ಫ್ಲೋರಿಡಾ: ಬಾರಿಯ ಟಿ20 ವಿಶ್ವಕಪ್‍ನಲ್ಲಿ (T20 World Cup 2024 )ಭಾಗವಹಿಸಿದ್ದ 20 ತಂಡಗಳಲ್ಲಿ 8 ತಂಡಗಳು ಸೂಪರ್-8ಗೆ (T20 World Cup 2024 Super 8) ಅರ್ಹತೆ ಪಡೆದಿವೆ.
ಇಂದು (ಜೂ.17) ಬಾಂಗ್ಲಾದೇಶ ಮತ್ತು ನೇಪಾಳ ನಡುವೆ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ 21 ರನ್‍ಗಳಿಂದ ಎದುರಾಳಿ ತಂಡವನ್ನು ಮಣಿಸಿತು. ಇದರೊಂದಿಗೆ ಸೂಪರ್-8 ಸುತ್ತಿಗೆ ಅರ್ಹತೆ ಪಡೆದುಕೊಂಡಿತು. ಈ ಮೂಲಕ ಸೂಪರ್-8 ಆಡಲಿರುವ ಎಂಟು ತಂಡಗಳು ಖಚಿತವಾಗಿದೆ. ಈ ತಂಡಗಳನ್ನು ತಲಾ 4ರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಜೂ.19 ರಿಂದ ಸೂಪರ್-8 ಪಂದ್ಯಗಳು ವೆಸ್ಟ್ ಇಂಡೀಸ್‍ನಲ್ಲಿ ಆರಂಭವಾಗಲಿದೆ.
ಸೂಪರ್-8 ತಲುಪಿದ ತಂಡಗಳು
ಎ ಗುಂಪು: ಭಾರತ, ಯುಎಸ್‍ಎ
ಬಿ ಗುಂಪು: ಆಸ್ಟ್ರೇಲಿಯಾ, ಇಂಗ್ಲೆಂಡ್
ಸಿ ಗುಂಪು: ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್
ಡಿ ಗುಂಪು: ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ
ಈ 12 ತಂಡಗಳ ಪಯಣ ಅಂತ್ಯ: ಈ ಬಾರಿ ವಿಶ್ವಕಪ್‍ನಲ್ಲಿ ಬಾಗವಹಿಸಿದ್ದ 20 ತಂಡಗಳಲ್ಲಿ 8 ತಂಡಗಳು ಸೂಪರ್-8ಗೆ ಅರ್ಹತೆ ಪಡೆದಿದ್ದರೆ, ಇನ್ನೊಂದೆಡೆ 12 ತಂಡಗಳ ಟಿ20 ವಿಶ್ವಕಪ್ ಪಯಣ ಅಂತ್ಯಗೊಂಡಿದೆ. ಈ 12 ತಂಡಗಳಲ್ಲಿ ಪಾಕಿಸ್ತಾನ, ನ್ಯೂಜಿಲೆಂಡ್, ಪಪುವಾ ನ್ಯೂಗಿನಿಯಾ, ನಮೀಬಿಯಾ, ಐರ್ಲೆಂಡ್, ಕೆನಡಾ, ಓಮನ್, ಸ್ಕಾಟ್ಲೆಂಡ್, ಶ್ರೀಲಂಕಾ, ಉಗಾಂಡಾ, ನೇಪಾಳ ಮತ್ತು ನೆದಲ್ಯಾರ್ಂಡ್ಸ್ ತಂಡಗಳು ವಿಶ್ವಕಪ್ ನಿಂದ ಹೊರಬಿದ್ದಿವೆ.
ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಪಾಪುವಾ ನ್ಯೂಗಿನಿಯಾ ತಂಡಗಳಿಗೆ ಲೀಗ್ ಸುತ್ತಿನಲ್ಲಿ ಒಂದೊಂದು ಪಂದ್ಯಗಳು ಬಾಕಿಯಿವೆ.