ಮೆಲ್ಬರ್ನ್: ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತು ಕೆ.ಎಲ್ ರಾಹುಲ್ (KL Rahul) ಬ್ಯಾಟಿಂಗ್ ವೈಭವ, ಬೌಲರ್‌ಗಳ ಸಂಘಟಿತ ಹೋರಾಟದ ಫಲವಾಗಿ ಜಿಂಬಾಬ್ವೆ (Zimbabwe) ವಿರುದ್ಧ ಭಾರತ (India) 71 ರನ್‍ಗಳ ಭರ್ಜರಿ ಜಯ ಗಳಿಸಿದೆ. ಈ ಜಯದೊಂದಿಗೆ ಭಾರತ ಗ್ರೂಪ್ 2ರ ಟೇಬಲ್ ಟಾಪರ್ ಆಗಿ ಸೆಮಿಫೈನಲ್ ಪ್ರವೇಶಿಸಿದೆ.
Advertisement
187 ರನ್‍ಗಳ ಗುರಿ ಬೆನ್ನಟ್ಟಿದ ಜಿಂಬಾಬ್ವೆಗೆ ಭಾರತದ ಬೌಲರ್‌ಗಳ ವಿಕೆಟ್ ಬೇಟೆಯ ಮುಂದೆ ನಿಲ್ಲಲಾಗದೆ 17.2 ಓವರ್‌ಗಳಲ್ಲಿ 115 ರನ್‍ಗಳಿಗೆ ಆಲೌಟ್ ಆಯಿತು. ಈ ಗೆಲುವಿನೊಂದಿಗೆ ಭಾರತ ನ.10 ರಂದು ಇಂಗ್ಲೆಂಡ್ (England) ತಂಡವನ್ನು ಸೆಮಿಫೈನಲ್‍ನಲ್ಲಿ ಎದುರಿಸಲಿದೆ. ಇದನ್ನೂ ಓದಿ: ಚೋಕರ್ಸ್ ಹಣೆಪಟ್ಟಿಯೊಂದಿಗೆ ಆಫ್ರಿಕಾ ಮನೆಗೆ – ಪಾಕ್‌ಗೆ ಖುಲಾಯಿಸಿದ ಅದೃಷ್ಟ
Advertisement
Advertisement
ಜಿಂಬಾಬ್ವೆಗೆ ಮೊದಲ ಎಸೆತದಲ್ಲೇ ಭುವನೇಶ್ವರ್ ಕುಮಾರ್ ಶಾಕ್ ನೀಡಿದರು. ಆರಂಭಿಕ ಆಟಗಾರ ವೆಸ್ಲಿ ಮಾಧೆವೆರೆ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಯಾವೊಬ್ಬ ಬ್ಯಾಟ್ಸ್‌ಮ್ಯಾನ್‌ಗಳು ರನ್ ಪೇರಿಸುವ ಇರಾದೆಯಲ್ಲಿದ್ದಂತೆ ಕಾಣದೇ ಭಾರತದ ಬೌಲರ್‌ಗಳ ದಾಳಿಗೆ ಪಟಪಟನೆ ಉದುರಿಕೊಂಡರು. ಜಿಂಬಾಬ್ವೆ ಪರ ರಯಾನ್ ಬರ್ಲ್ 35 ರನ್ (22 ಎಸೆತ, 5 ಬೌಂಡರಿ, 1 ಸಿಕ್ಸ್) ಸಿಡಿಸಿ ವಿಕೆಟ್ ಕಳೆದುಕೊಂಡರು. ಬಳಿಕ ಒಂದೆಡೆ ಹೋರಾಟ ನಡೆಸುತ್ತಿದ್ದ ಸಿಕಂದರ್ ರಜಾ 34 ರನ್ (24 ಎಸೆತ, 3 ಬೌಂಡರಿ) ಗಳಿಸಿ ಔಟ್ ಆಗುವುದರೊಂದಿಗೆ ಜಿಂಬಾಬ್ವೆ ಗೆಲುವಿನ ಆಸೆ ಕಮರಿತು. ಅಂತಿಮವಾಗಿ 17.2 ಓವರ್‌ಗಳಲ್ಲಿ 115 ರನ್‍ಗಳಿಗೆ ಅಲೌಟ್ ಆಯಿತು.
