ಮುಂಬೈ: ಟಿ20 ಕ್ರಿಕೆಟ್‍ನಲ್ಲಿ ರಾತ್ರೋ ರಾತ್ರಿ ಮಿಂಚಿ ಸ್ಟಾರ್ ಆಗಿ ಮೆರೆದವರು ಇದ್ದಾರೆ. ಒಂದೇ ರಾತ್ರಿಯ ಆಟದಲ್ಲಿ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದವರು ಇದ್ದಾರೆ. ಹೀಗೆ ಟಿ20 ವಿಶ್ವಕಪ್ ಕ್ರಿಕೆಟ್‍ನಲ್ಲಿ ಆಡಿದ ಐದು ಮಂದಿ ಭಾರತೀಯ ಆಟಗಾರರು ಆ ಬಳಿಕ ತಮ್ಮ ಟಿ20 ಕ್ರಿಕೆಟ್ ವೃತ್ತಿಜೀವನವನ್ನು ಕೊನೆಗೊಳಿಸಿರುವ ಅಚ್ಚರಿ ಸಂಗತಿ ನಡೆದಿದೆ.
Advertisement
ಟಿ20 ಕ್ರಿಕೆಟ್‍ನಲ್ಲಿ ಡ್ಯಾಶಿಂಗ್ ಓಪನರ್ ಆಗಿ ಗುರುತಿಸಿಕೊಂಡಿದ್ದ ವೀರೇಂದ್ರ ಸೆಹ್ವಾಗ್ 2012ರ ಟಿ20 ವಿಶ್ವಕಪ್ ಬಳಿಕ ಯಾವುದೇ ಟಿ20 ಪಂದ್ಯಗಳನ್ನು ಆಡಿಲ್ಲ ಎಂಬುದು ಅಚ್ಚರಿಯಾದರು ಸತ್ಯ. ಹೌದು ಸೆಹ್ವಾಗ್ 2012ರ ಟಿ20 ವಿಶ್ವಕಪ್‍ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ್ದೇ ಕೊನೆಯ ಪಂದ್ಯ ಆ ಬಳಿಕ ಭಾರತ ಪರ ಒಂದೇ ಒಂದು ಟಿ20 ಪಂದ್ಯವಾಡಿಲ್ಲ. ಇದನ್ನೂ ಓದಿ: ಟೀಂ ಇಂಡಿಯಾ ಆಟಗಾರರನ್ನು ಅಣಕಿಸಿದ ಶಾಹೀನ್ ಶಾ ಆಫ್ರಿದಿಗೆ ಚಾಟಿ ಬೀಸಿದ ನೆಟ್ಟಿಗರು
Advertisement
Advertisement
2007 ಟಿ20 ವಿಶ್ವಕಪ್‍ನ ಹೀರೋ ಜೋಗಿಂದರ್ ಶರ್ಮಾ. ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್ ಫೈನಲ್ ಪಂದ್ಯದ ಅಂತಿಮ ಓವರ್ ಎಸೆದು ಭಾರತಕ್ಕೆ ಜಯ ತಂದುಕೊಟ್ಟ ಜೋಗಿಂದರ್ ಶರ್ಮಾ ಆ ಬಳಿಕ ಭಾರತದ ಟಿ20 ತಂಡದಲ್ಲಿ ಒಮ್ಮೆಯೂ ಅವಕಾಶ ಗಿಟ್ಟಿಸಿಕೊಳ್ಳದೇ ಇರುವುದು ವಿಪರ್ಯಾಸ. ಇದನ್ನೂ ಓದಿ: ಐಪಿಎಲ್ ಬಿಡ್ಡಿಂಗ್‍ನಲ್ಲಿ ಈ ಇಬ್ಬರಿಗೆ ಭಾರೀ ಬೇಡಿಕೆ
Advertisement
ಭಾರತ ತಂಡದ ಬೌಲಿಂಗ್ ವಿಭಾಗದಲ್ಲಿ ತಮ್ಮ ವೇಗದ ದಾಳಿಯ ಮೂಲಕ ಹೆಸರುವಾಸಿಯಾಗಿದ್ದ ಅಜಿತ್ ಅಗರ್ಕರ್ ಮತ್ತು ಆರ್.ಪಿ ಸಿಂಗ್ ಕೂಡ ಕ್ರಮವಾಗಿ 2007 ಮತ್ತು 2009ರ ಟಿ20 ವಿಶ್ವಕಪ್ ಬಳಿಕ ಟಿ20 ತಂಡದಿಂದ ಮರೆಯಾಗಿದ್ದರು. ಇದನ್ನೂ ಓದಿ: ಪಂದ್ಯ ಗೆದ್ದರೂ ಸಂಭ್ರಮಿಸದ ನೀಶಮ್ ಫೋಟೋ ವೈರಲ್
ಈ ನಾಲ್ವರು ಆಟಗಾರರಂತೆ ಟೀಂ ಇಂಡಿಯಾದ ಪರ ಹಲವು ವರ್ಷಗಳ ಕಾಲ ತನ್ನ ಘಾತಕ ವೇಗದ ಮೂಲಕ ಹೆಸರುವಾಸಿಯಾಗಿದ್ದ ಜಹೀರ್ ಖಾನ್ 2012ರ ಟಿ20 ವಿಶ್ವಕಪ್‍ನಲ್ಲಿ ಆಡಿದ ಬಳಿಕ ಮತ್ತೆ ಭಾರತದ ಟಿ20 ತಂಡದಲ್ಲಿ ಕಾಣಿಸಿಕೊಳ್ಳಲೇ ಇಲ್ಲ.