BelgaumDistrictsLatestMain Post

ಹಿಂದೂ ಹಿಂದೂಗಳ ಮಧ್ಯೆ, ಭಾಷೆಗಳ ಮಧ್ಯೆ ಜಗಳ ಹಚ್ಚಲು ಷಡ್ಯಂತ್ರ: ರಾಜಾಸಿಂಗ್ ಠಾಕೂರ್

ಬೆಳಗಾವಿ: ಬ್ರಿಟಿಷರು ಭಾರತ ದೇಶವನ್ನು ಬಿಟ್ಟು ಹೋದರು ಆದರೆ ಈ ಕಾಂಗ್ರೆಸ್ ಪಕ್ಷದವರನ್ನು ಇಲ್ಲಿಯೇ ಬಿಟ್ಟು ಹೋಗಿದ್ದಾರೆ ಎಂದು ಹೈದರಾಬಾದ್‌ನ ಭಾಗ್ಯನಗರ ಕ್ಷೇತ್ರದ ಬಿಜೆಪಿ ಶಾಸಕ ರಾಜಾಸಿಂಗ್ ಠಾಕೂರ್ ವ್ಯಂಗ್ಯವಾಡಿದರು.

ಬೆಳಗಾವಿ ತಾಲೂಕಿನ ಗಣೇಶ್ ಭಾಗ್‌ನಲ್ಲಿ ಹಿಂದೂಪರ ಕಾರ್ಯಕರ್ತರ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ ಹಿಂದೂಗಳ ಮಧ್ಯೆ, ಭಾಷೆಗಳ ಮಧ್ಯೆ ಜಗಳ ಹಚ್ಚಲು ಷಡ್ಯಂತ್ರ ನಡೀತಿದೆ. ಬ್ರಿಟಿಷರು ದೇಶ ಬಿಟ್ಟು ಹೋದರು ಆದರೆ ದ್ರೋಹಿಗಳನ್ನು ಬಿಟ್ಟು ಹೋದರು. ಬೆಳಗಾವಿಯ ನೆಲ ಪುಣ್ಯ, ವೀರಭೂಮಿಯಾಗಿದೆ. ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಆ ವೇಳೆಯೂ ನಮ್ಮಲ್ಲಿ ದ್ರೋಹಿಗಳು ಇದ್ದರು. ಮತಾಂತರ ನಡೆಯುತ್ತಿದ್ದಾಗ ಅದರ ತಡೆಗೆ ಮಹಾತ್ಮ ಬಸವೇಶ್ವರರು ಜನ್ಮ ತಾಳಿದರು. ಕೆಲವರು ನಮ್ಮ ನಮ್ಮ ಮಧ್ಯೆ ಜಗಳ ಹಚ್ಚಲು ಯತ್ನಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಸೋಮವಾರ ಯಾದಗಿರಿಯಲ್ಲಿ ಚುನಾವಣೆ – ಪೊಲೀಸ್ ಇಲಾಖೆ ಸಜ್ಜು

ಕನ್ನಡಿಗ ಮತ್ತು ಮರಾಠಿಗರ ಮಧ್ಯೆ ಜಗಳ ಹಚ್ಚಲು ಷಡ್ಯಂತ್ರ ನಡೆಯುತ್ತಿದೆ ಇದನ್ನ ನೆನಪಿನಲ್ಲಿಟ್ಟುಕೊಳ್ಳಿ. ನಾನು ನಿಮಗೆ ಒಂದು ಕೆಲಸ ಒಪ್ಪಿಸಲು ಬಯಸುತ್ತೇನೆ. ದೇಶ, ಧರ್ಮದ ಸಲುವಾಗಿ ಸಂಘಟಿತರಾಗಿ ಕೆಲಸ ಮಾಡಬೇಕು. ದೇಶದಲ್ಲಿ ಮೋದಿ ಸರ್ಕಾರ ಇದೆ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದೆ. ಆದ್ರೆ ಧರ್ಮಕ್ಕೆ ಸಂಕಟ ಬಂದಾಗ ಸರ್ಕಾರ ಮುಂದೆ ಬರಲ್ಲ, ನೀವೇ ಮುಂದೆ ಬರಬೇಕು. ಧರ್ಮಕ್ಕೆ ಸಂಕಷ್ಟ ಬಂದಾಗ ನೀವೇ ಕೈಯಲ್ಲಿ ತಲ್ವಾರ್ ಹಿಡಿದು ಹೊರ ಬರಬೇಕು. ಶಾಸಕರು, ಸಂಸದರು ಯಾರೂ ಸಹ ತಲ್ವಾರ್ ಹಿಡಿದು ಹೊರ ಬರಲ್ಲ. ನಮ್ಮ ಹಿಂದೂಗಳನ್ನು ಮತಾಂತರ ಮಾಡುವ ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಕಿಡಿಕಾರಿದರು.

ಹಿಂದೂ ಕಾರ್ಯಕರ್ತರು ಪ್ರತಿ ಗ್ರಾಮಕ್ಕೆ ತೆರಳಿ ಒಂದು ಸೇನಾ ನಿರ್ಮಾಣ ಮಾಡುವೆ ಎಂದು ಸಂಕಲ್ಪ ಮಾಡಬೇಕು. ದುಡ್ಡು ನೀಡಿ ಮತಾಂತರ ಮಾಡಲಾಗುತ್ತಿದೆ. ಹಸಿರು ಟೋಪಿಯವರದ್ದು ಏನೂ ದೊಡ್ಡ ಇತಿಹಾಸ ಇಲ್ಲ ಕೇವಲ ಎರಡೂವರೆ ಸಾವಿರ ವರ್ಷದ ಇತಿಹಾಸ ಇದೆ. ಧರ್ಮದ್ರೋಹಿಗಳ ಸರ್ಕಾರ ಬಂದಾಗ ಟಿಪ್ಪು ಜಯಂತಿ ಆಚರಣೆ ಮಾಡಲಾಗುತ್ತದೆ. ಟಿಪ್ಪು ಸುಲ್ತಾನ್ ಹಿಂದೂಗಳ ಹಂತಕ, ಹಿಂದೂಗಳ ಕೊಚ್ಚಿ ಕೊಚ್ಚಿ ಹತ್ಯೆ ಮಾಡುವ ದುಷ್ಟ ರಾಕ್ಷಸನಾಗಿದ್ದ. ಟಿಪ್ಪು ಸುಲ್ತಾನ್ ಒಂದು ಗ್ರಾಮದ ಮೇಲೆ ದಾಳಿ ಮಾಡಿ ಬ್ರಾಹ್ಮಣರಿಗೆ ಇಸ್ಲಾಂ ಧರ್ಮ ಸ್ವೀಕರಿಸುವಂತೆ ಹೇಳಿದ್ದ. ದೀಪಾವಳಿಯಂದು ಆ ಗ್ರಾಮದ 800 ಬ್ರಾಹ್ಮಣರನ್ನು ಕೊಚ್ಚಿ ಕೊಂದಿದ್ದ. ಕೇರಳದ ಕ್ಯಾಲಿಕಟ್‌ಗೆ ಟಿಪ್ಪು ಸುಲ್ತಾನ್ 30 ಸಾವಿರ ಕಾರ್ಯಕರ್ತರ ಜೊತೆ ದಾಳಿ ಮಾಡಿದ್ದ. ಒಂದು ಕೈಯಲ್ಲಿ ಹಸಿರು ಪುಸ್ತಕ ಮತ್ತೊಂದು ಕೈಯಲ್ಲಿ ಖಡ್ಗ ಹಿಡಿದು ಎರಡರಲ್ಲಿ ಒಂದು ಆಯ್ಕೆ ಮಾಡು ಅಂತಾ ಆತನ ಸೈನಿಕರು ಕೇಳುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.

ಕೇರಳದಲ್ಲಿ 600ಕ್ಕೂ ಹೆಚ್ಚು ಆರ್‌ಎಸ್‌ಎಸ್ ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿತ್ತು. ಪಿಎಫ್‌ಐ ಸಂಘಟನೆ ಯವರು ಈ ಹತ್ಯೆಗಳನ್ನು ಮಾಡಿದ್ದಾರೆ. ಭಾರತವನ್ನು ಇಸ್ಲಾಂ ರಾಷ್ಟç ಮಾಡಲು ಪಿಎಫ್‌ಐ ಸಂಘಟನೆ ಯತ್ನಸಿದೆ. ಹಿಂದೂ ಹುಡುಗಿಯರಿಗೆ ಮೋಸ ಮಾಡುವಂತೆ ಪಿಎಫ್‌ಐ ಯುವಕರಿಗೆ ತರಬೇತಿ ಕೊಟ್ಟು ಲವ್ ಜಿಹಾದ್ ಮಾಡುತ್ತಿದ್ದಾರೆ. ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಡೇಂಜರಸ್ ಸಂಘಟನೆಯಾಗಿದೆ.  ಶಸ್ತ್ರಾಸ್ತ್ರ ಹಿಡಿದು ಕೇರಳದಲ್ಲಿ ಪಿಎಫ್‌ಐ ಪಥಸಂಚಲನ ಕಾರ್ಯಕ್ರಮ ಮಾಡಿತ್ತು ಎಂದು ಆರೋಪಿಸಿದರು.

