ಹಾಲಿನಿಂದ ಪೇಡ ತಯಾರಿಸುವುದು ಎಲ್ಲರಿಗೂ ಗೊತ್ತು. ಆದರೆ ಅದನ್ನು ಫಟಾಫಟ್ ಅಂತ ಕೇವಲ ಅರ್ಧಗಂಟೆಯಲ್ಲಿ ಮಾಡುವುದು ಹೇಗೆ ಗೊತ್ತಾ? ಇಲ್ಲಿ ಪೇಡ ತಯಾರಿಸಲು ಹಾಲಿನ ಬದಲು ಮಾರುಕಟ್ಟೆಯಲ್ಲಿ ಸಿಗುವ ಮಿಲ್ಕ್ ಮೇಡ್ ಅನ್ನು ಬಳಸಲಾಗುತ್ತದೆ. ಇದರಿಂದ ಪೇಡವನ್ನು ಅತ್ಯಂತ ಸುಲಭವಾಗಿ ಮಾಡಬಹುದು. ಸಿಹಿಯಾದ ಕೇಸರ್ ಪೇಡವನ್ನು ನೀವೂ ಒಮ್ಮೆ ಟ್ರೈ ಮಾಡಿ.
Advertisement
ಬೇಕಾಗುವ ಪದಾರ್ಥಗಳು:
ತುಪ್ಪ – 1 ಟೀಸ್ಪೂನ್
ಮಿಲ್ಕ್ ಮೇಡ್ – 1 ಟಿನ್
ಹಾಲಿನಪುಡಿ – ಒಂದೂವರೆ ಕಪ್
ಕೇಸರಿ ಹಾಲು – 2 ಟೀಸ್ಪೂನ್(ಕೇಸರಿ ಎಸಳುಗಳನ್ನು ಬೆಚ್ಚಗಿನ ಹಾಲಿನಲ್ಲಿ ಸ್ವಲ್ಪ ಹೊತ್ತು ಇರಿಸಿ ಬಳಸಿ)
ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್
ಪಿಸ್ತಾ – 20 (ನಿಮಗಿಷ್ಟದ ಒಣ ಹಣ್ಣುಗಳನ್ನು ಬಳಸಬಹುದು)
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ದಪ್ಪ ತಳದ ಅಥವಾ ನಾನ್ ಸ್ಟಿಕ್ ಪ್ಯಾನ್‌ನಲ್ಲಿ ತುಪ್ಪವನ್ನು ಬಿಸಿ ಮಾಡಿ.
* ಈಗ ಮಿಲ್ಕ್ ಮೇಡ್ ಅನ್ನು ಹಾಕಿ, ಕಡಿಮೆ ಉರಿಯಲ್ಲಿ ಕಾಯಿಸಿ.
* ಹಾಲಿನ ಪುಡಿಯನ್ನು ಸೇರಿಸಿ, ಗಂಟಿಲ್ಲದಂತೆ ಚೆನ್ನಾಗಿ ಮಿಕ್ಸ್ ಮಾಡಿ.
* ಮಿಶ್ರಣ ಸಂಪೂರ್ಣ ಕರಗಿ, ದಪ್ಪವಾಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ.
* ಈಗ 2 ಟೀಸ್ಪೂನ್ ಬೆಚ್ಚಗಿನ ಹಾಲಿನಲ್ಲಿ ನೆನೆಸಿಟ್ಟಿದ್ದ ಕೇಸರಿಯನ್ನು ಹಾಕಿ.
* ಮಿಶ್ರಣ ದಪ್ಪವಾಗುತ್ತಾ ತಳವನ್ನು ಬಿಡಲು ಪ್ರಾರಂಭಿಸುತ್ತದೆ.
Advertisement
* ಸ್ವಾದಕ್ಕೆ ಏಲಕ್ಕಿ ಪುಡಿಯನ್ನು ಹಾಕಿ, ಸ್ಟೌ ಆಫ್ ಮಾಡಿ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಹಿಟ್ಟು ಗಟ್ಟಿಯಾಗಬಹುದು. ಅದನ್ನು ಮೃದುವಾಗುವತನಕ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಹಿಟ್ಟನ್ನು ಒಂದೊಂದು ಟೀಸ್ಪೂನ್‌ನಷ್ಟು ಬೇರ್ಪಡಿಸಿ, ಉಂಡೆಗಳನ್ನಾಗಿ ಮಾಡಿ. ಕೈಗೆ ತುಪ್ಪವನ್ನು ಹಚ್ಚಿಕೊಂಡು ಉಂಡೆ ತಯಾರಿಸುವುದರಿಂದ ಬಿರುಕು ಬೀಳದಂತೆ ಮಾಡಬಹುದು.
* ಈಗ ಉಂಡೆಯ ಮಧ್ಯದಲ್ಲಿ ಪಿಸ್ತಾ ಅಥವಾ ನಿಮಗಿಷ್ಟದ ಒಣ ಹಣ್ಣನ್ನು ಇಟ್ಟು ನಿಧಾನವಾಗಿ ಒತ್ತಿ.
* ಇದೀಗ ಇನ್ಸ್ಟಂಟ್ ಕೇಸರಿ ಪೇಡ ತಯಾರಾಗಿದ್ದು, ಅದನ್ನು ಗಾಳಿಯಾಡದ ಡಬ್ಬಿಯಲ್ಲಿ ಶೇಖರಿಸಿ ಫ್ರಿಡ್ಜ್‌ನಲ್ಲಿಟ್ಟರೆ 1 ವಾರಗಳವರೆಗೆ ಬೇಕೆಂದಾಗ ಸವಿಯಬಹುದು.