ಮೆಲ್ಬರ್ನ್: ಟಿ20 ವಿಶ್ವಕಪ್ ಫೈನಲ್ (T20 World Cup 2022 Final) ಪಂದ್ಯದಲ್ಲಿ ಇಂಗ್ಲೆಂಡ್ (England) ತಂಡದ ಆಟಗಾರರು ಕೈಗೆ ಕಪ್ಟು ಪಟ್ಟಿ ಧರಿಸಿ (Black Armband) ಕಣಕ್ಕಿಳಿದಿದ್ದಾರೆ.
Advertisement
ಪಾಕಿಸ್ತಾನ (Pakistan) ವಿರುದ್ಧ ನಡೆಯುತ್ತಿರುವ ಫೈನಲ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಡೇವಿಡ್ ಇಂಗ್ಲೀಷ್ (David English) ಸಾವನ್ನಪ್ಪಿದ್ದಾರೆ. ಅವರಿಗೆ ಸಂತಾಪ ಸೂಚಿಸುವ ಸಲುವಾಗಿ ಇಂಗ್ಲೆಂಡ್ ತಂಡ ಕಪ್ಪು ಪಟ್ಟಿಯೊಂದಿಗೆ ಮೈದಾನಕ್ಕಿಳಿದಿದೆ. ಇದನ್ನೂ ಓದಿ: ಲಿವರ್‌ಪೂಲ್ ತಂಡವನ್ನು ಖರೀದಿಸಲು ಮುಂದಾದ ಅಂಬಾನಿ
Advertisement
Advertisement
ಇಂಗ್ಲೆಂಡ್ ತಂಡದ ಮಾಜಿ ಆಟಗಾರರಾಗಿದ್ದ ಡೇವಿಡ್ ಇಂಗ್ಲೀಷ್ ಅವರನ್ನು ಇಂಗ್ಲೆಂಡ್ ಕ್ರಿಕೆಟ್‍ನ ಗಾಡ್‍ಫಾದರ್ ಎಂದು ಕರೆಯಲಾಗುತ್ತಿತ್ತು. 76 ವರ್ಷದ ಡೇವಿಡ್ ಅವರು ಇಂದು ಹೃದಯಘಾತದಿಂದ ಮೃತಪಟ್ಟಿದ್ದಾರೆ. ಇಂದು ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್ ಫೈನಲ್ ಪಂದ್ಯವಾಡುತ್ತಿರುವ ಕಾರಣ ಕಪ್ಪುಪಟ್ಟಿ ಧರಿಸಿ ಆಡಲು ನಿರ್ಧರಿಸಿತು. ಇದನ್ನೂ ಓದಿ: ಟೀಂ ಇಂಡಿಯಾ ಹೀನಾಯ ಸೋಲಿಗೆ ಇದೇ ಕಾರಣ – ಪಾಕ್ ತಜ್ಞರ ವಿಶ್ಲೇಷಣೆ
Advertisement
ಡೇವಿಡ್ 1,500ಕ್ಕೂ ಹೆಚ್ಚು ಪ್ರಥಮ ದರ್ಜೆ ಪಂದ್ಯ ಮತ್ತು 125 ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು. ಕ್ರಿಕೆಟ್‍ನಿಂದ ನಿವೃತ್ತಿ ಹೊಂದಿದ ಬಳಿಕ ಚಾರಿಟೇಬಲ್ ಟ್ರಸ್ಟ್‌ಗಳನ್ನು ನಡೆಸಿ ಯುವ ಕ್ರಿಕೆಟಿಗರಿಗೆ ಸಲಹೆ ನೀಡುತ್ತಿದ್ದರು. ಇದೀಗ ವಿಶ್ವಕಪ್ ಆಡುತ್ತಿರುವ ಜೋಸ್ ಬಟ್ಲರ್, ಬೆನ್‍ಸ್ಟೋಕ್ಸ್ ಸಹಿತ ಹಲವು ಆಟಗಾರರು ಇವರು ಮುನ್ನಡೆಸುತ್ತಿದ್ದ ಬೌಂಡರಿ ಕ್ರಿಕೆಟ್ ಕ್ಲಬ್‍ನಿಂದ ಸಹಾಯ ಪಡೆದಿದ್ದರು. ಹಾಗಾಗಿ ಬಟ್ಲರ್ ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿದ್ದಾರೆ.