ಕನ್ನಡ ಮರಾಠಿಗರ ಮಧ್ಯೆ ಜಗಳ ಹಚ್ಚಲು ಕೆಲವರ ಷಡ್ಯಂತ್ರ ನಡೆಸಿದ್ದು, ಹೊಡೆಯೋವನು ಹಿಂದೂ ಆಗಿರಬೇಕು ಹೊಡಿಸಿಕೊಳ್ಳವನು ಹಿಂದೂ ಆಗಿರಬೇಕು ಅಂತಾ ಷಡ್ಯಂತ್ರ ನಡೆಸಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರು ತಲ್ವಾರ್ ಹಿಡಿಯದಿದ್ದರೆ ನಾವು ಹಿಂದೂಗಳಾಗಿ ಇರುತ್ತಿರಲಿಲ್ಲ. ಮತಾಂತರ ನಿಷೇಧ ಕಾಯ್ದೆ ಜಾರಿ ತರುತ್ತಿರುವ ಕರ್ನಾಟಕ ಸರ್ಕಾರಕ್ಕೆ ಧನ್ಯವಾದ ಎಂದರು.  ಇದನ್ನೂ ಓದಿ: ಹಾಸ್ಟೆಲ್‍ನಲ್ಲಿರುವ ಬ್ಯಾಗ್ ತರುತ್ತೇನೆಂದು ಹೇಳಿ ಹೋದ ಯುವತಿ ನಾಪತ್ತೆ

ಮದರಸಾಗಳಲ್ಲಿ ಉಗ್ರರ ಉತ್ಪಾದನೆ ಆಗುತ್ತೆ. ಇದನ್ನ ಉತ್ತರ ಪ್ರದೇಶ ಶಾಸಕರು, ಐಬಿ ಅಧಿಕಾರಿಗಳು ಹೇಳಿದ್ದಾರೆ. ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಮಾಡಿದಂತೆ ಕರ್ನಾಟಕದಲ್ಲಿಯೂ ಆ ಕಾರ್ಯ ನಡೆಯಬೇಕಿದೆ. ಕರ್ನಾಟಕದಿಂದ ಈ ಕಾರ್ಯಕ್ರಮ ಆರಂಭವಾದರೆ ಇವರ ಅಂತ್ಯ ಶುರು. ‘ಹಮ್ ದೋ ಹಮಾರಿ ದೋ’ ಈ ಸ್ಕೀಮ್ ನಾವ್ಯಾಕೆ ಫಾಲೋ ಮಾಡಬೇಕು. ಹಸಿರು ಟೋಪಿಯವರಿಂದ ‘ಹಮ್ ಪಾಂಚ್ ಹಮಾರೇ ಪಚಾಸ್’ ಕಾರ್ಯಕ್ರಮ ನಡೀತಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಕಿಡಿಕಾರಿದರು.

ಉತ್ತರ ಪ್ರದೇಶದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಸೌಲಭ್ಯ ಕಡಿತ ಮಾಡಿದ್ದಾರೆ. ಅದನ್ನ ಎಲ್ಲಾ ರಾಜ್ಯಗಳಲ್ಲಿ ಜಾರಿ ಮಾಡಬೇಕು. ಮೋದಿಜಿ, ಯೋಗೀಜಿ ಇರದಿದ್ದರೆ ಮುಂದೆ ನಿಮ್ಮದೇನು ಅಂತಾ ಅಸಾದುದ್ದೀನ್ ಒವೈಸಿ ಕೇಳುತ್ತಾನೆ. ೧೨೦೦ ವರ್ಷಗಳಿಂದ ಭಾರತ ಇಸ್ಲಾಂ ರಾಷ್ಟ್ರ ಮಾಡಲು ಷಡ್ಯಂತ್ರ ನಡೀತಿದೆ. ಲವ್ ಜಿಹಾದ್, ಮತಾಂತರ ಹೆಸರಿನಲ್ಲಿ ಈ ಕಾರ್ಯ ನಡೆಯುತ್ತಿದ್ದು ಇದನ್ನ ತಡಿಯಬೇಕಿದೆ. ಕನ್ನಡ ಮರಾಠಿ ಅಂತಾ ಜಗಳವಾಡದೇ ಎಲ್ಲರೂ ಒಗ್ಗೂಡಬೇಕಿದೆ ಎಂದರು.

Leave a Reply

Your email address will not be published.

Back to top button