ಕ್ಯಾನ್‌ಬೆರಾ: ಟಿ20 ವಿಶ್ವಕಪ್‌ನ (T20 World) ಶ್ರೀಲಂಕಾದ (Sri Lanka) ತಂಡದಲ್ಲಿರುವ ಕ್ರಿಕೆಟಿಗ (Cricketer) ದನುಷ್ಕಾ ಗುಣತಿಲಕ (Danushka Gunathilaka) ಅವರನ್ನು ಲೈಂಗಿಕ ದೌರ್ಜನ್ಯದ (Sexual Assault) ಆರೋಪದ ಮೇಲೆ ಆಸ್ಟ್ರೇಲಿಯಾದಲ್ಲಿ (Australia) ಬಂಧಿಸಲಾಗಿದೆ ಎಂದು ಮೂಲಗಳು ಭಾನುವಾರ ತಿಳಿಸಿದೆ.
ನವೆಂಬರ್ 2 ರಂದು ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ತನಿಖೆಯ ಬಳಿಕ ಗುಣತಿಲಕ (31) ಅವರನ್ನು ಇಂದು ಮುಂಜಾನೆ ಬಂಧಿಸಿ, ಸಿಡ್ನಿ (Sydney) ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
Advertisement
Advertisement
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ತಂಡ ಸೋತಿದ್ದು, ಟೂರ್ನಿಯಿಂದ ಹೊರಬಿದ್ದಿದೆ. ಇದರ ಬೆನ್ನಲ್ಲೇ ಅತ್ಯಾಚಾರದ ಆರೋಪದಡಿ ಲಂಕಾದ ಕ್ರಿಕೆಟಿಗ ದನುಷ್ಕಾ ಗುಣತಿಲಕ ಅವರನ್ನು ಆಸ್ಟ್ರೇಲಿಯಾದಲ್ಲಿ ಬಂಧಿಸಲಾಗಿದೆ. ಇದೀಗ ಶ್ರೀಲಂಕಾದ ತಂಡ ಗುಣತಿಲಕ ಅವರನ್ನು ಬಿಟ್ಟು, ಆಸ್ಟ್ರೇಲಿಯಾವನ್ನು ತೊರೆದಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಲಂಕಾ ವಿರುದ್ಧ ಜಯ – ಆಸ್ಟ್ರೇಲಿಯಾವನ್ನು ಹೊರದಬ್ಬಿ ಸೆಮಿಸ್‍ಗೆ ಎಂಟ್ರಿಕೊಟ್ಟ ಇಂಗ್ಲೆಂಡ್
Advertisement
Advertisement
ವರದಿಗಳ ಪ್ರಕಾರ ಸಿಡ್ನಿಯ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ಮೇಲೆ ಗುಣತಿಲಕ ಅವರನ್ನು ಬಂಧಿಸಲಾಗಿದೆ. ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಹಲವು ದಿನಗಳ ಹಿಂದೆ ಇಬ್ಬರ ಪರಿಚಯವಾಗಿದ್ದು, ನವೆಂಬರ್ 2 ರಂದು ಅವರಿಬ್ಬರು ಭೇಟಿಯಾದ ವೇಳೆ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಮಹಿಳೆ ಆರೋಪಿಸಿದ್ದಾರೆ. ಇದನ್ನೂ ಓದಿ: ಭಾರತ-ಜಿಂಬಾಬ್ವೆ ಪಂದ್ಯ ಮಳೆಯಿಂದ ರದ್ದಾದರೆ ಯಾರಿಗೆ ಅವಕಾಶ? – ಸೆಮಿಸ್ ಲೆಕ್ಕಾಚಾರ ಹೀಗಿದೆ