ಮದುವೆ ಯಾವಾಗ ಎಂದಿದ್ದಕ್ಕೆ? ನಾನಿನ್ನೂ ಪ್ರೆಗ್ನೆಂಟ್‌ ಆಗಿಲ್ಲ ಎಂದು ಉತ್ತರಿಸಿದ ತಾಪ್ಸಿ ಪನ್ನು

Public TV
1 Min Read
taapsee pannu 1

ಸೌತ್‌ನ ಬ್ಯುಸಿ ನಟಿ ತಾಪ್ಸಿ ಪನ್ನು (Taapsee Pannu) ಇದೀಗ ನಟನೆಯಿಂದ ಕೊಂಚ ಬ್ರೇಕ್ ಪಡೆದಿದ್ದಾರೆ. ಕಳೆದ ವರ್ಷ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿದ್ದ ನಟಿ, ತಾಪ್ಸಿ ಪನ್ನು ಈಗ ಟ್ರಿಪ್ ಮಾಡುವ ಮೂಡ್‌ನಲ್ಲಿದ್ದಾರೆ. ಇದರ ಮಧ್ಯೆ ಅಭಿಮಾನಿಗಳ ಜೊತೆ ಮಾತನಾಡಲು ಕೊಂಚ ಬಿಡುವು ಮಾಡಿಕೊಂಡಿದ್ದಾರೆ. ಮದುವೆ (Wedding) ಬಗ್ಗೆ ಎದುರಾದ ಪ್ರಶ್ನೆಗೆ ನಟಿ ಮಸ್ತ್ ಆಗಿ ಉತ್ತರ ನೀಡಿದ್ದಾರೆ.

taapsee pannu 3

ತೆಲುಗು, ತಮಿಳು ಮತ್ತು ಬಾಲಿವುಡ್ ಸಿನಿಮಾಗಳಲ್ಲೂ ತಾಪ್ಸಿ ಪನ್ನು ನಟಿಸುತ್ತಿದ್ದಾರೆ. ಸಾಕಷ್ಟು ಹಿಟ್ ಚಿತ್ರಗಳನ್ನ ನೀಡಿದ್ದಾರೆ. 2021-2022ರಲ್ಲಿ ಸಾಲು ಸಾಲಾಗಿ ಆರು ಸಿನಿಮಾಗಳನ್ನ ಹಿಟ್ ನೀಡಿದ್ದರು. ಈಗ ಅವರು ಬ್ರೇಕ್ ತೆಗೆದುಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಇರುವ ನಟಿ, ಫ್ಯಾನ್ಸ್ ಜೊತೆ ಪ್ರಶ್ನಾವಳಿಯನ್ನ ಮಾಡಿದ್ದಾರೆ. ಈ ವೇಳೆ ಮದುವೆ ಯಾವಾಗ ಎಂಬ ಪ್ರಶ್ನೆ ಅವರಿಗೆ ಎದುರಾಗಿದೆ.

taapsee pannu 3

ಬ್ಯಾಡ್ಮಿಂಟನ್ ಆಟಗಾರ, ಕೋಚ್ ಮಥಾಯಿಸ್ ಬೋ ಅವರ ಜೊತೆ ತಾಪ್ಸಿ ಪನ್ನು ಬಹಳ ಕಾಲದಿಂದ ಎಂಗೇಜ್ ಆಗಿದ್ದಾರೆ. ಪ್ರಿಯಕರನ ಜೊತೆ ಅವರು ಆಗಾಗ ಫಾರಿನ್ ಟ್ರಿಪ್ ಮಾಡುತ್ತಾರೆ. ಆ ಫೋಟೋಗಳನ್ನು ಕೂಡ ಅವರು ಹಂಚಿಕೊಳ್ಳುತ್ತಾರೆ. ಇನ್ನೂ ತಾಪ್ಸಿಗೆ ವಯಸ್ಸು 35 ವರ್ಷ ಹಾಗಾಗಿ ಮದುವೆ ಬಗ್ಗೆ ಫ್ಯಾನ್ಸ್ ಕೇಳಿದ್ದಾರೆ. ಇದನ್ನೂ ಓದಿ:ಮಹೇಶ್‌ ಬಾಬು ಸಿನಿಮಾ ಬಗ್ಗೆ ಅಪ್‌ಡೇಟ್‌ ಹಂಚಿಕೊಂಡ ಮೀನಾಕ್ಷಿ ಚೌಧರಿ

ಯಾವಾಗ ನನ್ನ ಮದುವೆ ಅಂತಾ ಕೇಳುತ್ತಿದ್ದೀರಿ. ನಾನಿನ್ನೂ ಗರ್ಭಿಣಿ ಆಗಿಲ್ಲ. ಸದ್ಯಕ್ಕಂತೂ ಆಗಲ್ಲ. ಆದಾಗ ನಿಮಗೆ ತಿಳಿಸುತ್ತೇನೆ ಎಂದು ತಾಪ್ಸಿ ಪನ್ನು ಉತ್ತರಿಸಿದ್ದಾರೆ. ಮಕ್ಕಳನ್ನು ಪಡೆಯಬೇಕು ಎನಿಸಿದಾಗ ನಾನು ಮದುವೆ ಆಗುತ್ತೇನೆ ಎಂದು ಈ ಹಿಂದಿನ ಸಂದರ್ಶನದಲ್ಲಿ ಅವರು ಹೇಳಿದ್ದರು. ಈ ಮೂಲಕ ಸದ್ಯದಲ್ಲೇ ಮದುವೆ ಆಗುವ ಪ್ಲಾನ್ ಇಲ್ಲ ಎಂದು ತಿಳಿಸಿದ್ದಾರೆ.

Share This Article