Wednesday, 17th July 2019

2 days ago

ಶಾಲಾ ನೀರಿನ ಟ್ಯಾಂಕಿಗೆ ವಿಷ ಬೆರೆಸಿದ ದುಷ್ಕರ್ಮಿಗಳು – 11 ಮಕ್ಕಳು ಅಸ್ವಸ್ಥ

ಮಂಡ್ಯ: ಶಾಲೆಯೊಂದರ ನೀರಿನ ಟ್ಯಾಂಕಿಗೆ ದುಷ್ಕರ್ಮಿಗಳು ವಿಷ ಬೆರೆಸಿದ್ದು, ವಿಷ ಮಿಶ್ರಿತ ನೀರು ಕುಡಿದು 11 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಮಂಡ್ಯ ತಾಲ್ಲೂಕಿನ ಎ.ಹುಲ್ಕೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನೀರಿನ ಟ್ಯಾಂಕಿಗೆ ದುಷ್ಕರ್ಮಿಗಳು ವಿಷ ಬೆರೆಸಿದ್ದಾರೆ. ಈ ಬಗ್ಗೆ ಅರಿವಿಲ್ಲದ ವಿದ್ಯಾರ್ಥಿಗಳು ಟ್ಯಾಂಕ್ ನೀರನ್ನು ಸೇವಿಸಿ ಅಸ್ವಸ್ಥ ಗೊಂಡಿದ್ದಾರೆ. ಈ ವೇಳೆ ತಕ್ಷಣ ಅಸ್ವಸ್ಥ ಮಕ್ಕಳನ್ನು ಕೊತ್ತತ್ತಿ ಪ್ರಾಥಮಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿದ್ದು ಅವರನ್ನು ಹೆಚ್ಚಿನ […]

1 month ago

ನೀರಾ ಸೇವಿಸಿ ಬಾಲಕ ಸೇರಿ 12 ಮಂದಿ ಆಸ್ಪತ್ರೆಗೆ ದಾಖಲು

ಚಿಕ್ಕಬಳ್ಳಾಪುರ: ನೀರಾ ಸೇವಿಸಿದ್ದ 12 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆದಿದೆ. ತಾಲೂಕಿನ ಗುಟ್ಟಪಾಳ್ಯ ಗ್ರಾಮದ ಓರ್ವ ಬಾಲಕ ಸೇರಿ ಮೂವರು ಮಹಿಳೆಯರು, 8 ಮಂದಿ ಪುರುಷರು ಬಾಗೇಪಲ್ಲಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಂದಹಾಗೆ ಕೂಲಿ ಕಾಯಕಕ್ಕೆ ಎಂದು ಗಡಿಭಾಗದ ಆಂಧ್ರದ ಕಮ್ಮವಾರಪಲ್ಲಿಗೆ ತೆರಳಿದ್ದ ಈ 12 ಮಂದಿ...

ರಾಮರಸ ಕುಡಿದ 8 ಮಂದಿ ಅಸ್ವಸ್ಥ!

3 months ago

ಹಾಸನ: ರಾಮರಸ ಕುಡಿದು ಎಂಟು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಹಾಸನದ ಬೈಲಾಹಳ್ಳಿ ಗ್ರಾಮದಲ್ಲಿ ನಡೆದಿದೆ. ಶನಿವಾರ ರಾಜ್ಯದ ಎಲ್ಲಾ ಕಡೆ ರಾಮನವಮಿಯನ್ನು ಆಚರಿಸಲಾಗಿತ್ತು. ಹಾಸನದ ಬೈಲಾಹಳ್ಳಯಲ್ಲೂ ರಾಮನವಮಿಯನ್ನು ಅದ್ಧೂರಿಯಾಗಿಯೇ ಆಚರಿಸಲಾಗಿತ್ತು. ಈ ವೇಳೆ ಅಲ್ಲಿ ರಾಮರಸ ತಯಾರಿಸಲಾಗಿದ್ದು. ಇದನ್ನು...