Advertisement
ಭಾರತ ಪರ ಅಶ್ವಿನ್ 3, ಮೊಹಮ್ಮದ್ ಶಮಿ ಮತ್ತು ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಪಡೆದರೆ, ಅರ್ಷದೀಪ್ ಸಿಂಗ್, ಭುವನೇಶ್ವರ್ ಕುಮಾರ್, ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದರು. ಇದನ್ನೂ ಓದಿ: ಅತ್ಯಾಚಾರ ಆರೋಪ – ಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕ ಸಿಡ್ನಿಯಲ್ಲಿ ಬಂಧನ
ಈ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ, ರೋಹಿತ್ ಶರ್ಮಾರನ್ನು (15 ರನ್ (13 ಎಸೆತ, 2 ಬೌಂಡರಿ) ಕಳೆದುಕೊಂಡಿತು. ಇನ್ನೊಂದೆಡೆ ಕೆ.ಎಲ್ ರಾಹುಲ್ ತಮ್ಮ ಅಬ್ಬರದಾಟ ಮುಂದುವರಿಸಿದರು. ಕೆಲಕಾಲ ರಾಹುಲ್‍ಗೆ ಉತ್ತಮ ಸಾಥ್ ನೀಡಿದ ಕೊಹ್ಲಿ ಆಟ 26 ರನ್ (25 ಎಸೆತ, 2 ಬೌಂಡರಿ) ಅಂತ್ಯವಾಯಿತು. ಆದರೆ ರಾಹುಲ್ ಜೊತೆ 2ನೇ ವಿಕೆಟ್‍ಗೆ 60 ರನ್ (48 ಎಸೆತ) ಜೊತೆಯಾಟ ತಂಡಕ್ಕೆ ವರವಾಯಿತು.
ಇತ್ತ ರಾಹುಲ್ 51 ರನ್ (35 ಎಸೆತ, 3 ಬೌಂಡರಿ, 3 ಸಿಕ್ಸ್) ಸಿಡಿಸಿ ಅರ್ಧಶತಕದ ಆಟದೊಂದಿಗೆ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕೈಚೆಲ್ಲಿಕೊಂಡರು. ಬಳಿಕ ಸೂರ್ಯಕುಮಾರ್ ವೈಲೆಂಟ್ ಆದರು. ಪಾಂಡ್ಯ ಜೊತೆ ಸೇರಿಕೊಂಡು ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದ ಸೂರ್ಯ ಆಕರ್ಷಕ ಹೊಡೆತಗಳ ಮೂಲಕ ಬೌಂಡರಿ, ಸಿಕ್ಸರ್‌ಗಳ ಮಳೆ ಸುರಿಸಿದರು.
ಕೊನೆಯ 5 ಓವರ್‌ಗಳಲ್ಲಿ 79 ರನ್:
ಸೂರ್ಯ ಜಿಂಬಾಬ್ವೆ ಬೌಲರ್‌ಗಳಿಗೆ ಮನಬಂದಂತೆ ಚಚ್ಚಲು ಆರಂಭಿಸಿದರೆ, ಇತ್ತ ಪಾಂಡ್ಯ 18 ರನ್ (18 ಎಸೆತ, 2 ಬೌಂಡರಿ) ಸಿಡಿಸಿ ಕೊನೆಯ ಓವರ್‌ನಲ್ಲಿ ಔಟ್ ಆದರು. ಈ ಮೊದಲು ಸೂರ್ಯ ಜೊತೆ 5ನೇ ವಿಕೆಟ್‍ಗೆ 65 ರನ್ (36 ಎಸೆತ) ಜೊತೆಯಾಟವಾಡಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಸೂರ್ಯ ಸ್ಫೋಟಕ ಆಟ ಕೊನೆಯ ಎಸೆತದ ವರೆಗೆ ಮುಂದುವರಿಯಿತು. ಸೂರ್ಯ ಅಜೇಯ 61 ರನ್ (25 ಎಸೆತ, 6 ಬೌಂಡರಿ, 4 ಸಿಕ್ಸ್) ಸಿಡಿಸಿದ ಪರಿಣಾಮ ತಂಡದ ಮೊತ್ತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186ಕ್ಕೆ ಏರಿಕೆ ಕಂಡಿತು. ಕೊನೆಯ 5 ಓವರ್‌ಗಳಲ್ಲಿ 79 ರನ್ ಹರಿದುಬಂತು.