ದುಬೈ: ಟಿ20 ವಿಶ್ವಕಪ್ ಆರಂಭವಾಗಿದೆ. ಈಗಾಗಲೇ ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಾಟಕ್ಕಾಗಿ ಇಡೀ ವಿಶ್ವ ಕಾದು ಕುಳಿತಿದೆ. ಈ ನಡುವೆ ಟಿ20 ಕ್ರಿಕೆಟ್‍ನಲ್ಲಿ ಯಾರು ಬೆಸ್ಟ್ ಎಂಬ ಪ್ರಶ್ನೆಗೆ ಈ ಅಂಕಿ ಅಂಶ ಉತ್ತರ ನೀಡುತ್ತಿದೆ.
Advertisement
ಹೌದು ಭಾರತ ಹಾಗೂ ಪಾಕಿಸ್ತಾನ ನಡುವಿನ ಟೀಂ ರ‍್ಯಾಂಕಿಂಗ್, ಆಟಗಾರರ ರ‍್ಯಾಂಕಿಂಗ್ ಮತ್ತು ಟಿ20 ವಿಶ್ವಕಪ್ ಇತಿಹಾಸದಲ್ಲಿನ ಸಾಧನೆಯನ್ನು ಗಮನಿಸಿದರೆ ಎರಡು ತಂಡಗಳು ಪ್ರಬಲವಾಗಿರುವುದು ತಿಳಿಯುತ್ತದೆ. ಇದನ್ನೂ ಓದಿ: ಮೊದಲ ಟಿ20 ವಿಶ್ವಕಪ್ ಬಾಲ್‍ಔಟ್ ಮೂಲಕ ಪಾಕ್‍ಗೆ ಶಾಕ್ ಕೊಟ್ಟ ಭಾರತ
Advertisement
Advertisement
ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಎರಡು ಬಾರಿ ಫೈನಲ್ ಪ್ರವೇಶಿಸಿದ್ದು ತಲಾ ಒಂದೊಂದು ಬಾರಿ ಚಾಂಪಿಯನ್ ಆಗಿದೆ ಜೊತೆಗೆ ಒಂದೊಂದು ಬಾರಿ ರನ್ನರ್ ಅಪ್ ಆಗಿ ತೃಪ್ತಿಪಟ್ಟಿದೆ. 2007ರಲ್ಲಿ ಆರಂಭಗೊಂಡ ಮೊದಲ ವಿಶ್ವಕಪ್‍ನಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದರೆ, 2009ರ ವಿಶ್ವಕಪ್‍ನಲ್ಲಿ ಪಾಕಿಸ್ತಾನ ವಿಶ್ವಕಪ್‍ಗೆ ಮುತ್ತಿಕ್ಕಿದೆ.
Advertisement
ಪ್ರಸ್ತುತ ಟಿ20 ಕ್ರಿಕೆಟ್‍ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ಸಾಧನೆಯನ್ನು ಗಮನಿಸಿದರೆ, ರ‍್ಯಾಂಕಿಂಗ್ ನಲ್ಲಿ ಭಾರತ ತಂಡ 2ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ ತಂಡ 3ನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಟೀಂ ಇಂಡಿಯಾಗೆ ಕ್ಲಾಸ್ ಆರಂಭಿಸಿದ ಧೋನಿ – ವಿಶ್ವಕಪ್‍ಗಾಗಿ ಭರ್ಜರಿ ತಯಾರಿ
ವೈಯಕ್ತಿಕ ಆಟಗಾರರ ರ‍್ಯಾಂಕಿಂಗ್ ಗಮನಿಸಿದರೆ ಬ್ಯಾಟಿಂಗ್‍ನಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಟಿ20 ಕ್ರಿಕೆಟ್‍ನಲ್ಲಿ 2ನೇ ರ‍್ಯಾಂಕಿಂಗ್ ನಲ್ಲಿದ್ದರೆ, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 4ನೇ ರ‍್ಯಾಂಕಿಂಗ್ ನಲ್ಲಿದ್ದಾರೆ. ಜೊತೆಗೆ ಭಾರತದ ಇನ್ನೊಬ್ಬ ಆಟಗಾರ ಕೆ.ಎಲ್ ರಾಹುಲ್ 6ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ 7ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್ – ಕರ್ಟಿಸ್ ಕ್ಯಾಂಫರ್ ಹ್ಯಾಟ್ರಿಕ್ ವಿಕೆಟ್ ಸಾಧನೆ
ತಂಡಗಳ ರ‍್ಯಾಂಕಿಂಗ್, ಆಟಗಾರರ ರ‍್ಯಾಂಕಿಂಗ್ ಗಮನಿಸದರೆ ಎರಡು ತಂಡಗಳ ಪ್ರದರ್ಶನ ಶ್ರೇಷ್ಠ ಮಟ್ಟದಲ್ಲಿದೆ. ಆದರೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಪ್ರತಿ ಬಾರಿ ಗೆದ್ದಿದೆ ಇದು ಭಾರತಕ್ಕೆ ಪ್ಲಸ್ ಪಾಯಿಂಟ್.