ಸ್ಯಾಂಡಲ್‌ವುಡ್ ನಿರ್ದೇಶಕ ಗುರುಪ್ರಸಾದ್ (Guruprasad) ಆತ್ಮಹತ್ಯೆ (Suicide) ಸುದ್ದಿ ತಿಳಿದು ನಟ ತಬಲಾ ನಾಣಿ (Tabala Nani) ಕಂಬನಿ ಮಿಡಿದಿದ್ದಾರೆ. ನನಗೆ ಕನ್ನಡ ಚಿತ್ರರಂಗದಲ್ಲಿ ಜೀವನ ಕೊಟ್ಟವರು ಗುರುಪ್ರಸಾದ್ ಎಂದಿದ್ದಾರೆ. ಅವರ ಜೊತೆಗಿನ ಒಡನಾಟವನ್ನು ನಟ ‘ಪಬ್ಲಿಕ್ ಟಿವಿ’ ಜೊತೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಹುಟ್ಟುಹಬ್ಬಕ್ಕೂ ಮುನ್ನವೇ ಬದುಕಿನ ಆಟ ಮುಗಿಸಿದ ಗುರುಪ್ರಸಾದ್
ಗುರುಪ್ರಸಾದ್ ಆತ್ಮಹತ್ಯೆ ಸುದ್ದಿ ಕೇಳಿ ಬೇಜಾರಾಯಿತು. ಅವರು 10 ಜನಕ್ಕೆ ಆಗೋವಷ್ಟು ಬುದ್ಧಿವಂತ, ಅವರಿಗೆ ಅಷ್ಟು ತಲೆ ಇತ್ತು. ಏನಿಕ್ಕೆ ಹೀಗೆ ಮಾಡಿಕೊಂಡರು ಗೊತ್ತಾಗುತ್ತಿಲ್ಲ. ಸಹವಾಸಗಳ ಸಮಸ್ಯೆನೋ, ಕೆಟ್ಟ ಚಟಗಳ ಸಮಸ್ಯೆಯೋ ತಿಳಿಯುತ್ತಿಲ್ಲ. ಈಗ ನಾವೇನಾದ್ರೂ ಮಾತನಾಡಿದ್ರೆ ಗುರು ನಿಂದನೆಯಾಗುತ್ತದೆ. ನನಗೆ ಚಿತ್ರರಂಗದಲ್ಲಿ ಜೀವನ ಕೊಟ್ಟವರು ಗುರುಪ್ರಸಾದ್. ‘ಮಠ’, ‘ಎದ್ದೇಳು ಮಂಜುನಾಥ’ ಸಿನಿಮಾ ಟೀಮ್ ಅದೆಷ್ಟು ಚೆನ್ನಾಗಿತ್ತು ಎಂದು ಸ್ಮರಿಸಿದರು ತಬಲಾ ನಾಣಿ.
ಕಡೆಯದಾಗಿ ಒಂದು ಫಂಕ್ಷನ್‌ನಲ್ಲಿ ಸಿಕ್ಕಿದ್ದರು. ಎಷ್ಟು ಟ್ಯಾಲೆಂಟೆಡ್ ಆಗಿದ್ರೂ, ಅವರು ಹೀಗೆ ಮಾಡಿಕೊಂಡಿದ್ದಾರೆ ಅಂದರೆ ನಂಬೋಕೆ ಆಗ್ತಿಲ್ಲ. ಕೆಲಸದಲ್ಲಿ ಪಾದರಸದ ಹಾಗೇ ಇದ್ರೂ, ಒಂದು ಕೇಳಿದ್ರೆ 10 ಉತ್ತರ ಕೊಡುತ್ತಿದ್ದರು. ಮೊದಲ ಬಾರಿಗೆ ಅವರನ್ನು ಭೇಟಿಯಾದಾಗ ಒಂದು ಮಾತು ಹೇಳಿದ್ದರು. ನಿಮಗೆ ತುಂಬಾ ಟ್ಯಾಲೆಂಟ್ ಇದೆ, ನನ್ನ ಜೊತೆ ಇರಿ ಇಡೀ ಕರ್ನಾಟಕ ನಿಮ್ಮನ್ನು ಗುರುತಿಸಬೇಕು ಹಾಗೇ ಮಾಡುತ್ತೇನೆ ಎಂದಿದ್ದರು. ಅಂದು ಗುರುಪ್ರಸಾದ್ ಹೇಳಿದ ಮಾತನ್ನು ಅವರು ಉಳಿಸಿಕೊಂಡರು.
ಮಠ, ಎದ್ದೇಳು ಮಂಜುನಾಥ ಸಿನಿಮಾನೇ ಮೂಲಕ ನಾನು ಯಾರು ಎಂದು ಜನಕ್ಕೆ ಗೊತ್ತಾಗಿದ್ದು. ಈಗ ಅವರ ಈ ಸುದ್ದಿ ಬೇಸರ ಆಗ್ತಿದೆ. ನಾನು 7 ವರ್ಷಗಳ ಕಾಲ ಅವರ ಜೊತೆ ಇದ್ದೆ, ನಾನು ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾದೆ. ಅವರಿಗೆ ದೇವರು ಎಲ್ಲಾ ಕೊಟ್ಟಿದ್ದ, ಆದ್ರೂ ಯಾಕೆ ಹೀಗೆ ಆಯ್ತು ಎಂದು ಬೇಸರ ವ್ಯಕ್ತಪಡಿಸಿದರು. ನಾವು ಕರೆ ಮಾಡಿದರೂ ಅವರು ಕಾಲ್ ರಿಸೀವ್ ಮಾಡುತ್ತಿರಲ್ಲಿಲ್ಲ. ಈಗೀನ ಅವರ ಪರಿಸ್ಥಿತಿ ಹೇಗಿತ್ತು ಎಂಬುದು ಗೊತ್ತಿಲ್ಲ. ಅಷ್ಟು ಬುದ್ಧಿವಂತ ವ್ಯಕ್ತಿಗೆ ಹೀಗೆ ಮಾಡಿಕೊಂಡಿದ್ದಾರೆ ಎಂಬುದು ಅರಗಿಸಿಕೊಳ್ಳಲು ಆಗ್ತಿಲ್ಲ. ಅವರಿಗೆ ಸಾಲವೇ ಶೂಲ ಆಗಿಬಿಟ್ಟಿತ್ತಾ? ಗೊತ್ತಾಗುತ್ತಿಲ್ಲ ಎಂದು ಗುರುಪ್ರಸಾದ್ ಆತ್ಮಹತ್ಯೆಗೆ ಕಂಬನಿ ಮಿಡಿದಿದ್ದಾರೆ.