Monday, 19th August 2019

Recent News

2 years ago

ಬೀದರ್ ನಗರಸಭೆ ಅಧಿಕಾರಿಗಳು ಇದ್ದಾರೋ? ಸತ್ತಿದ್ದಾರೋ: ಜನ್ರ ಆಕ್ರೋಶ

ಬೀದರ್: ನಗರಸಭೆ ಅಧಿಕಾರಿಗಳು ಇದ್ದಾರೋ? ಸತ್ತಿದ್ದಾರೋ? ಜನರು ಪ್ರತಿ ದಿನ ನಾಯಿಗಳ ಹಾವಳಿಗೆ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುತ್ತಿರುವುದು ಇವರ ಕಣ್ಣಿಗೆ ಕಾಣಿಸುತ್ತಿಲ್ಲವೆ? ಇದು ಬೀದರ್ ನಗರದ ಮಂದಿ ಬೀದಿ ನಾಯಿ ನಿಯಂತ್ರಿಸಲು ವಿಫಲರಾದ ನಗರ ಸಭೆ ಅಧಿಕಾರಿಗಳಿಗೆ ಕೇಳುತ್ತಿರುವ ಪ್ರಶ್ನೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗೋವುಗಳು ಮತ್ತು ಮನುಷ್ಯರಿಗೆ ನಾಯಿ ಭಯ ಶುರುವಾಗಿದ್ದು ಸಂಜೆಯಾಗುತ್ತಿದ್ದಂತೆ ಸಂಚಾರ ಮಾಡಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿ ನಾಯಿಗಳದ್ದೇ ದರ್ಬಾರ್ ಶುರುವಾಗಿದ್ದು 20 ರಿಂದ 30 ನಾಯಿಗಳು ಒಟ್ಟಿಗೆ ಸೇರಿ […]

2 years ago

ಚರಂಡಿ, ಬಚ್ಚಲ ನೀರನ್ನು ಬಕೆಟ್ ನಲ್ಲಿ ತುಂಬಿ ಹೊರಹಾಕ್ತಿದ್ದಾರೆ ಜನ!

ಗದಗ: ನಗರದ ಕುಂಬಾರೇಶ್ವರ ಕಾಲೋನಿ ನಿವಾಸಿಗಳ ಜೀವನ ಒಂದು ರೀತಿ ನರಕಮಯವಾಗಿದೆ. ತಾವು ಸ್ನಾನ ಮಾಡಿದ ಬಚ್ಚಲು ನೀರನ್ನ ನಂತರ ತಾವೇ ತುಂಬಿ ಹೊತ್ತು ಹೊರಹಾಕುತ್ತಿದ್ದಾರೆ. ಕುಂಬಾರ ಕಲೋನಿಯಲ್ಲಿ ಅನೇಕ ವರ್ಷಗಳಿಂದ ರಸ್ತೆ, ಚರಂಡಿ, ಒಳಚರಂಡಿ, ಶೌಚಾಲಯ ಇಲ್ಲದ ಕಾರಣ ಸಾಕಷ್ಟು ಪರಿಶ್ರಮ ಪಡುತ್ತಿದ್ದಾರೆ. ರಸ್ತೆಗಳೆಲ್ಲಾ ಕೆಸರು ಗದ್ದೆಯಾಗಿವೆ.   ಶಾಲಾ ಮಕ್ಕಳು, ವಯೋವೃದ್ಧರು, ಮಹಿಳೆಯರು...

ತಿ. ನರಸೀಪುರ ತಹಸೀಲ್ದಾರ್ ನೇಣಿಗೆ ಶರಣು

2 years ago

ಮೈಸೂರು: ತಿ.ನರಸೀಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಹಸೀಲ್ದಾರ್ ಬಿ.ಶಂಕರಯ್ಯ(50) ವಸತಿ ಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಿ.ನರಸೀಪುರ ಪಟ್ಟಣದಲ್ಲಿರುವ ವಸತಿಗೃಹದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹಿಂದೆ ಪಾಂಡವಪುರ ತಾಲೂಕಿನಲ್ಲಿ ತಹಸೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದ ಶಂಕರಯ್ಯ ಕಳೆದ ಒಂದು ವರ್ಷದಿಂದ...

ಅಕ್ರಮ ಮಾಡಿದವ್ನು ಸಾಯ್ತೀನಿ ಅಂತಾನೆ, ಕೇಸ್ ಬಿಟ್ಬಿಡಿ – ಬಿಬಿಎಂಪಿ ಅಧಿಕಾರಿಯಿಂದ ಎಮೋಷನಲ್ ಬ್ಲಾಕ್‍ಮೇಲ್

2 years ago

ಬೆಂಗಳೂರು: ಭ್ರಷ್ಟಾಚಾರದ ಬಗ್ಗೆ ದೂರು ಕೊಟ್ಟವರಿಗೇ ಅಧಿಕಾರಿಗಳು ಬೋಧನೆ ಮಾಡಿರೋ ಘಟನೆ ನಡೆದಿದೆ. ಹೌದು. ಇದು ಬಿಬಿಎಂಪಿ ಅಧಿಕಾರಿಯ ಎಮೋಷನಲ್ ಬ್ಲಾಕ್‍ಮೇಲ್ ಸ್ಟೋರಿ. ಭ್ರಷ್ಟರ ವಿರುದ್ಧ ದೂರು ಕೊಟ್ರೆ ಅಧಿಕಾರಿಗಳೇ ಅಯ್ಯೋ ಬಿಟ್ಬಿಡಿ ಎಂದಿದ್ದಾರೆ. ಎಮೋಷನಲ್ ಬ್ಲಾಕ್ ಮೇಲ್ ಮಾಡಿದ ಬಿಬಿಎಂಪಿ...

ಬಳ್ಳಾರಿ: ರೈತರಿಗೆ ನೀಡಿದ್ದ 2 ಕೋಟಿ ರೂ. ಪರಿಹಾರ ಗುಳುಂ ಮಾಡಿದ ಅಧಿಕಾರಿಗಳು

2 years ago

ಬಳ್ಳಾರಿ: ಅಧಿಕಾರಿಗಳೇ ನಕಲಿ ಸಹಿ ಮಾಡಿ ರೈತರಿಗೆ ಸೇರಬೇಕಾಗಿದ್ದ ಬೆಳೆ ಪರಿಹಾರದ ಹಣವನ್ನ ನುಂಗಿ ನೀರು ಕುಡಿದಿರುವಂತಹ ಘಟನೆ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ನಡೆದಿದೆ.   ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹತ್ತಕ್ಕೂ ಹೆಚ್ಚು ಹಳ್ಳಿಗಳ ರೈತರಿಗೆ ಸೇರಬೇಕಾದ ಬೆಳೆನಷ್ಟ ಪರಿಹಾರವನ್ನು...

ಗಿರಿಜನರನ್ನು ಬೆದರಿಸಿ ಮಹಿಳಾ ಅಧಿಕಾರಿ ವಿರುದ್ಧ ಕೈ ಶಾಸಕ ಪುಟ್ಟರಂಗಶೆಟ್ಟಿಯಿಂದ ಪ್ರತಿಭಟನೆ

2 years ago

ಚಾಮರಾಜನಗರ: ಶಾಸಕ ಪುಟ್ಟರಂಗಶೆಟ್ಟಿ ಅವರು ಮಹಿಳಾ ಅಧಿಕಾರಿಗೆ ನೀಡಿರುವ ಮಾನಸಿಕ ಕಿರುಕುಳ ಆರೋಪವನ್ನು ಮುಚ್ಚಿ ಹಾಕಲು, ಗಿರಿಜನರನ್ನು ಬೆದರಿಸಿ ಚಾಮರಾಜನಗರಕ್ಕೆ ಕರೆತಂದು ಅಧಿಕಾರಿ ವಿರುದ್ಧ ಪ್ರತಿಭಟನೆ ಮಾಡಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಚಾಮರಾಜನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಪುಟ್ಟರಂಗಶೆಟ್ಟಿ ಅವರು...