Tuesday, 16th July 2019

1 week ago

ಕಣ್ಮುಂದೆಯೇ ರೈತ ಆತ್ಮಹತ್ಯೆಗೆ ಯತ್ನಿಸುತ್ತಿದ್ರೂ ನೋಡುತ್ತಾ ನಿಂತ ಪೊಲೀಸರು

ಜೈಪುರ್: ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸುತ್ತಿದ್ದರೂ ಪೊಲೀಸರು ನೋಡುತ್ತಾ, ನಗುತ್ತಾ ನಿಂತ ಅವಮಾನವೀಯ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಜುಂಜುನು ಜಿಲ್ಲೆಯ ಗುಧಾ ಗ್ರಾಮದ ಬಾಬೂರಾವ್ ಸೈನಿ (35) ಆತ್ಮಹತ್ಯೆಗೆ ಯತ್ನಿಸಿದ್ದ ರೈತ. ಘಟನೆಯಲ್ಲಿ ಸೈನಿ ಅವರ ದೇಹವು ಶೇ.90 ರಷ್ಟು ಸುಟ್ಟಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಆಗಿದ್ದೇನು?: ಜುಂಜುನು ಅರಣ್ಯ ಭೂಮಿಯಲ್ಲಿ ಕಟ್ಟಿದ್ದ ಅಕ್ರಮ ಮನೆ ತೆರವಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸರ ಜೊತೆಗೆ ತೆರಳಿದ್ದರು. ಇದನ್ನು ವಿರೋಧಿಸಿ ರೈತ ಸೈನಿ ಬೆಂಕಿ ಹಚ್ಚಿಕೊಂಡಿದ್ದಾರೆ. ಆದರೆ ಪೊಲೀಸರು ರಕ್ಷಿಸುವ […]

3 weeks ago

ಬಂಡೀಪುರದಲ್ಲಿ ಶೀಘ್ರವೇ ಚಾಲ್ತಿಗೆ ಬರಲಿದೆ ಗ್ರೀನ್ ಟ್ಯಾಕ್ಸ್

ಚಾಮರಾಜನಗರ: ರಾಜ್ಯದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ವಾಹನ ಸವಾರರಿಗೆ ಗ್ರೀನ್ ಟ್ಯಾಕ್ಸ್‌ನ್ನು ನಿಗದಿ ಮಾಡಲಾಗುತ್ತದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ತದೇಶದ ಅರಣ್ಯ ಪ್ರದೇಶದಲ್ಲಿ ಸಂಚಾರ ಮಾಡುವ ವಾಹನಗಳಿಗೆ ಇನ್ನು ಮುಂದೆ ಗ್ರೀನ್ ಟ್ಯಾಕ್ಸ್ ವಿಧಿಸಲಾಗುತ್ತದೆ. ಪರಿಸರ ರಕ್ಷಣೆಯ ಉದ್ದೇಶದಿಂದ ಈ ಹೊಸ ನಿಯಮವನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ...

ಒಂದೇ ದಿನ 2 ಕಾಳಿಂಗ ಸರ್ಪ ರಕ್ಷಣೆ -ವಿಡಿಯೋ ನೋಡಿ

4 weeks ago

ಕಾರವಾರ: ಮಳೆ ಬಂದರೆ ಸಾಕು ಸರಿಸೃಪಗಳು ಎಲ್ಲಿ ಬೇಕೆಂದರಲ್ಲಿ ಆಹಾರ ಅರಸಿ ಹೋಗುತ್ತವೆ. ಇದೀಗ ಆಹಾರ ಅರಸಿ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ಅಲ್ಲಿದ್ದ ಜನರನ್ನು ಭಯಗೊಳಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ನಗರದಲ್ಲಿ ನಡೆದಿದೆ. ಅಪರೂಪಕ್ಕೆ ಆಸ್ಪತ್ರೆಗೆ ಆಗಮಿಸಿದ್ದ ಕಾಳಿಂಗ...

ರಸ್ತೆ ನಿರ್ಮಾಣ ಹೆಸರಿನಲ್ಲಿ ಮರೆಯಾಗುತ್ತಿರುವ ಮುಳ್ಳಯ್ಯನಗಿರಿ!

2 months ago

ಚಿಕ್ಕಮಗಳೂರು: ರಸ್ತೆ ನಿರ್ಮಾಣ ಹೆಸರಿನಲ್ಲಿ ಮುಳ್ಳಯ್ಯನಗಿರಿಯೂ ಕಾಂಕ್ರೀಟ್ ನಾಡಾಗಿ ಸಿಮೆಂಟ್ ಧೂಳಲ್ಲಿ ಮರೆಯಾಗುವ ಕಾಲ ಬರುತ್ತಿದೆ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಮನೆ ಮಾಡಿದೆ. ಹಿಮಾಲಯ ಪರ್ವತಕ್ಕಿಂತ ಹಳೆಯದ್ದಾದ ದಟ್ಟ ಕಾನನದ ಶೋಲಾ ಕಾಡುಗಳ ಪಶ್ಚಿಮ ಘಟ್ಟಕ್ಕೂ ಸಂಚಕಾರ ಬಂದಿದೆ. ರಸ್ತೆ ಅಗಲೀಕರಣದ...

