Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಇಂಡೋ – ಪಾಕ್‌ ವಿವಾದದ ನಡುವೆ ಚುಟುಕು ಕ್ರಿಕೆಟ್‌ ಕದನ – ಇಂದಿನಿಂದ ವಿಶ್ವಕಪ್‌ ಹಬ್ಬ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | ಇಂಡೋ – ಪಾಕ್‌ ವಿವಾದದ ನಡುವೆ ಚುಟುಕು ಕ್ರಿಕೆಟ್‌ ಕದನ – ಇಂದಿನಿಂದ ವಿಶ್ವಕಪ್‌ ಹಬ್ಬ!

Cricket

ಇಂಡೋ – ಪಾಕ್‌ ವಿವಾದದ ನಡುವೆ ಚುಟುಕು ಕ್ರಿಕೆಟ್‌ ಕದನ – ಇಂದಿನಿಂದ ವಿಶ್ವಕಪ್‌ ಹಬ್ಬ!

Public TV
Last updated: February 7, 2026 7:43 am
Public TV
Share
3 Min Read
team india t20 world Cup 1
SHARE

ಮುಂಬೈ/ಕೊಲಂಬೊ: ಕ್ರಿಕೆಟ್‌ ಪ್ರೇಮಿಗಳ ನೆಚ್ಚಿನ ಟಿ20 ʻವಿಶ್ವಕಪ್‌ ಹಬ್ಬʼ (T20 World Cup) ಇಂದಿನಿಂದ ಶುರುವಾಗುತ್ತಿದೆ. ಈ ಬಾರಿ ವಿವಾದಗಳಿಂದಲೇ ಸದ್ದು ಮಾಡಿದ 10ನೇ ಆವೃತ್ತಿಯ ಚುಟುಕು ಕ್ರಿಕೆಟ್‌ ಸಮರಕ್ಕೆ ಚಾಲನೆ ಸಿಗಲಿದೆ. ಮುಸ್ತಾಫಿಜುರ್‌ ರೆಹಮಾನ್‌ ಅವರನ್ನ ಐಪಿಎಲ್‌ನಿಂದ (IPL) ಅಮಾನತುಗೊಳಿಸಿದ ಬಳಿಕ ಶುರುವಾದ ವಿವಾದ ಭಾರತ ಮತ್ತು ಪಾಕಿಸ್ತಾನದ ನಡುವೆ ಬಂದುನಿಂತಿದೆ. ಹೀಗಾಗಿ ಈ ಬಾರಿಯ ವಿಶ್ವಕಪ್‌ ರೋಚಕ ಎಂದೇ ಹೇಳಬಹುದು.

ಭಾರತದ (India) 5 ಹಾಗೂ ಶ್ರೀಲಂಕಾದ (SriLanka) 3 ನಗರಗಳ ಆತಿಥ್ಯದಲ್ಲಿ ನಡೆಯಲಿರುವ ಈ ಬಾರಿ ವಿಶ್ವಕಪ್‌ನಲ್ಲಿ 10 ತಂಡಗಳು ಕಪ್‌ಗಾಗಿ ಸೆಣಸಾಡಲಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

ICC T20 World Cup

ಟಿ20 ವಿಶ್ವಕಪ್‌ಗೆ ಈಗ 20 ವರ್ಷದ ಸಂಭ್ರಮ
ಐಸಿಸಿ ಟಿ20 ವಿಶ್ವಕಪ್‌ ಈಗ 20 ವರ್ಷದ ಸಂಭ್ರಮದಲ್ಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಮೊದಲ ಬಾರಿ ಟೂರ್ನಿ ಆಯೋಜಿಸಿದ್ದು 2007ರಲ್ಲಿ. ಅದರಲ್ಲಿ ಭಾರತ ಗೆದ್ದಿತ್ತು. 2007-2024ರ ನಡುವೆ ಒಟ್ಟು 9 ಬಾರಿ ಟಿ20 ವಿಶ್ವಕಪ್‌ ನಡೆದಿದೆ. ಪ್ರತಿ 2 ವರ್ಷಕ್ಕೊಮ್ಮೆ ಟೂರ್ನಿ ನಡೆಯುತ್ತದೆ. ಈ ಬಾರಿ 10ನೇ ಆವೃತ್ತಿ. ಭಾರತ ಸೇರಿದಂತೆ ಒಟ್ಟು 6 ತಂಡಗಳು ಈವರೆಗೂ ಕನಿಷ್ಠ ಒಮ್ಮೆಯಾದರೂ ಚಾಂಪಿಯನ್‌ ಆಗಿವೆ.

