ಡಮಾಸ್ಕಸ್: ಅಮೆರಿಕಾ ಅಧ್ಯಕ್ಷ ಡೊನಾಳ್ಡ್ ಟ್ರಂಪ್‍ಗೆ ಟ್ವಿಟ್ಟರ್‍ನಲ್ಲಿ ಸಿರಿಯಾದ 7 ವರ್ಷದ ಬಾಲಕಿ ಕೇಳಿದ ಪ್ರಶ್ನೆ ಇದೀಗ ವಿಶ್ವಾದಾದ್ಯಂತ ಗಮನಸೆಳೆದಿದೆ.
ಸಿರಿಯಾದ ಬಾನಾ ಅಲಬೇದ್ ಎಂಬ ಬಾಲಕಿ ಟ್ವಟ್ಟರ್‍ನಲ್ಲಿ `ಮಿಸ್ಟರ್ ಟ್ರಂಪ್, ನೀವು ಎಂದಾದರೂ ನೀರು, ಆಹಾರವಿಲ್ಲದೇ 24 ಗಂಟೆ ಬದುಕಿದ್ದೀರಾ?. ಹೀಗೆ ಸಿರಿಯಾದ ನಿರಾಶ್ರತಿರ ಹಾಗೂ ಮಕ್ಕಳ ಬಗ್ಗೆ ಸ್ವಲ್ಪ ಚಿಂತಿಸಿ ಅಂತಾ ಹೇಳಿದ್ದಾಳೆ. ಈಕೆಯ ಹೊಸ ಟ್ವಿಟ್ ಹೊಸ ಟ್ವಿಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲಕಿಯ ಈ ಟ್ವಿಟ್‍ಗೆ 7,462 ಮಂದಿ ರೀಟ್ವಿಟ್ ಮಾಡಿದ್ದು, 14,978 ಲೈಕ್ಸ್‍ಗಳು ಬಂದಿವೆ.
Advertisement
ಬಳಿಕ ಈ ಹಿಂದೆ ಟ್ರಂಪ್ ವಲಸೆ ನಿಷೇಧದ ಬಗ್ಗೆ ಟ್ರಂಪ್ ಮಾಡಿದ್ದ `ನಮ್ಮ ದೇಶದಿಂದ ಕೆಟ್ಟ ಚಿಂತನೆಗಳುಳ್ಳ ಜನರನ್ನು ಹೊರಗಿಡುವುದು ಉದ್ದೇಶ’ ಎಂಬ ಟ್ವಿಟ್ ಗೂ ರೀಟ್ವೀಟ್ ಮಾಡಿದ ಈಕೆ `ನಾನು ಭಯೋತ್ಪಾದಕಿಯೇ?’ ಅಂತಾ ಪ್ರಶ್ನಿಸಿದ್ದಾಳೆ.
Advertisement
ಟ್ರಂಪ್ ಇತ್ತೀಚೆಗಷ್ಟೇ ಸಿರಿಯಾ ಒಳಗೊಂಡಂತೆ ಏಳು ಮುಸ್ಲಿಂ ರಾಷ್ಟ್ರಗಳಿಂದ ವಲಸೆ ನಿಷೇಧಿಸಿ ಆದೇಶಕ್ಕೆ ಸಹಿ ಮಾಡಿದ್ದು ಇದು ವಿಶ್ವದಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿತ್ತು.
Advertisement
ಈ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಅಲಬೇದ್ `ಪ್ರಿಯ ಟ್ರಂಪ್, ನಿರಾಶ್ರಿತರನ್ನು ನಿಷೇಧಿಸುವುದು ಅತಿ ಕೆಟ್ಟ ವಿಚಾರ. ಸರಿ, ಇದು ಒಳ್ಳೆಯದಾದ್ದರೆ, ನಾನು ನಿಮಗೊಂದು ಐಡಿಯಾ ಹೇಳ್ತೀನಿ. ಇತರ ರಾಷ್ಟ್ರಗಳಲ್ಲಿ ಶಾಂತಿ ನೆಲಸುವಂತೆ ಮಾಡಿ” ಎಂದು ಬರೆದಿದ್ದಳು.
Advertisement
ಯುದ್ಧ ಜರ್ಜರಿತ ಸಿರಿಯಾ ನಗರ ಅಲೆಪ್ಪೋದಲ್ಲಿನ ಜನರ ಜೀವನದ ಬಗ್ಗೆ ಬರೆದು, ಸಹಾಯಕ್ಕಾಗಿ ತನ್ನ ತಾಯಿ ಫಾಥೇಮಾ ಅವರೊಂದಿಗೆ ಅಲಬೇದ್ ಸರಣಿ ಟ್ವೀಟ್ ಮಾಡುತ್ತಿದ್ದಾಳೆ. ಅಲಬೇದ್ ಮತ್ತು ಅವಳ ತಾಯಿಯನ್ನು ಸಾಮಾಜಿಕ ಜಾಲತಾಣದಲ್ಲಿ ಸೆಪ್ಟೆಂಬರ್ 2016 ರಿಂದ 3,66,000 ಜನ ಹಿಂಬಾಲಿಸುತ್ತಿದ್ದಾರೆ.
my video to Trump. ” Mr @realdonaldtrump have u ever had no food & water for 24 hrs? Just think of refugees & the children of Syria.” pic.twitter.com/qbaZGp0MvB
— Bana Alabed (@AlabedBana) February 1, 2017