Sunday, 18th August 2019

1 day ago

ಕೆಆರ್‌ಎಸ್‌ ಬಳಿ ನಿಗೂಢ ಶಬ್ಧ- ಆತಂಕದಲ್ಲಿ ಸ್ಥಳೀಯರು

ಮಂಡ್ಯ: ಕೆಆರ್‌ಎಸ್‌ಗೆ ಭಾರೀ ಅಪಾಯ ಕಾದಿದ್ಯಾ ಎನ್ನುವ ಪ್ರಶ್ನೆ ಎದ್ದಿದೆ. ಯಾಕೆಂದರೆ ಕೆಆರ್‌ಎಸ್‌ ಸುತ್ತಮುತ್ತ ನಿಗೂಢ ಶಬ್ಧ ಕೇಳಿಬರುತ್ತಿದೆ ಎಂದು ಸ್ಥಳೀಯರು ಅತಂಕ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಸಂಜೆಯಿಂದ ಏಳೆಂಟು ಬಾರಿ ಭಾರೀ ಶಬ್ಧವಾಗಿದ್ದು, ರಾತ್ರಿ 7.25 ರಿಂದ 7.35ರ ಅವಧಿಯಲ್ಲಿ ಮತ್ತೆ ಸೌಂಡ್ ಆಗಿದೆ. ಈ ರೀತಿ ಆಗುತ್ತಿರುವುದು ಅಧಿಕಾರಿಗಳು ಮತ್ತು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಡ್ಯಾಂ ಬಳಿ ಆಗುತ್ತಿರುವ ಆ ನಿಗೂಢ ಶಬ್ಧದ ಮೂಲ ತಿಳಿಯಲು ಅಧಿಕಾರಿಗಳು ಶೋಧಕಾರ್ಯ ಮುಂದುವರಿಸಿದ್ದಾರೆ. ಕಳೆದ 2 ವರ್ಷಗಳಿಂದ ಹಲವು ಬಾರಿ […]

3 days ago

ಎರಡೇ ಕೊಠಡಿಗಳಲ್ಲಿ 100ಕ್ಕೂ ಹೆಚ್ಚು ಸಂತ್ರಸ್ತರು – ನಿರಾಶ್ರಿತರ ಕೇಂದ್ರದಲ್ಲಿ ಉಸಿರುಗಟ್ಟುವ ಸ್ಥಿತಿ

ಬೆಳಗಾವಿ: ರಾಯಭಾಗ ತಾಲೂಕಿನಲ್ಲಿ ತೆರೆಯಲಾದ ಎರಡು ನಿರಾಶ್ರಿತರ ಕೇಂದ್ರದಲ್ಲಿ 100 ಹೆಚ್ಚು ಸಂತ್ರಸ್ತರು ತಂಗಿದ್ದು ಉಸಿರುಗಟ್ಟುವ ಸ್ಥಿತಿ ನಿರ್ಮಾಣವಾಗಿದೆ. ಹುಬ್ಬರವಾಡಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿರುವ ಗಂಜಿ ಕೇಂದ್ರದಲ್ಲಿ ಸಂತ್ರಸ್ತರು ಪಡಬಾರದ ಕಷ್ಟ ಪಡುತ್ತಿದ್ದಾರೆ. ಈ ನಿರಾಶ್ರಿತ ಕೇಂದ್ರದಲ್ಲಿ ಎರಡೇ ಕೊಠಡಿಗಳಿದ್ದು, ಇದರಲ್ಲೇ 100 ಕ್ಕೂ ಹೆಚ್ಚು ಮಂದಿ ತಂಗಿದ್ದಾರೆ. ಕಳೆದ ಒಂದು ವಾರದಿಂದ...

ನಮ್ಮೂರಿಗೆ ಬನ್ನಿ ಆಗ ಗೊತ್ತಾಗುತ್ತೆ: ಪ್ರವಾಹದಲ್ಲಿ ಮನೆ ಕಳೆದುಕೊಂಡ ವ್ಯಕ್ತಿಯ ಅಳಲು

5 days ago

ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡು ಗ್ರಾಮಸ್ಥರು ರೋಧಿಸುತ್ತಿದ್ದಾರೆ. ಇಷ್ಟು ಪ್ರಮಾಣದಲ್ಲಿ ಮನೆಗಳನ್ನು ಕಳೆದುಕೊಂಡರು ಅಧಿಕಾರಿಗಳು ತಿರುಗಿ ನೋಡದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ನಿವಾಸಿಯೊಬ್ಬರು ಮನೆಯನ್ನು ನೋಡಿ ಗೋಳಾಡುತ್ತಾ ಕಣ್ಣೀರಿಡುತ್ತಿರುವ ದೃಶ್ಯ ಮನಕಲುಕುವಂತಿದೆ....

