ಬೆಂಗಳೂರು: ಅಂಧರ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಪಂದ್ಯದಲ್ಲಿ (T20 World Cup Blind) ಬಾಂಗ್ಲಾದೇಶದ (Bangladesh) ವಿರುದ್ಧ ಭಾರತ 120 ರನ್‌ಗಳ ಭರ್ಜರಿ ಜಯ ಸಾಧಿಸಿದ್ದು, 3ನೇ ಬಾರಿಗೆ ಟಿ20 ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದೆ.
#TeamIndia beat Bangladesh by 120 runs & clinched the 3rd #T20WorldCup 2022 ???? pic.twitter.com/Vod0x13fzx
— Doordarshan Sports (@ddsportschannel) December 17, 2022
Advertisement
ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M Chinnaswamy Stadium) ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ (Team India) 20 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 277 ರನ್ ಸಿಡಿಸಿತ್ತು. 278 ರನ್‌ಗಳ ಬೃಹತ್ ಮೊತ್ತದ ಗುರಿ ಪಡೆದ ಬಾಂಗ್ಲಾದೇಶ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 157 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು.
Advertisement
Winners of T20 Blind Cricket World Cup:
In 2012 – India.
In 2017 – India.
In 2022 – India.
Three times happened and all three titles won by team India!! ???? pic.twitter.com/72OskIt27P
— சிங்கப்பூர் துறவி (@RamprabuKallan) December 17, 2022
Advertisement
ಟೀಂ ಇಂಡಿಯಾ (Team India) ಪರ ಸುನೀಲ್ ರಮೇಶ್ 63 ಎಸೆತಗಳಲ್ಲಿ ಅಜೇಯ 136 ರನ್ ಸಿಡಿಸಿದ್ರೆ ಅಜಯ್‌ಕುಮಾರ್ ರೆಡ್ಡಿ 50 ಎಸೆತಗಳಲ್ಲಿ ಅಜೇಯ 100 ರನ್ ಸಿಡಿಸಿ ಸಂಭ್ರಮಿಸಿದರು. ಸಿಕ್ಸರ್, ಬೌಂಡರಿಗಳ ಮಳೆಗರೆಯುತ್ತಾ ಬಾಂಗ್ಲಾ ಬೌಲರ್‌ಗಳನ್ನು ಚೆಂಡಾಡಿದರು. ಇದನ್ನೂ ಓದಿ: ಕೇವಲ 15 ರನ್‌ಗಳಿಗೆ ಆಲೌಟ್- ಟಿ20ಯಲ್ಲೇ ಕೆಟ್ಟ ದಾಖಲೆ ಬರೆದ ಸಿಡ್ನಿ ಥಂಡರ್
Advertisement
278 ರನ್‌ಗಳ ಬೃಹತ್ ಮೊತ್ತ ಬೆನ್ನತ್ತಿದ್ದ ಬಾಂಗ್ಲಾ 157 ರನ್ ಗಳಿಸಿ ಸೋಲು ಕಂಡಿತು. ಲಲಿತ್ ಮೀನಾ ಮತ್ತು ಅಜಯ್ ಕುಮಾರ್ ಭಾರತದ ಪರ ತಲಾ ಒಂದೊಂದು ವಿಕೆಟ್ ಪಡೆದರು. ಇದನ್ನೂ ಓದಿ: ಬಾಂಗ್ಲಾದ ಭಾರ ಹೊತ್ತ ಜಾಕಿರ್ – ಜಯದ ಹೊಸ್ತಿಲಲ್ಲಿ ಭಾರತ
2012ರ ಟೂರ್ನಿಯ ಫೈನಲ್‌ನಲ್ಲಿ ಪಾಕಿಸ್ತಾನ (Pakistan) ತಂಡವನ್ನು 29 ರನ್‌ಗಳಿಂದ ಮಣಿಸಿತ್ತು. 2017ರಲ್ಲಿ ನಡೆದ 2ನೇ ಆವೃತ್ತಿಯ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಪಾಕಿಸ್ತಾನದ ವಿರುದ್ಧವೇ 9 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತ್ತು.