T20 World Cup ICC votes to replace Bangladesh if it doesnt play in India

ವಿವಾದ ಹುಟ್ಟಿದ್ದೆಲ್ಲಿ?
ಭಾರತ-ಶ್ರೀಲಂಕಾ ಆತಿಥ್ಯದಲ್ಲಿ ನಡೆಯಲಿರುವ ಈ ಬಾರಿ ವಿಶ್ವಕಪ್‌ನಲ್ಲಿ ಪಂದ್ಯ, ಟ್ರೋಫಿ, ಸ್ಟಾರ್‌ ಆಟಗಾರರು, ಚಾಂಪಿಯನ್‌ ಟೀಮ್‌ ಅಥವಾ ಕ್ರೀಡಾಂಗಣಕ್ಕಿಂತ ಜಾಸ್ತಿ ಪಾಕಿಸ್ತಾನ, ಬಾಂಗ್ಲಾದೇಶ ವಿವಾದವೇ ಹೆಚ್ಚು ಸದ್ದು ಮಾಡಿತು. ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಹಿಂಸಾಚಾರ ಹಾಗೂ ಭಾರತೀಯರ ಮೇಲಿನ ದೌರ್ಜನ್ಯ ನಡೆಯುತ್ತಿದ್ದಾಗಲೇ ಬಾಂಗ್ಲಾದೇಶ ತಂಡದ ವೇಗಿ ಮುಸ್ತಾಫಿಜುರ್‌ ರೆಹಮಾನ್‌ ಅವರನ್ನ ಐಪಿಎಲ್‌ನಿಂದ ಅಮಾನತು ಮಾಡಲಾಯಿತು. ಬಳಿಕ ಬಾಂಗ್ಲಾದೇಶ ಭಾರತದಿಂದ ಹೊರಗೆ ಪಂದ್ಯಗಳನ್ನ ನಿಯೋಜಿಸುವಂತೆ ಪಟ್ಟು ಹಿಡಿದಿತ್ತು. ಇದಕ್ಕೆ ಒಪ್ಪದ ಐಸಿಸಿ ಬಾಂಗ್ಲಾದೇಶ ತಂಡವನ್ನೇ ಟೂರ್ನಿಯಿಂದ ಹೊರದಬ್ಬಿತ್ತು. ಬಾಂಗ್ಲಾ ತಂಡ ಹೊರದಬ್ಬಿದ ಬಳಿಕ ಸ್ಕಾಟ್‌ಲೆಂಡ್‌ಗೆ ಅವಕಾಶ ನೀಡಲಾಯಿತು. ಆದ್ರೆ ಈ ವಿಷಯದಲ್ಲಿ ಮೂಗು ತೂರಿಸಿದ ಪಾಕಿಸ್ತಾನ ಮೊದಲು ಟೂರ್ನಿ ಬಹಿಷ್ಕರಿಸೋದಾಗಿ ಹೇಳಿತ್ತು. ಆ ನಂತರ ಟೂರ್ನಿ ಆಡುತ್ತೇವೆ, ಆದ್ರೆ ಭಾರತದ ವಿರುದ್ಧ ಆಡಲ್ಲ ಎಂದು ಹೇಳಿದೆ. ಆದಾಗ್ಯೂ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದು, ವಿಶ್ವಕಪ್‌ ಆಡಲು ತೆರಳಲಿದೆ.