ಲಸಿಕೆ ಹಾಕಿಸಿಕೊಂಡ ಬಳಿಕ ಮಕ್ಕಳು ಅಸ್ವಸ್ಥ- 1 ಮಗು ಸಾವು, 26 ಮಕ್ಕಳು ಆಸ್ಪತ್ರೆಗೆ ದಾಖಲು

4 months ago

ಹೈದರಾಬಾದ್: ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆದ ಬಳಿಕ ಒಂದು ಮಗು ಸಾವನ್ನಪ್ಪಿದ್ದು, ಸುಮಾರು 26 ಮಕ್ಕಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಆಂಧ್ರ ಪ್ರದೇಶದ ನಾಮ್‍ಪಲ್ಲಿಯಲ್ಲಿ ನಡೆದಿದೆ. ಗುರುವಾರ ನಾಮ್‍ಪಲ್ಲಿಯಲ್ಲಿರುವ ಸಾರ್ವಜನಿಕರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಕ್ಕಳು ಲಸಿಕೆ ಹಾಕಿಸಿಕೊಂಡ...

ಕಳ್ಳಬಟ್ಟಿ ಸಾರಾಯಿ ಸೇವಿಸಿ 80 ಮಂದಿ ದುರ್ಮರಣ- 300ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

5 months ago

ಗುವಾಹಟಿ: ಕಳ್ಳಬಟ್ಟಿ ಸಾರಾಯಿ ಸೇವಿಸಿ 80 ಮಂದಿ ಟೀ ಎಸ್ಟೇಟ್ ಕಾರ್ಮಿಕರು ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ದುರ್ಘಟನೆ ಪೂರ್ವ ಅಸ್ಸಾಂನ ಗೊಲ್ಘಾಟ್ ಹಾಗೂ ಜೊರ್ಹಟ್ ಜಿಲ್ಲೆಯಲ್ಲಿ ನಡೆದಿದೆ. ಗುರುವಾರ ರಾತ್ರಿ ಸಲ್ಮರಾ ಟೀ ಎಸ್ಟೇಟ್‍ನಲ್ಲಿ...

ಬಿಸಿಯೂಟ ಸೇವಿಸಿದ್ದ 30 ಮಕ್ಕಳು ರಾತ್ರಿ ಅಸ್ವಸ್ಥ

5 months ago

ಬೆಳಗಾವಿ: ಬಿಸಿಯೂಟ ಸೇವಿಸಿದ್ದ ಮಕ್ಕಳು ರಾತ್ರಿ ಅಸ್ವಸ್ಥರಾದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಡಿ ನಾಗಲಾಪುರದಲ್ಲಿ ನಡೆದಿದೆ. ನಾಗಲಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಮಕ್ಕಳು ಮಧ್ಯಾಹ್ನ ಬಿಸಿಯೂಟ ಸೇವಿಸಿದ್ದಾರೆ. ಶಾಲೆಯ ಅವಧಿ ಮುಗಿದ ನಂತರ ರಾತ್ರಿ ಮಕ್ಕಳಿಗೆ ವಾಂತಿ...

ಜೋಪಾನ, ಧೈರ್ಯವಾಗಿರಿ ಎನ್ನುತ್ತಿದ್ದ ಅಣ್ಣನೇ ಇಲ್ಲ- ಗುರು ತಮ್ಮ ಮಧು

5 months ago

– ಮತ್ತೊಮ್ಮ ತಮ್ಮ ಆನಂದ್ ಅಸ್ವಸ್ಥ ಮಂಡ್ಯ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನ ಆತ್ಮಾಹುತಿ ದಾಳಿಯಲ್ಲಿ ಮಂಡ್ಯದ ಯೋಧ ಗುರು ಹುತಾತ್ಮರಾಗಿದ್ದು, ಇದೀಗ ಜಿಲ್ಲೆಯಲ್ಲಿ ನೀರವ ಮೌನ ಆವರಿಸಿದೆ. ಇತ್ತ ಯೋಧ ಗುರು ಅವರ ತಮ್ಮ ಆನಂದ್ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ಗುರು...

ಬಿಸಿಯೂಟ ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ!

5 months ago

ಚಿಕ್ಕಬಳ್ಳಾಪುರ: ಇಂದು ಮಧ್ಯಾಹ್ನ ಬಿಸಿಯೂಟ ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲ್ಲೂಕು ಲಕ್ಷ್ಮೀದೇವಿಕೋಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ಪ್ರತಿನಿತ್ಯ ವಿದ್ಯಾರ್ಥಿಗಳು ಶಾಲೆಯಲ್ಲಿಯೇ ಬಿಸಿಯೂಟ ಸೇವಿಸುತ್ತಿದ್ದರು. ಹಾಗೆಯೇ ಇಂದು ಕೂಡ ಮಧ್ಯಾಹ್ನದ ಬಿಸಿಯೂಟವನ್ನು...