ಮೆಲ್ಬರ್ನ್: ಟಿ20 ವಿಶ್ವಕಪ್ ಫೈನಲ್ (T20 World Cup 2022 Final) ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಇಂಗ್ಲೆಂಡ್ (England) ತಂಡ ಅಧಿಕಾರಯುತವಾಗಿ ಪಾಕಿಸ್ತಾನ (Pakistan) ವಿರುದ್ಧ 5 ವಿಕೆಟ್‍ಗಳ ಜಯದೊಂದಿಗೆ 2ನೇ ಬಾರಿ ಟಿ20 ವಿಶ್ವಕಪ್‍ಗೆ ಮುತ್ತಿಕ್ಕಿದೆ.
Advertisement
ಪಾಕಿಸ್ತಾನ ನೀಡಿದ 137 ರನ್‌ಗಳ ಅಲ್ಪಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ಪರ ಬೌಲಿಂಗ್‍ನಲ್ಲಿ ಸ್ಯಾಮ್ ಕರನ್ (Sam Curran) ಮಿಂಚಿದರೆ, ಬ್ಯಾಟಿಂಗ್‍ನಲ್ಲಿ ಬೆನ್‍ಸ್ಟೋಕ್ಸ್ (Ben Stokes) ಆಧಾರವಾದರು. ಪರಿಣಾಮ 19 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 138 ರನ್ ಬಾರಿಸಿ ಇನ್ನೂ 1 ಓವರ್ ಬಾಕಿ ಇರುವಂತೆ ಇಂಗ್ಲೆಂಡ್ ಗೆದ್ದು ವಿಶ್ವಕಪ್ ಎತ್ತಿ ಹಿಡಿಯಿತು. ಈ ಮೂಲಕ ಇಂಗ್ಲೆಂಡ್ 12 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದಿದೆ. ಈ ಹಿಂದೆ 2010ರಲ್ಲಿ ಟಿ20 ವಿಶ್ವಕಪ್ ಗೆದ್ದಿತ್ತು. ಇದನ್ನೂ ಓದಿ: ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದ ಇಂಗ್ಲೆಂಡ್!
Advertisement
Advertisement
ಅಲ್ಪಮೊತ್ತ ಬೆನ್ನಟ್ಟಿದ ಇಂಗ್ಲೆಂಡ್ ಆರಂಭಿಕ ಆಘಾತ ಅನುಭವಿಸಿತು. ಕಳೆದ ಪಂದ್ಯದ ಹೀರೋ ಅಲೆಕ್ಸ್ ಹೇಲ್ಸ್ ಆಟ ಕೇವಲ 1 ರನ್‍ಗೆ ಕೊನೆಗೊಂಡಿತು. ಶಾಹೀನ್ ಅಫ್ರಿದಿ ಆರಂಭದಲ್ಲೇ ಪಾಕಿಸ್ತಾನಕ್ಕೆ ಮೇಲುಗೈ ತಂದುಕೊಟ್ಟರು. ಬಳಿಕ ಬಂದ ಫಿಲ್ ಸಾಲ್ಟ್ 10 ರನ್ (9 ಎಸೆತ, 2 ಬೌಂಡರಿ) ಬಾರಿಸಿ ವಿಕೆಟ್ ಕೈಚೆಲ್ಲಿಕೊಂಡರು. ಆ ಬಳಿಕ ಬಟ್ಲರ್ ಕೂಡ 26 ರನ್ (17 ಎಸೆತ, 3 ಬೌಂಡರಿ, 1 ಸಿಕ್ಸ್) ಬಾರಿಸಿ ಔಟ್ ಆದರು.
