿಂದ ಆಯುಧ ಪೂಜೆ!

1 year ago

ಬೆಂಗಳೂರು: ನವರಾತ್ರಿ ಕೊನೆಯ ದಿನವಾದ ಇಂದು ದೇಶದೆಲ್ಲೆಡೆ ಆಯುಧಪೂಜೆಯ ಸಂಭ್ರಮ ಮನೆ ಮಾಡಿದ್ದು, ಜಯ ಕರ್ನಾಟಕ ಸಂಘಟನೆಯ ಮುಖ್ಯಸ್ಥ ಮುತ್ತಪ್ಪ ರೈ ಆಯುಧ ಪೂಜೆ ನಡೆಸಿದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ತಮ್ಮಲ್ಲಿದ್ದ ಕೋವಿ, ಮೆಷನ್ ಗನ್...

ಹಿಂದೂಗಳಂತೆ ಆಯುಧ ಪೂಜೆ ಮಾಡಿ ಸಂಭ್ರಮಿಸಿದ ಮುಸ್ಲಿಮ್ ವ್ಯಕ್ತಿ!

1 year ago

ಚಿಕ್ಕಮಗಳೂರು: ನಾಡಿನೆಲ್ಲೆಡೆ ಇಂದು ದಸರಾ ಹಾಗೂ ಆಯುಧ ಪೂಜೆಯ ಸಂಭ್ರಮ. ಕಾಫಿನಾಡಿ ಚಿಕ್ಕಮಗಳೂರಿನಲ್ಲೂ ಜನಸಾಮಾನ್ಯರು ಸಂಭ್ರಮದಿಂದ ಆಯುಧ ಪೂಜೆಯನ್ನ ಆಚರಿಸಿದ್ದಾರೆ. ಆದರೆ ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂಗಳಂತೆ ತನ್ನ ವಾಹನಗಳಿಗೆ ಆಯುಧ ಪೂಜೆ ಮಾಡಿರೋದು ಮಾತ್ರ ವಿಶೇಷವಾಗಿದೆ. ಎಸ್‍ಎಂಎಸ್ ಬಸ್ ಮಾಲೀಕರಾದ ಸಿರಾಜ್...

ಆಯುಧ ಪೂಜೆ ಮೊಟಕುಗೊಳಿಸಿ ಬೆಂಗ್ಳೂರಿಗೆ ಪ್ರಯಾಣಿಸಿದ್ರು ಪ್ರಮೋದಾದೇವಿ!

1 year ago

ಮೈಸೂರು: ಇಂದು ನಾಡಿನಾದ್ಯಂತ ಆಯುಧ ಪೂಜೆ ಹಬ್ಬವನ್ನು ಆಚರಿಸಲಾಗುತ್ತಿದೆ. ಆದರೆ ಇಂದು ಅರಮನೆಯಲ್ಲಿ ನಡೆಯುತ್ತಿದ್ದ ಪೂಜಾ ಕಾರ್ಯಕ್ರಮಗಳನ್ನು ರಾಜವಂಶಸ್ಥೆ ಪ್ರಮೋದಾದೇವಿ ಅವರು ಮೊಟಕುಗೊಳಿಸಿ ದಿಢೀರ್ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ರಾಜವಂಶಸ್ಥೆ ವಿಶಾಲಾಕ್ಷಿ ದೇವಿಯವರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಮೈಸೂರು ಅರಮನೆಯಿಂದ ದಿಢೀರ್ ಆಗಿ...

ಸರ್ಕಾರದ ಜಿಪುಣತನಕ್ಕೆ ತಿರುಗೇಟು ಕೊಟ್ಟ KSRTC, BMTC ಸಿಬ್ಬಂದಿ

1 year ago

ಬೆಂಗಳೂರು: ಆಯುಧ ಪೂಜೆ ಬಂತು ಅಂದ್ರೆ ಜನರಿಗೆ ಎಲ್ಲಿಲ್ಲದ ಖುಷಿ. ಅದರಲ್ಲಿಯೂ ಸವಾರರು ತಮ್ಮ ಪ್ರೀತಿಯ ವಾಹನಗಳನ್ನು ಅಲಂಕರಿಸಿ ಪೂಜೆ ಮಾಡುತ್ತಾರೆ. ಅಂತೆಯೇ ನಾಡಿನ ಜನರ ಜೀವನಾಡಿಗಳಾದ ಸಾರಿಗೆ ಸಂಸ್ಥೆಯ ಚಾಲಕರು ತಾವು ಪ್ರತಿನಿತ್ಯ ಚಲಾಯಿಸುವ ಬಸ್ ಗಳಿಗೆ ಪೂಜೆ ಸಲ್ಲಿಸುತ್ತಾರೆ....

ರೂಟ್ ಬಸ್‍ಗಳ ಪೂಜೆ ವೆಚ್ಚಕ್ಕೆ 10 ರೂ. ಕೊಟ್ಟ ಸಾರಿಗೆ ಸಂಸ್ಥೆ!

1 year ago

ಕೊಪ್ಪಳ: ದಸರಾ ಹಬ್ಬ ಆಚರಣೆಯಲ್ಲಿ ನಡೆಯುವ ಆಯುಧ ಪೂಜೆ ಹಿನ್ನೆಲೆಯಲ್ಲಿ ಬಸ್‍ಗಳ ಪೂಜೆಗಾಗಿ ನೀಡಿರುವ ಹಣ ಎಷ್ಟು ಎಂದು ಕೇಳಿದರೆ ಆಶ್ಚರ್ಯವಾಗುತ್ತದೆ. ಜೊತೆಗೆ ಅದು ಅಪಹಾಸ್ಯಕ್ಕೂ ಗುರಿಯಾಗುತ್ತಿದೆ. ರಾಜ್ಯ ಸಾರಿಗೆ ಸಂಸ್ಥೆ ರೂಟ್ ಬಸ್‍ಗಳಿಗೆ ಪೂಜೆ ವೆಚ್ಚವೆಂದು ಕೇವಲ 10 ರೂ...

ಅಂಬಾವಿಲಾಸ ಅರಮನೆಯಲ್ಲಿ ಆಯುಧ ಪೂಜೆಯ ಸಂಭ್ರಮ

1 year ago

ಮೈಸೂರು: ಜಿಲ್ಲೆಯ ಅಂಬಾವಿಲಾಸ ಅರಮನೆಯಲ್ಲಿ ಇಂದು ಆಯುಧ ಪೂಜೆ ಸಂಭ್ರಮದಿಂದ ತುಂಬಿ ತುಳುಕುತ್ತಿದೆ. ಜಯ ಮಾರ್ತಾಂಡ ದ್ವಾರದ ಬಳಿ ಇರುವ ಕೋಡಿಸೋಮೇಶ್ವರ ದೇವಸ್ಥಾನದಲ್ಲಿ ಆಯುಧಗಳಿಗೆ ಪೂಜೆ ಮಾಡಲಾಗಿದೆ. ಸಿಬ್ಬಂದಿ ಅರಮನೆಯಿಂದ ದೇವಸ್ಥಾನದವರೆಗೆ ಪಟ್ಟದ ಆನೆ, ಕುದುರೆ ಒಂಟೆಗಳ ಜೊತೆ ಕೊಂಡೊಯ್ಯಲಾಗಿತ್ತು. ಪೂಜೆ...