ಬೈಂದೂರಿನಲ್ಲಿ 100 ವರ್ಷದ ಹಳೇಯ ಶಾಲೆಯ ಕಟ್ಟಡ ಕುಸಿತ

1 week ago

ಉಡುಪಿ: ಭಾರೀ ಮಳೆಯಿಂದಾಗಿ ಗುಡ್ಡ ಕುಸಿಯುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಮನೆ, ಶಾಲೆ ಸೇರಿದಂತೆ ಕಟ್ಟಡಗಳು ನೆಲಸಮವಾಗುತ್ತಿದ್ದು, ಸಾರ್ವಜನಿರಿಕರು ಭಯದ ವಾತಾವರಣದಲ್ಲೇ ಬದುಕುವಂತಾಗಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೆರ್ಗಾಲು ನಂದನವನ ಶಾಲೆ ಕುಸಿದುಬಿದ್ದಿದೆ. ಕಳೆದ ಕೆಲವು ದಿನಗಳಿಂದ ವ್ಯಾಪಕ ಮಳೆಯಾದ ಪರಿಣಾಮ...

ನಡುಗಡ್ಡೆಯಲ್ಲಿ 7 ಯುವಕರ ಪ್ರಾಣ ಸಂಕಟ- ಅಧಿಕಾರಿಗಳು ನಿರ್ಲಕ್ಷ್ಯ

1 week ago

– 30 ಜನರ ರಕ್ಷಣೆಗೆ ಮುಂದಾದ ಎನ್‌ಡಿಆರ್‌ಎಫ್‌ ಬಾಗಲಕೋಟೆ: ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ದಿನೇ ದಿನೇ ಹೆಚ್ಚುತ್ತಿದ್ದು, ಗ್ರಾಮಗಳು ಮುಳುಗಡೆಯಾಗುತ್ತಿವೆ. ಮಲಪ್ರಭಾ ನದಿಯ ಪ್ರವಾಹದಿಂದಾಗಿ ಮನೆಯಲ್ಲಿ ಸಿಲುಕಿರುವ ಏಳು ಮಂದಿ ಯುವಕರಿಗೆ ಪ್ರಾಣ ಸಂಕಟ ಎದುರಾಗಿದೆ. ಬಾಗಲಕೋಟೆ ಜಿಲ್ಲೆಯ ಬದಾಮಿ...

ಉಕ್ಕಿ ಹರಿಯುತ್ತಿರುವ ಘಟಪ್ರಭಾ- ಪ್ರವಾಹದ ಮಧ್ಯೆ ಸಿಲುಕಿದ ತಂದೆ, ಮಗ

1 week ago

ಬಾಗಲಕೋಟೆ: ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ವರುಣನ ಆರ್ಭಟಕ್ಕೆ ಈ ಭಾಗದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ನಡುವೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಚಿಚಖಂಡಿಯಲ್ಲಿ ಪ್ರವಾಹದ ಮಧ್ಯೆ ತಂದೆ-ಮಗ ಸಿಲುಕಿಕೊಂಡು ಅಪಾಯದಲ್ಲಿದ್ದಾರೆ. ಹಿರಣ್ಯಕೇಶಿ,...

ಕೊಡಗಿನ ಮಳೆಗೆ ಕೊಚ್ಚಿ ಹೋಯ್ತು ಮರಳಿನ ಚೀಲಗಳು – ಮತ್ತೆ ಹೆದ್ದಾರಿ ಕುಸಿಯುವ ಸಾಧ್ಯತೆ

2 weeks ago

– ಗುರುವಾರ ಕೂಡ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರೋ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಮಳೆ ಮುಂದುವರಿದರೆ ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ಕುಸಿಯುವ ಸಾಧ್ಯತೆಯಿದೆ. ಜಿಲ್ಲೆಯಲ್ಲಿ ಮಳೆ ಅರ್ಭಟ ಜೋರಾಗಿದ್ದು, ಮುನ್ನೆಚ್ಚರಿಕಾ...

ಹಿಂದಿನ ಸಿಎಂ ಟೈಂ ಬೇಕಿಲ್ಲ – ದಿಢೀರ್ ಭೇಟಿ ಕೊಟ್ಟು ಅಧಿಕಾರಿಗಳಿಗೆ ಸಿಎಂ ಕ್ಲಾಸ್

2 weeks ago

ಬೆಂಗಳೂರು: ಹಿಂದಿನ ಸಿಎಂ ಟೈಂ ನನಗೆ ಬೇಕಿಲ್ಲ, ನಿಗದಿಯಾಗಿದ್ದ ಸಮಯಕ್ಕೆ ಸಭೆ ನಡೆಸುತ್ತೇನೆ. ಎಲ್ಲ ಅಧಿಕಾರಿಗಳು ಶಿಸ್ತು ಪಾಲಿಸುವುದು ಕಡ್ಡಾಯ ಎಂದು ವಿಧಾನಸೌಧದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ವಿಧಾನಸೌಧದ ನೆಲಮಹಡಿಯಲ್ಲಿರುವ ಸ್ವೀಕೃತಿ ಮತ್ತು ರವಾನೆ ಶಾಖೆಗೆ...