Friday, 20th July 2018

Recent News

2 months ago

ಪ್ರಚಾರದ ವೇಳೆ ಭಾರೀ ಅವಘಡದಿಂದ ಪಾರಾದ ರಾಕಿಂಗ್ ಸ್ಟಾರ್!

ಬೆಂಗಳೂರು: ರಾಜ್ಯಾದ್ಯಂತ ತಮ್ಮ ಇಷ್ಟದ ಅಭ್ಯರ್ಥಿ ಪರ ನಟ ಯಶ್ ಪ್ರಚಾರ ಮಾಡುತ್ತಿದ್ದಾರೆ. ಹೀಗೆ ಪ್ರಚಾರ ಮಾಡುವ ವೇಳೆ ನಡೆದ ಒಂದು ಅವಘಡದಿಂದಾಗಿ ಯಶ್ ಅದೃಷ್ಟವಶಾತ್ ಪಾರಾಗಿದ್ದಾರೆ. ತಾರೆಯರು ಪ್ರಚಾರಕ್ಕೆ ಬರುತ್ತಾರೆ ಎಂದರೆ ಭಾರೀ ಜನ ಸೇರ್ತಾರೆ. ತಮ್ಮ ನೆಚ್ಚಿನ ನಟನನ್ನ ನೋಡೋಕೆ ಸಿಗೋ ಅವಕಾಶವನ್ನ ಉಯೋಗಿಸಿಕೊಳ್ತಾರೆ. ಈ ವೇಳೆ ಆಗದವವರು ಆಗುವವರು ಯಾರು ಅನ್ನೋದು ಅಲ್ಲಿನ ಜನರ ಮಧ್ಯೆ ಗೊತ್ತಾಗಲ್ಲ. ಹೀಗೆ ಜನರ ಗುಂಪಿನಲ್ಲೇ ಇದ್ದ ಒಬ್ಬ ಕಿಡಿಗೇಡಿಯಿಂದ ಯಶ್ ಅವಘಡಕ್ಕೆ ಈಡಾಗುವ ಸಂದರ್ಭ ರಾಯಚೂರಿನ […]

4 months ago

ಬ್ರೇಕ್ ಫೇಲ್ ಆಗಿ ಡಿವೈಡರ್, ಮರಕ್ಕೆ ಡಿಕ್ಕಿ ಹೊಡೆದ ಶಾಲಾ ಬಸ್- ಚಾಲಕನಿಂದ 16 ಮಕ್ಕಳ ರಕ್ಷಣೆ

ಮುಂಬೈ: ಶಾಲಾ ಬಸ್‍ವೊಂದರ ಬ್ರೇಕ್ ಫೇಲ್ ಆಗಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ಬಸ್ ಚಾಲಕ 16 ಮಕ್ಕಳನ್ನು ಅಪಾಯದಿಂದ ಕಾಪಾಡಿದ್ದಾರೆ. ಗೋರೆಗಾಂವ್ ನ ಒಬೆರಾಯ್ ಮಾಲ್ ಸಿಗ್ನಲ್ ಬಳಿ ಈ ಘಟನೆ ಸಂಭವಿಸಿದೆ. ಅಪಘಾತಕ್ಕೀಡಾದ ಬಸ್ ಗೋಕುಲ್ಧಾಮ್ ನಲ್ಲಿರುವ ರಯಾನ್ ಇಂಟರ್ ನ್ಯಾಷನಲ್ ಶಾಲೆಗೆ ಸೇರಿದ್ದಾಗಿದೆ. ಶಾಲೆಯಿಂದ ಮಧ್ಯಾಹ್ನ ಸುಮಾರು 1.30ಕ್ಕೆ ವಿದ್ಯಾರ್ಥಿಗಳನ್ನು ಪಿಕ್ ಮಾಡಿದೆ....

ವಿಡಿಯೋ: ಬಳ್ಳಾರಿಯಲ್ಲಿ ರಥದ ಅಚ್ಚು ಮುರಿದು ನೆಲಕ್ಕೆ ಉರುಳಿತು ಮತ್ತೊಂದು ರಥ

5 months ago

ಬಳ್ಳಾರಿ: ಒಂದೂವರೆ ವರ್ಷದ ಹಿಂದೆಯಷ್ಟೇ ರಥೋತ್ಸವದ ವೇಳೆ ರಥದ ಅಚ್ಚು ಮುರಿದು ಕೊಟ್ಟೂರಿನ ಕೊಟ್ಟೂರೇಶ್ವರ ರಥ ಮಗುಚಿ ಬಿದ್ದಿತ್ತು. ಈ ಘಟನೆ ಮಾಸುವ ಮುನ್ನವೇ ಬಳ್ಳಾರಿ ಜಿಲ್ಲೆಯಲ್ಲಿ ಮತ್ತೊಂದು ರಥ ರಥೋತ್ಸವದ ವೇಳೆ ಮಗುಚಿ ಬಿದ್ದಿದೆ. ಹೊಸಪೇಟೆ ತಾಲೂಕಿನ ಗರಗ ನಾಗಾಲಾಪುರ...

ಕಾಲು ಜಾರಿ ಕೆಂಡದ ರಾಶಿಗೆ ಬಿದ್ರೂ ಸುಟ್ಟ ಗಾಯದ ನಡುವೆಯೂ ದೇವರ ಸೇವೆ ಪೂರ್ಣಗೊಳಿಸಿದ ಅರ್ಚಕ!

