ಬ್ರೆಡ್, ದೋಸೆ, ಚಪಾತಿ, ಯಾವುದರೊಂದಿಗೂ ಸವಿಯಬಹುದಾದ ಒಂದು ಸೂಪರ್ ರೆಸಿಪಿಯನ್ನು ನಾವಿಂದು ಹೇಳಿಕೊಡುತ್ತೇವೆ. ಹುಳಿ-ಸಿಹಿ ಜೊತೆಗೆ ಮಸಾಲೆಯುಕ್ತ ಎನಿಸುವ ನೆಲ್ಲಿಕಾಯಿಯ ಜ್ಯಾಮ್ (Amla Jam) ಮಾಡುವುದು ಇಷ್ಟೊಂದು ಸುಲಭ ಎಂದು ನೀವು ಖಂಡಿತವಾಗಿಯೂ ಆಶ್ಚರ್ಯಪಡುತ್ತೀರಿ. ನೆಲ್ಲಿಕಾಯಿ ಜ್ಯಾಮ್ ಮಾಡುವ ವಿಧಾನ ಇಲ್ಲಿದೆ.
Advertisement
ಬೇಕಾಗುವ ಪದಾರ್ಥಗಳು:
ನೆಲ್ಲಿಕಾಯಿ – 250 ಗ್ರಾಂ
ತುಪ್ಪ – 1 ಟೀಸ್ಪೂನ್
ಸೋಂಪು – 1 ಟೀಸ್ಪೂನ್
ಕಪ್ಪು ಜೀರಿಗೆ – 1 ಟೀಸ್ಪೂನ್
ಬೆಲ್ಲ – ಒಂದೂವರೆ ಕಪ್
ಉಪ್ಪು – 1 ಟೀಸ್ಪೂನ್
ಕೆಂಪು ಮೆಣಸಿನ ಪುಡಿ – ಕಾಲು ಟೀಸ್ಪೂನ್
ಕಪ್ಪು ಉಪ್ಪು – ಅರ್ಧ ಟೀಸ್ಪೂನ್
ಸಿಟ್ರಿಕ್ ಆಸಿಡ್/ – ಕಾಲು ಟೀಸ್ಪೂನ್ (ಅಥವಾ 1 ಟೀಸ್ಪೂನ್ ನಿಂಬೆ ರಸ ಬಳಸಬಹುದು)
ಜೀರಿಗೆ ಪುಡಿ – ಅರ್ಧ ಟೀಸ್ಪೂನ್ ಇದನ್ನೂ ಓದಿ: ರುಚಿಯಾದ ರಾಗಿ ಪಾಯಸ ಮಾಡುವ ವಿಧಾನ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ನೆಲ್ಲಿಕಾಯಿಗಳನ್ನು ತೊಳೆದುಕೊಂಡು, ನೀರನ್ನು ಹರಿಸಿ.
* ಅವುಗಳನ್ನು ಕಕ್ಕರ್‌ಗೆ ಹಾಕಿ, ನೀರನ್ನು ಸೇರಿಸದೇ 2 ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ.
* ಕುಕ್ಕರ್ ತಣ್ಣಗಾದ ಬಳಿಕ ನೆಲ್ಲಿಕಾಯಿಗಳನ್ನು ತೆಗೆದು, ಕತ್ತರಿಸಿ, ಬೀಜಗಳನ್ನು ಬೇರ್ಪಡಿಸಿ.
* ಈಗ ನೆಲ್ಲಿಕಾಯಿಯ ತುಂಡುಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ, ಸ್ವಲ್ಪ ರುಬ್ಬಿಕೊಳ್ಳಿ. (ನುಣ್ಣಗೆ ರುಬ್ಬುವ ಅಗತ್ಯವಿಲ್ಲ)
* ಈಗ ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಕಪ್ಪು ಜೀರಿಗೆ ಹಾಗೂ ಸೋಂಪು ಹಾಕಿ 1 ನಿಮಿಷ ಫ್ರೈ ಮಾಡಿ.
* ಬಳಿಕ ನೆಲ್ಲಿಕಾಯಿ ಪೇಸ್ಟ್ ಸೇರಿಸಿ 1-2 ನಿಮಿಷ ಹುರಿಯಿರಿ.
* ನಂತರ ಬೆಲ್ಲವನ್ನು ಸೇರಿಸಿ ಮತ್ತು ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
* ಬೆಲ್ಲ ಕರಗಲು ಪ್ರಾರಂಭವಾದಂತೆ ಮಿಶ್ರಣದಲ್ಲಿ ತೇವಾಂಶ ಹೆಚ್ಚುತ್ತದೆ. ಇದರಿಂದ ನೀವು ಹೆಚ್ಚಿನ ನೀರು ಸೇರಿಸುವ ಅಗತ್ಯವಿಲ್ಲ.
* 5-6 ನಿಮಿಷಗಳ ನಂತರ, ನೀರಿನಂಶ ಆವಿಯಾಗಲು ಪ್ರಾರಂಭಿಸುತ್ತದೆ. ಈ ವೇಳೆ ಉಪ್ಪು, ಕೆಂಪು ಮೆಣಸಿನಪುಡಿ, ಕಪ್ಪು ಉಪ್ಪು, ಸಿಟ್ರಿಕ್ ಆಸಿಡ್, ಹಾಗೂ ಜೀರಿಗೆ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ.
* ಮಿಶ್ರಣ ತವಾವನ್ನು ಬಿಡಲು ಪ್ರಾರಂಭಿಸಿದಂತೆ ಉರಿಯನ್ನು ಆಫ್ ಮಾಡಿ.
* ತಣ್ಣಗಾದಮೇಲೆ ಶುದ್ಧ ಬಾಟಲಿಗೆ ವರ್ಗಾಯಿಸಿ, ನಿಮಗೆ ಬೇಕೆನಿಸಿದಾಗ ಬ್ರೆಡ್, ದೋಸೆ, ಚಪಾತಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ಡಿಫರೆಂಟ್ ರುಚಿ – ಸಬ್ಬಕ್ಕಿ ಇಡ್ಲಿ ಮಾಡಿ ನೋಡಿ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k