T20 World Cup

ಭಾರತಕ್ಕೆ 3ನೇ ಬಾರಿ ಆತಿಥ್ಯ ಸಿಕ್ಕಿದ್ದು ಹೇಗೆ?
ಭಾರತ ಟಿ20 ವಿಶ್ವಕಪ್‌ಗೆ 3ನೇ ಬಾರಿ ಆತಿಥ್ಯ ವಹಿಸುತ್ತಿದೆ. 2016ರಲ್ಲಿ ಮೊದಲ ಬಾರಿ ಭಾರತದಲ್ಲಿ ಪಂದ್ಯಗಳು ನಡೆದಿದ್ದವು. 2021ರಲ್ಲಿ ಆತಿಥ್ಯ ಹಕ್ಕು ಭಾರತಕ್ಕೆ ಸಿಕ್ಕರೂ ಪಂದ್ಯಗಳು ಕೋವಿಡ್‌ ಕಾರಣದಿಂದಾಗಿ ಯುಎಇ ಹಾಗೂ ಒಮಾನ್‌ನಲ್ಲಿ ಆಯೋಜನೆಗೊಂಡಿದ್ದವು. ಈ ಬಾರಿ ಭಾರತ-ಶ್ರೀಲಂಕಾ ಜಂಟಿಯಾಗಿ ಟೂರ್ನಿ ನಡೆಸುತ್ತಿವೆ. ಟೂರ್ನಿ ಆಯೋಜನೆಗೆ ಆರಂಭದಲ್ಲಿ ಶ್ರೀಲಂಕಾ ಮಾತ್ರ ಆಸಕ್ತಿ ತೋರಿತ್ತು. 2021ರಲ್ಲಿ ಈ ಬಗ್ಗೆ ಘೋಷಣೆ ಹೊರಡಿಸಿದ್ದ ಐಸಿಸಿ, ಟೂರ್ನಿ ಲಂಕಾದಲ್ಲಿ ನಡೆಯುವುದಾಗಿ ತಿಳಿಸಿತ್ತು. ಆದರೆ ಟೂರ್ನಿಯ ವಿಸ್ತರಣೆ ಹಾಗೂ ಲಂಕಾದಲ್ಲಿ ಕ್ರೀಡಾಂಗಣಗಳ ಕೊರತೆಯ ಕಾರಣದಿಂದಾಗಿ ಭಾರತದ ಜಂಟಿ ಆತಿಥ್ಯದಲ್ಲಿ ವಿಶ್ವಕಪ್‌ ಆಯೋಜಿಸಲು ಐಸಿಸಿ ನಿರ್ಧರಿಸಿತು. ಶ್ರೀಲಂಕಾ ಈ ಹಿಂದೆ 2012ರಲ್ಲಿ ವಿಶ್ವಕಪ್ ಆಯೋಜಿಸಿತ್ತು.

T20 World Cup 3

ಟೂರ್ನಿ ಮಾದರಿ ಹೇಗೆ?
ಟೂರ್ನಿಯಲ್ಲಿ ಒಟ್ಟು 20 ತಂಡಗಳಿವೆ. ಇದನ್ನು ತಲಾ 5 ತಂಡಗಳ 4 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಗುಂಪಿನಲ್ಲಿ ಪ್ರತಿ ತಂಡಗಳು ಇತರ 4 ತಂಡಗಳ ವಿರುದ್ಧ ಒಮ್ಮೆ ಆಡಲಿವೆ. ಪ್ರತಿ ಗುಂಪಿನ ಅಗ್ರ-2 ತಂಡಗಳು ಸೂಪರ್‌-8 ಹಂತ ಪ್ರವೇಶಿಸಲಿವೆ. ಈ 8 ತಂಡಗಳನ್ನು ಮತ್ತೆ ತಲಾ 4 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗುತ್ತದೆ. ಗುಂಪಿನ ತಂಡಗಳು ತಲಾ 1 ಬಾರಿ ಪರಸ್ಪರ ಆಡಲಿವೆ. ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆದ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಸೆಮೀಸ್‌ನಲ್ಲಿ ಗೆದ್ದ ತಂಡಗಳು ಫೈನಲ್‌ ಆಡಲಿವೆ.