5 months ago

ಮಂಡ್ಯ: ಕೆಂಡ ಹಾಯುವ ವೇಳೆ ಆಯತಪ್ಪಿ ಅರ್ಚಕ ಕೊಂಡಕ್ಕೆ ಬಿದ್ದ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಿವಸ್ವಾಮಿ (55) ಕೆಂಡದ ರಾಶಿಗೆ ಬಿದ್ದ ಅರ್ಚಕ. ಇಂದು ಗ್ರಾಮದಲ್ಲಿ ಬಸವೇಶ್ವರ ದೇವರ ಕೊಂಡೋತ್ಸವ ನಡೆಯುತ್ತಿತ್ತು. ಮುಂಜಾನೆ 5...

ಜೇಡವನ್ನು ಸುಡಲು ಹೋಗಿ ತನ್ನ ಮನೆಯನ್ನೇ ಸುಟ್ಟುಕೊಂಡ!

6 months ago

ವಾಷಿಂಗ್ಟನ್: ವ್ಯಕ್ತಿಯೊಬ್ಬ ಜೇಡವನ್ನು ಕೊಲ್ಲಲು ಹೋಗಿ ಕೊನೆಗೆ ತನ್ನ ಮನೆಯನ್ನೇ ಸುಟ್ಟುಕೊಂಡು ಎಡವಟ್ಟು ಮಾಡಿಕೊಂಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಭಾನುವಾರ ಅಮೆರಿಕದ ಉತ್ತರ ಕ್ಯಾಲಿಫೋನಿರ್ಯಾದ ರೆಡಿಂಗ್ ನಲ್ಲಿರುವ ನಿವಾಸದಲ್ಲಿ ಈ ಘಟನೆ ನಡೆದಿದೆ. ಜೇಡಕ್ಕೆ ಬೆಂಕಿ ನೀಡಿ ಕೊಲ್ಲಲು ಯತ್ನಿಸಿದ್ದಾಗ ನನ್ನ...

ಚಿತ್ರೀಕರಣದ ವೇಳೆ 10 ಅಡಿ ಎತ್ತರದ ಮರದಿಂದ ಬಿದ್ದ ನಟ – ಇದು ಹಾರರ್ ಎಫೆಕ್ಟ್ ಅಂತಿದೆ ಚಿತ್ರತಂಡ

7 months ago

ಉಡುಪಿ: ನೈಜ ಕಥೆಯನ್ನು ಆಧರಿಸಿ ಶೂಟಿಂಗ್ ನಡೆಸುತ್ತಿರುವ ‘ಕತ್ತಲೆ ಕೋಣೆ’ ಸಿನಿಮಾ ಚಿತ್ರೀಕರಣದ ವೇಳೆ ಅವಘಡ ಸಂಭವಿಸಿದೆ. `ಕತ್ತಲೆ ಕೋಣೆ’ ಚಿತ್ರ ಕುಂದಾಪುರದ ಸಂದೇಶ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಈ ಚಿತ್ರಕ್ಕೆ ಕೇರಳ ಮತ್ತು ಮುಂಬೈ ಮೂಲದ ಕಲಾವಿದರು ಮತ್ತು...

ಹಾಸನದಲ್ಲಿ 30ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿದ್ದ ಬಸ್‍ಗೆ ಬೆಂಕಿ!

8 months ago

ಹಾಸನ: ಸುಮಾರು 30ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿದ್ದ ಖಾಸಗಿ ಬಸ್ಸೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಬಸ್ ಸುಟ್ಟು ಸಂಪೂರ್ಣ ಕರಕಲಾಗಿರುವ ಘಟನೆ ಜಿಲ್ಲೆಯ ಹೊರವಲಯದಲ್ಲಿ ಸಂಭವಿಸಿದೆ. ಹಾಸನ ಸಮೀಪದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕೆಂಚಟಹಳ್ಳಿ ಗ್ರಾಮದ ಬಳಿ ತಡರಾತ್ರಿ...

ಕೆಂಡ ಹಾಯುವಾಗ ಆಕಸ್ಮಿಕವಾಗಿ ಮುಗ್ಗರಿಸಿ ಬಿದ್ದ ಮಹಿಳೆ

9 months ago

ಬೆಂಗಳೂರು: ಕೆಂಡ ಹಾಯುವಾಗ ಆಕಸ್ಮಿಕವಾಗಿ ಮುಗ್ಗರಿಸಿ ಬಿದ್ದು ಮಹಿಳೆಯೊಬ್ಬರು ತೀವ್ರವಾಗಿ ಗಾಯಗೊಂಡಿರುವ ದಾರುಣ ಘಟನೆ ನಗರದ ಟಿ.ದಾಸರಹಳ್ಳಿಯ ಬಾಗಲಗುಂಟೆ ಬಳಿ ಘಟನೆ ನಡೆದಿದೆ. ಕೆಂಡಕ್ಕೆ ಬಿದ್ದ ಮಹಿಳೆಯನ್ನು ಗೌರಮ್ಮ ಎಂದು ಗುರುತಿಸಲಾಗಿದೆ. ಬಾಗಲಗುಂಟೆ ಗ್ರಾಮದೇವತೆ ಉತ್ಸವದ ವೇಳೆ ಅವಘಡ ಸಂಭವಿಸಿದೆ. ಗೌರಮ್ಮ...