ದುಬೈ: ಟಿ20 ವಿಶ್ವಕಪ್ ಅರಬ್‍ರ ನಾಡಲ್ಲಿ ಆರಂಭಗೊಂಡಿದೆ. ಮೊದಲ ಸುತ್ತಿನ ಎರಡು ಪಂದ್ಯಗಳು ಮುಗಿದಿದ್ದು ಇಂದು ನಡೆಯುತ್ತಿರುವ ಮೂರನೇ ಪಂದ್ಯದಲ್ಲಿ ನೆದರ್ಲ್ಯಾಂಡ್ ಮತ್ತು ಐರ್ಲ್ಯಾಂಡ್ ಕಾದಾಟ ನಡೆಸುತ್ತಿದೆ. ಈ ಪಂದ್ಯದಲ್ಲಿ ಐರ್ಲ್ಯಾಂಡ್ ನ ಆಲ್‍ರೌಂಡರ್ ಆಟಗಾರ ಕರ್ಟಿಸ್ ಕ್ಯಾಂಫರ್ ಹ್ಯಾಟ್ರಿಕ್ ವಿಕೆಟ್ ಕಿತ್ತು ಮೆರೆದಾಡಿದ್ದಾರೆ.
Advertisement
ಇಂದು ನಡೆಯುತ್ತಿರುವ ಮೊದಲ ಸುತ್ತಿನ ಮೂರನೇ ಪಂದ್ಯದಲ್ಲಿ ನೆದರ್ಲ್ಯಾಂಡ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ಬೃಹತ್ ಮೊತ್ತ ಕಲೆಹಾಕುವ ಕನಸಿನಲ್ಲಿತ್ತು. ಈ ಕನಸಿಗೆ ಕರ್ಟಿಸ್ ಕ್ಯಾಂಫರ್ ತಣ್ಣಿರೇರಚಿದ್ದಾರೆ. ಬೌಲಿಂಗ್‍ನಲ್ಲಿ ಕಮಾಲ್ ಮಾಡಿದ ಕ್ಯಾಂಫರ್ 9 ನೇ ಓವರ್ ಬೌಲಿಂಗ್ ಮಾಡಲು ಬಂದು ಸತತ 4 ವಿಕೆಟ್ ಕಿತ್ತು ಮಿಂಚುಹರಿಸಿದ್ದಾರೆ. ತನ್ನ ಕೊಟದ 4 ಓವರ್ ಎಸೆದ ಕ್ಯಾಂಫರ್ 26ರನ್ ನೀಡಿ 4 ವಿಕೆಟ್ ಕಿತ್ತು ಮಿಂಚಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾಗೆ ಕ್ಲಾಸ್ ಆರಂಭಿಸಿದ ಧೋನಿ – ವಿಶ್ವಕಪ್‍ಗಾಗಿ ಭರ್ಜರಿ ತಯಾರಿ
Advertisement
https://twitter.com/HarshalBarot7/status/1450065443121553416?ref_src=twsrc%5Etfw%7Ctwcamp%5Etweetembed%7Ctwterm%5E1450065443121553416%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fsports%2Fcricket%2Farticle%2Fwatch-irelands-curtis-campher-scalps-4-wickets-in-four-balls-against-netherlands-in-t20-world-cup%2F824496
Advertisement
ಟಿ20 ವಿಶ್ವಕಪ್ ಮೊದಲ ಸುತ್ತಿನ ಪಂದ್ಯಗಲೇ ರೋಚಕವಾಗಿ ಮೂಡಿಬಂದಿದ್ದು, ನಿನ್ನೆ ನಡೆದ ಪಂದ್ಯದಲ್ಲಿ ಬಲಿಷ್ಠ ತಂಡವಾಗಿ ಗೋಚರಿಸಿದ್ದ ಬಾಂಗ್ಲಾದೇಶವನ್ನು ಸ್ಕಾಟ್ಲೆಂಡ್ ಬಗ್ಗುಬಡಿದು ನೀರು ಕುಡಿಸಿದೆ. ಇದನ್ನೂ ಓದಿ: ಚಾಂಪಿಯನ್ ಆಟಗಾರರಿಗಿಲ್ಲ T20 ವಿಶ್ವಕಪ್ ಆಡುವ ಅದೃಷ್ಟ
Advertisement