ಪಿಂಕ್, ಡುಂಕಿ (Dunki) ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟ ತಾಪ್ಸಿ ಪನ್ನು (Taapsee Pannu) ಸದಾ ಒಂದಲ್ಲಾ ಒಂದು ವಿಚಾರವಾಗಿ ಟ್ರೋಲ್ (Troll) ಆಗುತ್ತಲೇ ಇರುತ್ತಾರೆ. ಇದೀಗ ಸಂರ್ದಶನವೊಂದರಲ್ಲಿ ನಾನು ಪಬ್ಲಿಕ್ ಫಿಗರ್, ಹಾಗಂತ ಸಾರ್ವಜನಿಕರ ಆಸ್ತಿಯಲ್ಲ ಎಂದು ಟ್ರೋಲಿಗರ ವಿರುದ್ಧ ನಟಿ ಗರಂ ಆಗಿದ್ದಾರೆ. ಇದನ್ನೂ ಓದಿ:ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಂಭರ’ ಸಿನಿಮಾದಲ್ಲಿ ಭಜರಂಗಿ ಲೋಕಿ
ಅತಿರೇಕದ ಟ್ರೋಲ್ (Troll) ಮತ್ತು ಅನುಚಿತ ವರ್ತನೆಗಳ ಬಗ್ಗೆ ತಾಪ್ಸಿ ಮಾತನಾಡಿ, ಏನು ಮಾಡಿದರೂ ಅಥವಾ ಮಾಡದೇ ಇದ್ದರೂ ಟ್ರೋಲ್‌ಗೆ ಒಳಗಾಗುತ್ತೇನೆ. ಇದನ್ನು ಜೀವನದಲ್ಲಿ ತಡವಾಗಿ ಅರಿತುಕೊಂಡೆ ಎಂದು ಮಾತನಾಡಿದ್ದಾರೆ. ನಾನು ಸೆಲೆಬ್ರಿಟಿ ನಿಜ. ಆದರೆ ಸಾರ್ವಜನಿಕರ ಆಸ್ತಿಯಲ್ಲ ಎಂದು ಟ್ರೋಲಿಗರಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಈ ಎರಡರ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಗೌರವ ಕೊಟ್ಟು ಪಡೆದುಕೊಳ್ಳಬೇಕು. ನನ್ನ ಮೈ ಮೇಲೆ ಬೀಳುವುದು ಸರಿಯಲ್ಲ ಎಂದು ಮಾತನಾಡಿದ್ದಾರೆ.
ನಾನು ಕೂಡ ಎಲ್ಲರಂತೆಯೇ ಫೋಟೋ ತೆಗೆಯಲು ಮತ್ತು ಮಾತನಾಡುವಾಗ ಮೈ ಬೀಳುವುದು ಮತ್ತು ಅನುಚಿತ ವರ್ತನೆಗಳನ್ನು ನಾನು ಸಹಿಸುವುದಿಲ್ಲ. ನಾನು ಸರಿಯಾದ ವೃತ್ತಿ ಮತ್ತು ಸ್ಥಳದಲ್ಲಿದ್ದೇನೆ. ಕ್ಯಾಮೆರಾ ಮುಂದೆ ಬಂದಾಗ ಎಂಜಾಯ್ ಮಾಡಿಕೊಂಡು ಕೆಲಸ ಮಾಡುತ್ತೇನೆ. ಆದರೆ ಅನುಚಿತ ವರ್ತನೆಯನ್ನು ಎಂದಿಗೂ ನಾನು ವಿರೋಧಿಸುತ್ತೇನೆ ಎಂದು ತಾಪ್ಸಿ ಮಾತನಾಡಿದ್ದಾರೆ.