ಅಹಮದಾಬಾದ್: ನ್ಯೂಜಿಲೆಂಡ್(New Zealand) ವಿರುದ್ಧ ಟಿ20 ವಿಶ್ವಕಪ್ ಫೈನಲ್ (T20 World Cup) ಪಂದ್ಯದಲ್ಲಿ ಅಬ್ಬರಿಸಿದ ಅಭಿಷೇಕ್ ಶರ್ಮಾ(Abhishek Sharma) ಸ್ಫೋಟಕ ಅರ್ಧಶತಕ ಸಿಡಿಸಿ ವಿಶ್ವದಾಖಲೆ (World Record) ಬರೆದಿದ್ದಾರೆ.
ಕೇವಲ 18 ಎಸೆತಗಳಲ್ಲಿ ಅಭಿಷೇಕ್ ಶರ್ಮಾ ಅರ್ಧಶತಕ ಹೊಡೆದರು. ಅಂತಿಮವಾಗಿ 52 ರನ್ (21 ಎಸೆತ, 6 ಬೌಂಡರಿ, 3 ಸಿಕ್ಸ್) ಗಳಿಸಿದ್ದಾಗ ರಚಿನ್ ಬೌಲಿಂಗ್‌ನಲ್ಲಿ ಕೀಪರ್‌ಗೆ ಕ್ಯಾಚ್ ನೀಡಿ ಔಟಾದರು.
ಟಿ20 ಫೈನಲಿನಲ್ಲಿ ಅತಿವೇಗದ ಅರ್ಧಶತಕ:
18 ಎಸೆತ – ಅಭಿಷೇಕ್ ಶರ್ಮಾ(ಭಾರತ) Vs ನ್ಯೂಜಿಲೆಂಡ್(2026)
31 ಎಸೆತ – ಮಿಚೆಲ್ ಮಾರ್ಷ್(ಆಸ್ಟ್ರೇಲಿಯಾ) Vs ನ್ಯೂಜಿಲೆಂಡ್(2021)
32 ಎಸೆತ – ಕೇನ್ ವಿಲಿಯಮ್ಸನ್(ನ್ಯೂಜಿಲೆಂಡ್) Vs ಆಸ್ಟ್ರೇಲಿಯಾ(2021)
33 ಎಸೆತ – ಕುಮಾರ ಸಂಗಕ್ಕಾರ(ಶ್ರೀಲಂಕಾ) Vs ಪಾಕಿಸ್ತಾನ(2009)
33 ಎಸೆತ – ಜೋ ರೂಟ್(ಇಂಗ್ಲೆಂಡ್) Vs ಆಸ್ಟ್ರೇಲಿಯಾ(2010)
Launched into the stands! 🙌6️⃣
Abhishek Sharma and Sanju Samson have got Team India off to a strong start! 🔥
ICC Men’s #T20WorldCup | FINAL | #INDvNZ | LIVE NOW 👉 https://t.co/Tz1DBSb4nT pic.twitter.com/pyALmdt7fQ
— Star Sports (@StarSportsIndia) March 8, 2026
ಹಾಗೆ ನೋಡಿದರೆ ಅಭಿಷೇಕ್ ಶರ್ಮಾ ಅವರು ಈ ಟೂರ್ನಿಯಲ್ಲಿ ಕಳಪೆ ಸಾಧನೆ ಮಾಡಿದ್ದರು. ಫೈನಲ್‌ಗೂ ಮೊದಲು ಆಡಿದ್ದ 7 ಪಂದ್ಯಗಳಲ್ಲಿ ಕೇವಲ 89 ರನ್ ಹೊಡೆದಿದ್ದರು. ಈ ಪೈಕಿ ಅಮೆರಿಕ, ಪಾಕಿಸ್ತಾನ, ನೆದರ್‌ಲ್ಯಾಂಡ್ಸ್ ವಿರುದ್ಧ ಸೊನ್ನೆಗೆ ಔಟಾದರೆ ದಕ್ಷಿಣ ಆಫ್ರಿಕಾ ವಿರುದ್ಧ 15 ರನ್, ವೆಸ್ಟ್ ಇಂಡೀಸ್ ವಿರುದ್ಧ 10 ರನ್, ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 9 ರನ್ ಗಳಿಸಿ ಔಟಾಗಿದ್ದರು. ಇದನ್ನೂ ಓದಿ: ನಾವು ಹೇಗಿದ್ದರೂ ಮೊದಲು ಬ್ಯಾಟ್ ಮಾಡುತ್ತಿದ್ದೆವು: ಸೂರ್ಯ
ಈ ಟೂರ್ನಿಯಲ್ಲಿ ಮೊದಲ ವಿಕೆಟ್ ಭಾರತದ ಪರ 98 ರನ್ ಜೊತೆಯಾಟ ಬಂದಿದ್ದು ಇದೇ ಮೊದಲು. ಅಭಿಷೇಕ್ 21 ಎಸೆತಗಳಲ್ಲಿ 52 ರನ್ ಹೊಡೆದಿದ್ದರೆ ಸ್ಯಾಮ್ಸನ್ 22 ಎಸೆತಗಳಲ್ಲಿ 38 ರನ್ ಹೊಡೆದಿದ್ದರು.

