ಅಹಮದಾಬಾದ್: ಟೀಂ ಇಂಡಿಯಾದ (Team India) ವಿಸ್ಫೋಟಕ ಆಲ್‌ರೌಂಡರ್ ಶಿವಂ ದುಬೆ (Shivam Dube) ಮತ್ತೆ ಲಕ್ಕಿ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಹೌದು. ಇಲ್ಲಿಯವರೆಗೆ ಶಿವಂ ದುಬೆ ಇಲ್ಲಿಯವರೆಗೆ ಯಾವ ಫೈನಲ್ ಪಂದ್ಯ ಆಡಿದ್ದಾರೋ ಆ ಎಲ್ಲಾ ಪಂದ್ಯಗಳನ್ನು ಭಾರತ (Team India) ಜಯಗಳಿಸಿದ್ದು ವಿಶೇಷ.
2023 – ಐಪಿಎಲ್‌ನಲ್ಲಿ ಗುಜರಾತ್ ಜೈಂಟ್ಸ್ ಸೋಲಿಸಿ ಚೆನ್ನೈ 5ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ಪಂದ್ಯದಲ್ಲಿ ಶಿವಂ ದುಬೆ ಅಜೇಯ 32 ರನ್(21 ಎಸೆತ) ಹೊಡೆದಿದ್ದರು. ಇದನ್ನೂ ಓದಿ: 4 ವಿಶ್ವದಾಖಲೆಯೊಂದಿಗೆ ವಿಶ್ವಚಾಂಪಿಯನ್ – ಇತಿಹಾಸ ಬರೆದ ಟೀಂ ಇಂಡಿಯಾ
Shivam entered DU-BEAST mode, literally! 🥶
24 runs in the final over powered #TeamIndia to the highest-ever total in an ICC Men’s T20 World Cup final! 🔥
ICC Men’s #T20WorldCup | FINAL | #INDvNZ | LIVE NOW 👉 https://t.co/Tz1DBSb4nT pic.twitter.com/bBsotH2Twh
— Star Sports (@StarSportsIndia) March 8, 2026
2025 – ಪಾಕಿಸ್ತಾನದ ವಿರುದ್ಧ ಫೈನಲ್ ಗೆದ್ದು ಭಾರತ ಒಂಭತ್ತನೇ ಬಾರಿ ಏಷ್ಯಾ ಕಪ್ ಗೆದ್ದುಕೊಂಡಿತ್ತು. ಶಿವಂ ದುಬೆ 33 ರನ್(17 ಎಸೆತ) ಹೊಡೆದಿದ್ದರು. ಇದನ್ನೂ ಓದಿ: ಸಿಕ್ಸರ್, ಬೌಂಡರಿಗಳ ಸುರಿಮಳೆ – 255 ರನ್ ಹೊಡೆದು ವಿಶ್ವದಾಖಲೆ ಬರೆದ ಟೀಂ ಇಂಡಿಯಾ
2026 – ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ 3ನೇ ಬಾರಿ ಟಿ20 ವಿಶ್ವಕಪ್ ಜಯಿಸಿದೆ. ಇಂದಿನ ಪಂದ್ಯದಲ್ಲಿ ದುಬೆ ಅಜೇಯ 26 ರನ್(8 ಎಸೆತ, 3 ಬೌಂಡರಿ, 2 ಸಿಕ್ಸ್) ಚಚ್ಚಿದ್ದರು.
ಈ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ 17 ಎಸೆತಗಳಲ್ಲಿ 27 ರನ್ ಹೊಡೆದಿದ್ದರು. ವೆಸ್ಟ್ ಇಂಡೀಸ್ ವಿರುದ್ಧ ಸೂಪರ್ 8 ಪಂದ್ಯದಲ್ಲಿ ಸತತ ಎರಡು ಬೌಂಡರಿ ಹೊಡೆದು ಪಂದ್ಯವನ್ನು ಭಾರತದ ಕಡೆ ವಾಲಿಸಿದ್ದರು. ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ 43 ರನ್(25 ಎಸೆತ, 1 ಬೌಂಡರಿ, 4 ಸಿಕ್ಸ್) ಹೊಡೆದಿದ್ದರು.