Advertisement
ಇಂಗ್ಲೆಂಡ್ 84 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಲುಕಿತು. ಆಗ ಬೆನ್‍ಸ್ಟೋಕ್ಸ್ ಬ್ಯಾಟಿಂಗ್‍ನಲ್ಲಿ ಮಿಂಚಲಾರಂಭಿಸಿದರು. ಪಾಕಿಸ್ತಾನ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಸ್ಟೋಕ್ಸ್ ಅಜೇಯ 52 ರನ್ (49 ಎಸೆತ, 5 ಬೌಂಡರಿ, 1 ಸಿಕ್ಸ್) ಚಚ್ಚಿ ಕೊನೆಯವರೆಗೆ ಹೋರಾಡಿ ಜಯ ತಂದುಕೊಟ್ಟರು. ಇವರಿಗೆ ಮೊಯಿನ್ ಅಲಿ 19 ರನ್ (12 ಎಸೆತ, 2 ಬೌಂಡರಿ) ಉತ್ತಮ ಸಾಥ್ ನೀಡಿ ಜಯದ ಹೊಸ್ತಿಲಲ್ಲಿ ವಿಕೆಟ್ ಕಳೆದುಕೊಂಡರು. ಅಂತಿಮವಾಗಿ 19 ಓವರ್‌ಗಳಲ್ಲಿ 138 ರನ್ ಬಾರಿಸಿ ಜಯ ಸಾಧಿಸಿ ಸಂಭ್ರಮಿಸಿತು. ಇದನ್ನೂ ಓದಿ: ಲಿವರ್‌ಪೂಲ್ ತಂಡವನ್ನು ಖರೀದಿಸಲು ಮುಂದಾದ ಅಂಬಾನಿ
ಫೈನಲ್ ಪಂದ್ಯದ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದರು. ಇತ್ತ ಬ್ಯಾಟಿಂಗ್ ಮಾಡಲು ಬಂದ ಪಾಕಿಸ್ತಾನ ದೊಡ್ಡ ಮೊತ್ತ ಪೇರಿಸುವ ಕನಸಿಗೆ ಸ್ಯಾಮ್ ಕರನ್ ಆರಂಭದಲ್ಲೇ ತಡೆಯೊಡ್ಡಿದರು. ಪಾಕಿಸ್ತಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ 15 ರನ್ (14 ಎಸೆತ, 1 ಸಿಕ್ಸ್) ಸಿಡಿಸಿ ಕರನ್‍ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಬಳಿಕ ಬಂದ ಹ್ಯಾರಿಸ್ ಆಟ 8 ರನ್ (12 ಎಸೆತ, 1 ಬೌಂಡರಿ) ಅಂತ್ಯ ಕಂಡಿತು.
ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ ಪಾಕ್ ನಾಯಕ ಬಾಬರ್ ಅಜಮ್ ಮಾತ್ರ ರನ್ ಪೇರಿಸುವ ಇರಾದೆಯಲ್ಲಿ ನಿಧಾನವಾಗಿ ರನ್ ಹೆಚ್ಚಿಸಲು ಮುಂದಾದರು. ಇನ್ನೊಂದೆಡೆ ಇವರಿಗೆ ಶಾನ್ ಮಸೂದ್ ಉತ್ತಮ ಸಾಥ್ ನೀಡಿದರು. ಮಸೂದ್ ಬಿರುಸಿನ ಬ್ಯಾಟಿಂಗ್‍ಗೆ ಮುಂದಾದರೆ, ಬಾಬರ್ 32 ರನ್ (28 ಎಸೆತ, 2 ಬೌಂಡರಿ) ಸಿಡಿಸಿ ರಶೀದ್ ಮಾಡಿದ ಸ್ಪಿನ್ ಮ್ಯಾಜಿಕ್ ಅರಿಯದೆ ಕ್ಯಾಚ್ ನೀಡಿ ವಿಕೆಟ್ ಕೈಚೆಲ್ಲಿಕೊಂಡರು. ಈ ಮೊದಲು ಮಸೂದ್ ಜೊತೆ 3ನೇ ವಿಕೆಟ್‍ಗೆ 39 ರನ್ (24 ಎಸೆತ) ಜೊತೆಯಾಟವಾಡಿದರು. ಈ ಜೊತೆಯಾಟ ಪಾಕಿಸ್ತಾನ ಪಾಳಯದಲ್ಲಿ ಒಟ್ಟುಗೂಡಿಸಿದ ಹೆಚ್ಚಿನ ಜೊತೆಯಾಟವಾಗಿ ಕಂಡುಬಂತು. ಇದನ್ನೂ ಓದಿ: ಟೀಂ ಇಂಡಿಯಾ ಹೀನಾಯ ಸೋಲಿಗೆ ಇದೇ ಕಾರಣ – ಪಾಕ್ ತಜ್ಞರ ವಿಶ್ಲೇಷಣೆ
ಸ್ಯಾಮ್ ಕರನ್ ಕರಾಮತ್ತು:
ಬಾಬರ್ ಔಟ್ ಆದ ಬಳಿಕ ಬಂದ ಇಫ್ತಿಕರ್ ಶೂನ್ಯ ಸುತ್ತಿದರು. ಇನ್ನೊಂದೆಡೆ ಮಸೂದ್ 38 ರನ್ (28 ಎಸೆತ, 2 ಬೌಂಡರಿ, 1 ಸಿಕ್ಸ್) ಚಚ್ಚಿ ಅಬ್ಬರಿಸುತ್ತಿದ್ದ ಅಬ್ಬರಕ್ಕೆ ಸ್ಯಾಮ್ ಕರನ್ ಬ್ರೇಕ್ ಹಾಕಿದರು. ಬಳಿಕ ಮತ್ತೆ ಪಾಕಿಸ್ತಾನದ ಕುಸಿತ ಆರಂಭವಾಯಿತು. ಇಂಗ್ಲೆಂಡ್ ಬೌಲರ್‌ಗಳ ಶಿಸ್ತುಬದ್ಧ ದಾಳಿಯನ್ನು ಎದುರಿಸಲು ಪಾಕ್ ಆಟಗಾರರು ಪರದಾಡಿದರು.
ಶಾಬಾಝ್ ಖಾನ್ 20 ರನ್ (14 ಎಸೆತ, 2 ಬೌಂಡರಿ) ಸಿಡಿಸಿ ಔಟ್ ಆದ ಬಳಿಕ ಬಂದ ಬಿಗ್ ಹಿಟ್ಟರ್ ನವಾಝ್ 5 ಮತ್ತು ವಾಸೀಂ 4 ರನ್ ಬಾರಿಸಿ ಪೆವಿಲಿಯನ್ ದಾರಿ ಹಿಡಿದರು. ಸ್ಲಾಗ್ ಓವರ್‌ಗಳಲ್ಲಿ ಇಂಗ್ಲೆಂಡ್ ಬೌಲರ್‌ಗಳು ವಿಕೆಟ್ ಜೊತೆ ರನ್‍ಗೆ ಕಡಿವಾಣ ಹಾಕಿದರು.
ಪರಿಣಾಮ 20 ಓವರ್‌ಗಳ ಅಂತ್ಯಕ್ಕೆ ಇಂಗ್ಲೆಂಡ್ 8 ವಿಕೆಟ್ ಕಳೆದುಕೊಂಡು ಕೇವಲ 137 ರನ್ ಸಿಡಿಸಲಷ್ಟೇ ಶಕ್ತವಾಯಿತು. ಇಂಗ್ಲೆಂಡ್ ಪರ ಕರನ್ 4 ಓವರ್ ಎಸೆದು 12 ರನ್ ನೀಡಿ 3 ವಿಕೆಟ್ ಕಿತ್ತು ಮಿಂಚಿದರು. ರಶೀದ್ ಮತ್ತು ಜೋರ್ಡನ್ ತಲಾ 2 ವಿಕೆಟ್ ಕಬಳಿಸಿದರು. ಇನ್ನೊಂದು ವಿಕೆಟ್ ಬೆನ್‍ಸ್ಟೋಕ್ಸ್ ಪಾಲಾಯಿತು.