ಹಬ್ಬಗಳು ಬಂದರೆ ಸಾಕು ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗುತ್ತದೆ. ಅದರಲ್ಲೂ ಮಹಿಳೆಯರಂತೂ ತಿಂಡಿ-ತಿನಿಸುಗಳನ್ನು ಮಾಡುವುದರಲ್ಲಿ ಬ್ಯುಸಿಯಾಗುತ್ತಾರೆ. ಪ್ರತಿ ಹಬ್ಬದಲ್ಲೂ ಒಂದೇ ರೀತಿಯ ತಿಂಡಿಗಳನ್ನು ಬೇಜಾರಾಗಿರುತ್ತೆ. ಸಾಮಾನ್ಯವಾಗಿ ಅಕ್ಕಿ, ರವೆ ಮತ್ತು ರಾಗಿಯಲ್ಲಿ ಇಡ್ಲಿ ಮಾಡುತ್ತೀರಾ. ಆದರೆ ಹಬ್ಬ ಅಂದರೆ ಏನಾದರೂ ಸ್ಪೆಷನ್ ಆಗಿ ಮಾಡಬೇಕು ಅಲ್ಲವಾ.. ಅದಕ್ಕಾಗಿ ಈ ಬಾರಿ ಸಿಹಿಕುಂಬಳಕಾಯಿಯಲ್ಲಿ ಇಡ್ಲಿ ಮಾಡುವ ವಿಧಾನ ಇಲ್ಲಿದೆ..
Advertisement
ಬೇಕಾಗಿರುವ ಸಾಮಾಗ್ರಿಗಳು
1. ತುರಿದ ಕುಂಬಳಕಾಯಿ- 1 ಕಪ್
2. ತುರಿದ ತೆಂಗಿನಕಾಯಿ – 1/2 ಕಪ್
3. ಬೆಲ್ಲ (ರುಚಿಗೆ ತಕ್ಕಷ್ಟು) – 1/4 ಕಪ್
4.. ಇಡ್ಲಿ ರವೆ ಅಥವಾ ಅಕ್ಕಿ ರವೆ – 1/2 ಕಪ್
5. ಏಲಕ್ಕಿ – 1
6. ಎಣ್ಣೆ -2-3 ಚಮಚ
Advertisement
Advertisement
ಮಾಡುವ ವಿಧಾನ:
* ಮಿಕ್ಸಿ ಜಾರಿಗೆ ತೆಂಗಿನ ತುರಿ, ಏಲಕ್ಕಿ, ಮತ್ತು ಬೆಲ್ಲವನ್ನ ಹಾಕಿ ಪುಡಿ ಮಾಡಿಕೊಳ್ಳಿ.
* ಈ ಪುಡಿಯನ್ನ ಒಂದು ಅಗಲವಾದ ಬಟ್ಟಲಿಗೆ ಹಾಕಿಕೊಳ್ಳಿ.
* ಈಗ ಇದಕ್ಕೆ ತುರಿದ ಸಿಹಿಕುಂಬಳಕಾಯಿ, ಇಡ್ಲಿ ರವೆ, ಸ್ವಲ್ಪ ನೀರನ್ನ ಹಾಕಿರಿ.
* ಈ ಮಿಶ್ರಣವನ್ನ ಮೃದುವಾಗಿ ಕಲಸಿಕೊಳ್ಳಿ. 5 ನಿಮಿಷ ಹಾಗೆಯೇ ಬಿಡಿ.
* ಇಡ್ಲಿ ಪಾತ್ರೆಗೆ ಎಣ್ಣೆ ಸವರಿ, ಇಡ್ಲಿ ಆಕಾರದಲ್ಲಿ ಈ ಮಿಶ್ರಣವನ್ನ ತುಂಬಿರಿ.
* 12-13 ನಿಮಿಷಗಳವರೆಗೆ ಇದನ್ನ ಹಬೆಯಲ್ಲಿ ಬೇಯಿಸಿಕೊಳ್ಳಿ
* ಬಿಸಿ ಸಿಹಿಕುಂಬಳಕಾಯಿಯ ಇಡ್ಲಿಯನ್ನ ತುಪ್ಪ ಅಥವಾ ಜೇನುತುಪ್ಪ ಜೊತೆ ಸವಿಯಿರಿ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv