ಲಕ್ನೋ: ಗಾಜಿಯಾಬಾದ್‍ನಲ್ಲಿ (Ghaziabad) ನಡೆದ ರಾಮಲೀಲಾ ಜಾತ್ರೆಯಲ್ಲಿ (Ramleela Fair) ಉಯ್ಯಾಲೆ ಮುರಿದು ಬಿದ್ದು, ಮೂವರು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಐವರು ಗಾಯಗೊಂಡಿದ್ದಾರೆ.
ಬ್ರೇಕ್ ಡ್ಯಾನ್ಸ್ (Break Dance)ಎಂದು ಕರೆಯಲಾಗುವ ಉಯ್ಯಾಲೆಯೊಂದು ಮುರಿದು ದಾರಿ ಮಧ್ಯೆ ಪಲ್ಟಿಯಾದ ಪರಿಣಾಮ ಈ ಘಟನೆ ಜರುಗಿದೆ. ಘಟನೆ ವೇಳೆ ಸುಮಾರು 10 ಜನರು ಉಯ್ಯಾಲೆಯಲ್ಲಿ ಸವಾರಿ ಮಾಡುತ್ತಿದ್ದರು. ಇದನ್ನೂ ಓದಿ: ಎಣ್ಣೆ ನಶೆಯಲ್ಲಿ ಕಾರ್ ಚಾಲಕನ ಅವಾಂತರ – ನಡುರಸ್ತೆಯಲ್ಲೇ ಕಾರ್ ನಿಲ್ಲಿಸಿ ನಿದ್ರೆಗೆ ಜಾರಿದ ಭೂಪ
Advertisement
Ghaziabad – A major accident happened in Ramlila Ghantaghar, 4 people of the same family were injured when the swing broke at Ramlila Maidan in Ghaziabad.#Ghaziabad #Accident pic.twitter.com/B8acCFAPsC
— Prateek Pratap Singh (@PrateekPratap5) October 1, 2022
Advertisement
ವೀಡಿಯೋದಲ್ಲಿ ಸ್ವಿಂಗ್ ಜೋರಾಗಿ ಸುತ್ತುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಒಂದು ಉಯ್ಯಾಲೆ ಮುರಿದು ಕೆಳಗುರುಳಿ ಬಿದ್ದಿದೆ. ಈ ವೇಳೆ ಉಯ್ಯಾಲೆಯಲ್ಲಿದ್ದ ಕೆಲವರು ಕೆಳಗೆ ಬಿದ್ದಿರುವುದನ್ನು ಕಾಣಬಹುದಾಗಿದೆ. ಇದರಿಂದ ಜಾತ್ರೆಯಲ್ಲಿ ನೂಕುನುಗ್ಗಲು ಉಂಟಾಯಿತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ನಂತರ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
Advertisement
Advertisement
ಗಾಜಿಯಾಬಾದ್ ಆಡಳಿತ ಈ ಬಗ್ಗೆ ತನಿಖೆ ನಡೆಸಲು ಆದೇಶಿಸಿದೆ. ನಗರದ ಮ್ಯಾಜಿಸ್ಟ್ರೇಟ್ ಪ್ರಕಾರ, ಮನರಂಜನಾ ಮತ್ತು ಅಗ್ನಿಶಾಮಕ ಇಲಾಖೆ ಸೇರಿದಂತೆ ಹಲವು ಇಲಾಖೆಗಳು ತನಿಖೆಯ ನಂತರ ಜಾತ್ರೆಯಲ್ಲಿ ಉಯ್ಯಾಲೆ ನಡೆಸಲು ಅನುಮತಿ ನೀಡಿವೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ, ಇದು ಕಾಂಗ್ರೆಸ್‍ನ ಕೊನೆಯ ಯಾತ್ರೆ: ಆನಂದ್ ಸಿಂಗ್ ವ್ಯಂಗ್ಯ