TAGGED:bangladeshbcciICCpakistanPCBT20 World CupTeam indiaಐಸಿಸಿಟಿ20 ವಿಶ್ವಕಪ್ಟೀಂ ಇಂಡಿಯಾಪಾಕಿಸ್ತಾನಬಿಸಿಸಿಐ
Share This Article
Facebook Whatsapp Whatsapp Telegram

Cinema news

Dhurandhar 2 2
ಒಂದೇ ವಾರದಲ್ಲಿ 1000 ಕೋಟಿ ಕ್ಲಬ್ ಸೇರಿದ `ಧುರಂಧರ್ 2′
Bollywood Cinema Latest Top Stories
Rashmika Vijay 5
ಹನಿಮೂನ್ ಅಲ್ಲ ಬಡ್ಡೀಮೂನ್ – ರಶ್ಮಿಕಾ, ವಿಜಯ್ ಹೊಸ ಟ್ರೆಂಡ್
Cinema Latest South cinema Top Stories
Bhushan Kumar Vivek Agnihotri 2
ಸೆಟ್ಟೇರುತ್ತಿದೆ ʻಆಪರೇಷನ್‌ ಸಿಂಧೂರʼ ಸಿನಿಮಾ – ಭೂಷಣ್ ಕುಮಾರ್, ವಿವೇಕ್ ಅಗ್ನಿಹೋತ್ರಿ ಅಧಿಕೃತ ಘೋಷಣೆ
Bollywood Cinema Latest Main Post National
Zubeen Garg
ಮದ್ಯಪಾನ ಮಾಡಿ ಈಜಲು ತೆರಳಿದ್ದೇ ಗಾಯಕ ಜುಬೀನ್ ಗಾರ್ಗ್ ಸಾವಿಗೆ ಕಾರಣ: ಸಿಂಗಾಪುರ ಕೋರ್ಟ್‌
Bollywood Cinema Court Latest National Top Stories World

You Might Also Like

Ramnavami in raichuru
Districts

ರಾಮನವಮಿ ಸಡಗರ – ರಾಯಚೂರಿನ ದೇವಾಲಯಗಳಲ್ಲಿ ನಿರಂತರ ಪೂಜೆ, ಭಕ್ತರಿಗೆ ಅನ್ನಸಂತರ್ಪಣೆ

Public TV
By Public TV
22 minutes ago
Ricky Rai 4
Bengaluru City

ಡ್ರಿಫ್ಟಿಂಗ್ ಬಳಿಕ ರಿಕ್ಕಿ ರೈ ವಿರುದ್ಧ ಮತ್ತೊಂದು FIR – ಕಾರು ರಿಜಿಸ್ಟರ್ ಮಾಡದೇ ಟ್ಯಾಕ್ಟ್ ಕಟ್ಟದೇ ಸರ್ಕಾರಕ್ಕೆ ವಂಚನೆ

Public TV
By Public TV
45 minutes ago
Petrol Lockdown
Latest

ತೈಲ ಬಿಕ್ಕಟ್ಟಿನ ಮಧ್ಯೆ ಲಾಕ್‌ಡೌನ್ ಭೀತಿ – ವದಂತಿ ಅಲ್ಲಗಳೆದ ಕೇಂದ್ರ

Public TV
By Public TV
57 minutes ago
Ayodhya Ram
Latest

ರಾಮನವಮಿ | ಅಯೋಧ್ಯೆ ಬಾಲರಾಮನ ಹಣೆಯ ಮೇಲೆ ಮೂಡಿದ ʻಸೂರ್ಯ ತಿಲಕʼ

Public TV
By Public TV
1 hour ago
ಸಾಂದರ್ಭಿಕ ಚಿತ್ರ
Chikkaballapur

ಗ್ಯಾಸ್ ಅಭಾವದ ಮಧ್ಯೆ ಚಿಕ್ಕಬಳ್ಳಾಪುರದಲ್ಲಿ 247 ಸಿಲಿಂಡರ್ ಜಪ್ತಿ

Public TV
By Public TV
1 hour ago
Iran Israel
Latest

`ಆಪರೇಷನ್ ಟ್ರೂ ಪ್ರಾಮಿಸ್-4′ – ಕದನ ವಿರಾಮ ಮಾತುಕತೆ ನಡುವೆ ಹೊಸ ದಾಳಿ ಆರಂಭಿಸಿದ ಇರಾನ್

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?