115 ವರ್ಷದ ಇತಿಹಾಸದಲ್ಲಿ ಸ್ವಿಸ್‌ ಬ್ಯಾಂಕ್‌ಗೆ ಭಾರೀ ನಷ್ಟ

Public TV
1 Min Read
Swiss National Bank

ಜ್ಯೂರಿಚ್‌: ಸ್ವಿಸ್ ನ್ಯಾಷನಲ್ ಬ್ಯಾಂಕ್ (Swiss National Bank) ವಾರ್ಷಿಕ 132.5 ಶತಕೋಟಿ ಸ್ವಿಸ್ ಫ್ರಾಂಕ್‌ (141.54 ಶತಕೋಟಿ ಡಾಲರ್‌) ನಷ್ಟ (Annual Loss) ಅನುಭವಿಸಿದೆ.

ಕಳೆದ ವರ್ಷ ಬಾಂಡ್ ಮತ್ತು ಷೇರು ಮಾರುಕಟ್ಟೆ (Bond and Share Market) ಕುಸಿತದ ಪರಿಣಾಮ ಎಸ್‌ಎನ್‌ಬಿ ಮಾರುಕಟ್ಟೆ ಮೌಲ್ಯ ಇಳಿಕೆಯಾಗಿದ್ದು  115 ವರ್ಷಗಳ ಇತಿಹಾಸದಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸಿದೆ. ಇದನ್ನೂ ಓದಿ: ತೆಲಂಗಾಣದಲ್ಲಿ ಐಫೋನ್‌ ಫ್ಯಾಕ್ಟರಿ, ಬೆಂಗಳೂರಿನಲ್ಲಿ ಪ್ರಾಜೆಕ್ಟ್‌ ಎಲಿಫೆಂಟ್‌: ಫಾಕ್ಸ್‌ಕಾನ್‌ ಅಧಿಕೃತ ಘೋಷಣೆ

Swiss National Bank 2

2021ರಲ್ಲಿ 26 ಶತಕೋಟಿ ಫ್ರಾಂಕ್‌ ಲಾಭ ಗಳಿಸಿತ್ತು. ನಷ್ಟದ ಹಿನ್ನೆಲೆಯಲ್ಲಿ ಸ್ವಿಸ್ ಬ್ಯಾಂಕ್‌ ಕೇಂದ್ರ ಅಥವಾ ಪ್ರಾದೇಶಿಕ ಸರ್ಕಾರಗಳಿಗೆ ಯಾವುದೇ ಪಾವತಿ ಅಥವಾ ಹೂಡಿಕೆದಾರರಿಗೆ ಲಾಭಾಂಶವನ್ನು ನೀಡುವುದಿಲ್ಲ. 1907 ರಲ್ಲಿ ಬ್ಯಾಂಕ್ ಸ್ಥಾಪನೆಯಾದ ನಂತರ ಎರಡನೇ ಬಾರಿ ಈ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದೆ.

ಮಾರ್ಚ್ 23 ರಂದು ತನ್ನ ಮುಂದಿನ ಹಣಕಾಸು ನೀತಿಯನ್ನು ಬ್ಯಾಂಕ್‌ ಪ್ರಕಟಿಸಲಿದೆ. ನಷ್ಟವು ಅದರ ಭವಿಷ್ಯದ ಹಣಕಾಸು ನೀತಿಯ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದರ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದೆ.

Share This Article
Leave a Comment

Leave a Reply

Your email address will not be published. Required fields are marked *