ಬೆಂಗಳೂರು: ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ನಿಶ್ಚಿತ ಠೇವಣಿ ಹಣದ ನೂರು ಕೋಟಿ ರೂ.ಗಳಲ್ಲಿ 48 ಕೋಟಿ ರೂ. ಹಣ ನುಂಗಿ ನೀರು ಕುಡಿದಿದ್ದ ಸಿಂಡಿಕೇಟ್ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಸೇರಿ 6 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಅಸಿಸ್ಟೆಂಟ್ ಮ್ಯಾನೇಜರ್ ಜಯರಾಮ್, ಮುಸ್ತಪಾ, ಅಬ್ದುಲ್ ಅಸ್ಲಾಂ, ಸಿದ್ದಗಂಗಯ್ಯ, ರೇವಣ್ಣ ನನ್ನ ಬಂಧಿಸಿರುವ ಸಿಸಿಬಿ ಪೊಲೀಸರು ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. 2019ರ ನವೆಂಬರ್ ನಲ್ಲಿ ಮಂಡಳಿಯ ಅವರ್ತ ನಿಧಿಯಿಂದ ಉತ್ತರ ಹಳ್ಳಿ ಬ್ರಾಂಚ್‍ನ ಸಿಂಡಿಕೇಟ್ ಬ್ಯಾಂಕ್‍ನಲ್ಲಿ ಬರೋಬ್ಬರಿ 100 ಕೋಟಿ ರೂ. ನಿಶ್ಚಿತ ಠೇವಣಿ ಮಾಡಲಾಗಿತ್ತು.
Advertisement
Advertisement
ಅಧಿಕ ಬಡ್ಡಿ ಆಸೆಗಾಗಿ ಸಿಂಡಿಕೇಟ್ ಬ್ಯಾಂಕ್‍ನಲ್ಲಿದ್ದ 100 ಕೋಟಿ ರೂ. ನಿಶ್ಚಿತ ಠೇವಣಿ ಮಾಡಿದ್ದ ಮಂಡಳಿ ಪ್ರತ್ಯೇಕವಾಗಿ ಎರಡು ಅಕೌಂಟ್‍ನಲ್ಲಿ ತಲಾ 50 ಕೋಟಿ ರೂ. ಹಣ ಇಟ್ಟಿತ್ತು. ಜನವರಿಯಲ್ಲಿ ನಿಶ್ಚಿತ ಠೇವಣಿ ಬಗ್ಗೆ ಮಾಹಿತಿ ಕೇಳಿದ ಕೃಷಿ ಅಧಿಕಾರಿಗಳು ಸಿಂಡಿಕೇಟ್ ಬ್ಯಾಂಕ್‍ನಲ್ಲಿ ಕೇವಲ 50 ಕೋಟಿ ರೂ. ಇದೇ ಎಂದು ಮಾಹಿತಿ ಕೊಟ್ಟಿದ್ದರು. ಬ್ಯಾಂಕ್ ಅಧಿಕಾರಿಗಳ ಮಾಹಿತಿ ಇಂದ ಕಂಗಾಲಾದ ಮಂಡಳಿ ಅಧಿಕಾರಿಗಳು ಕಮರ್ಷಿಯಲ್ ಪೊಲೀಸ್ ಠಾಣೆಯಲ್ಲಿ ವಂಚನೆಯ ಬಗ್ಗೆ ದೂರು ದಾಖಲಿಸಿದ್ದರು.
Advertisement
ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡ ಸರ್ಕಾರ ಸಿಸಿಬಿ ಹೆಗಲಿಗೆ ನೀಡಿತ್ತು. ಮೊದಲು ಬಂಧಿತರು ನೀಡಿದ್ದ 2 ನಿಶ್ಚಿತ ಠೇವಣಿ ಸಂಖ್ಯೆ ನಕಲಿ ಎಂದು ತಿಳಿದು ಬಂದಿತ್ತು. ಸದ್ಯ ಉಳಿದ 50 ಕೋಟಿ ರೂ. ಹಣದ ಮಾಹಿತಿಯನ್ನು ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಡಿಸಿಪಿ ರವಿಕುಮಾರ್ ನೇತೃತ್ವದ ತಂಡ ತನಿಖೆ ನಡೆಸಿ 50 ಕೋಟಿ ರೂ. ಹಣವನ್ನು ವಶಕ್ಕೆ ಪಡೆದು ಉಳಿದ 50 ಕೋಟಿ ರೂ. ಹಣದ ಮಾಹಿತಿಯನ್ನು ಬಂಧಿತ ಆರೋಪಿಗಳಿಂದ ಪಡೆದು ರಿಕವರಿ ಮಾಡಲು ಮುಂದಾಗಿದ್ದಾರೆ.