ನವಿಲನ್ನ ಅರ್ಧ ನುಂಗಿ ಪರದಾಡ್ತಿದ್ದ ಹೆಬ್ಬಾವಿನ ರಕ್ಷಣೆ

2 months ago

ಚಾಮರಾಜನಗರ: ನವಿಲನ್ನು ಅರ್ಧ ನುಂಗಿ ಪರದಾಡುತ್ತಿದ್ದ ಹೆಬ್ಬಾವೊಂದನ್ನು ರಕ್ಷಣೆ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಹೊಂಡರಬಾಳು ಗ್ರಾಮದ ಜಮೀನೊಂದರಲ್ಲಿ ನಡೆದಿದೆ. ಬೆಳಗ್ಗಿನ ಜಾವ ಹೆಬ್ಬಾವು ನವಿಲನ್ನು ಹಿಡಿದು ನುಂಗಲು ಮುಂದಾಗಿದೆ. ಆದರೆ ಹೆಬ್ಬಾವಿನ ಗಂಟಲಿನ ಭಾಗದಲ್ಲಿ ನವಿಲು ಸಿಕ್ಕಿ ಹಾಕಿಕೊಂಡಿದೆ. ಪರಿಣಾಮ...

ಹಾವು ಸ್ಕೂಟಿಯೊಳಗೆ ಸೇರ್ಕೊಂಡ್ರೆ ಹೀಗೂ ತೆಗೆಯಬಹುದು – ವಿಡಿಯೋ ನೋಡಿ

2 months ago

ಚಿಕ್ಕಮಗಳೂರು: ಹಾವು ಕಪ್ಪೆ ನುಂಗಿ ಭಯದಿಂದ ಆ್ಯಕ್ಟೀವ್ ಹೊಂಡ ಸ್ಕೂಟಿಯೊಳಗೆ ಸೇರಿಕೊಂಡು ಸುಮಾರು ಒಂದು ಗಂಟೆಗಳ ಕಾಲ ಮನೆಯವರು ಹಾಗೂ ಉರಗ ತಜ್ಞನನ್ನ ಸತಾಯಿಸಿರುವ ಘಟನೆ ಚಿಕ್ಕಮಗಳೂರಿನ ಕಲ್ಯಾಣ ನಗರದ ಪುಷ್ಪಗಿರಿ ಲೇಔಟ್‍ನಲ್ಲಿ ನಡೆದಿದೆ. ಸಬ್ ಇನ್ಸ್ ಪೆಕ್ಟರ್ ಕುಮಾರಸ್ವಾಮಿ ಅವರ...

ಮುಂಗಾಲು ಮುರಿದು ಕಾಡಾನೆಯ ನರಕಯಾತನೆ

2 months ago

ಮಂಗಳೂರು: ಪಶ್ಚಿಮ ಘಟ್ಟದ ತಪ್ಪಲಿನ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಾಳುಗೋಡು ಅರಣ್ಯ ಪ್ರದೇಶದಲ್ಲಿ ಕಾಡಾನೆಯೊಂದು ಮುಂಗಾಲು ಮುರಿದು ನರಕಯಾತನೆ ಪಡುತ್ತಿರುವುದು ದೃಶ್ಯ ಬೆಳಕಿಗೆ ಬಂದಿದೆ. ಬಾಳುಗೋಡು ಗ್ರಾಮದ ಪದಕ ಎಂಬಲ್ಲಿ ಕಾಡಾನೆ ಇದ್ದು ಮುಂದಿನ ಎಡ ಕಾಲು ಊರಲಾಗದೇ...

ಬಂಡೀಪುರದಲ್ಲಿ ಪ್ರಕೃತಿ ಸೊಬಗು ಇಮ್ಮಡಿ – ಮೂಲೆ, ಮೂಲೆಯಿಂದ ಪ್ರವಾಸಿಗರ ದಂಡು

2 months ago

ಚಾಮರಾಜನಗರ: ಬೆಂಕಿ ಬಿದ್ದು ಬಂಡೀಪುರ ಹುಲಿರಕ್ಷಿತಾರಣ್ಯ ಸುಟ್ಟು ಭಸ್ಮವಾಗಿತ್ತು. ಆದರೆ ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಿಡ ಮರಗಳು ಚಿಗುರೊಡೆಯಲಾರಂಭಿಸಿವೆ. ಹಸಿರು ಕಾನನದ ನಡುವೆ ಹುಲಿ, ಚಿರತೆ, ಆನೆ, ಜಿಂಕೆ, ಕಡವೆ ಮೊದಲಾದ ವನ್ಯಜೀವಿಗಳು ಸ್ವಚ್ಛಂದವಾಗಿ ವಿಹರಿಸುತ್ತಿವೆ....