ಕೊಹ್ಲಿ ಕೆಣಕಿದ ನವೀನ್‌ಗೆ ಮುಂಬೈ ಸ್ಟಾರ್ಸ್‌ ಕೊಟ್ರು ಪಂಚ್‌ – RCB ಫ್ಯಾನ್ಸ್‌ಗೆ ಡಬಲ್‌ ಖುಷಿ

Public TV
2 Min Read
Naveen ul Haq

ಚೆನ್ನೈ: ಮುಂಬೈ ಇಂಡಿಯನ್ಸ್ (MI) ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ನಡುವೆ ನಡೆದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 81 ರನ್‌ ಗಳಿಂದ ಭರ್ಜರಿ ಜಯ ಸಾಧಿಸಿ, 2ನೇ ಹಂತಕ್ಕೆ ತಲುಪಿದೆ.

ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು ಮತ್ತು ಲಕ್ನೋಗೆ 20 ಓವರ್‌ ಗಳಲ್ಲಿ 182 ರನ್‌ ಗುರಿಯನ್ನು ನೀಡಿತು. ಆದ್ರೆ ಲಕ್ನೋ ತಂಡ 101 ರನ್‌ ಗಳಿಗೆ ಆಲ್ ಔಟ್ ಹೀನಾಯ ಸೋಲನುಭವಿಸಿತು. ಇದನ್ನೂ ಓದಿ: IPL 2023 Eliminator: 5 ರನ್‌ಗೆ 5 ವಿಕೆಟ್‌ ಉಡೀಸ್‌ – ಲಕ್ನೋ ಮನೆಗೆ, ಮುಂಬೈಗೆ 81ರನ್‌ಗಳ ಭರ್ಜರಿ ಜಯ

Naveen ul Haq 1

ಈ ಐಪಿಎಲ್ ಸೀಸನ್‌ ನಲ್ಲಿ ಬಹಳ ವೈರಲ್ ಆದ ‘ಸ್ವೀಟ್ ಮ್ಯಾಂಗೊ’ ಎಂಬ ಪದವನ್ನು ನೀವೆಲ್ಲರೂ ಕೇಳಿರಬಹುದು. ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್‌ ನಡುವೆ 2ನೇ ಬಾರಿಗೆ ನಡೆದ ಲೀಗ್ ‌ಪಂದ್ಯದಲ್ಲಿ ವಿರಾಟ್‌ ಕೊಹ್ಲಿ (Virat Kohli), ಪಿಯೂಷ್‌ ಚಾವ್ಲಾ ಅವರ ಬೌಲಿಂಗ್‌ಗೆ ಔಟಾಗುತ್ತಿದ್ದಂತೆ, ಪಿಯೂಷ್‌ ಅವರ ಚಿತ್ರವನ್ನು ಕ್ಲಿಕ್ಕಿಸಿದ್ದ ಅಫ್ಘಾನಿಸ್ತಾನ ಮೂಲದ ಲಕ್ನೋ ಆಟಗಾರ ನವೀನ್ ಉಲ್ ಹಕ್ (Naveen ul Haq) ʻಸ್ವೀಟ್‌ ಮ್ಯಾಂಗೋಸ್‌ʼ ಪದದೊಂದಿಗೆ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಮೂಲಕ ಲಕ್ನೋ ಪಂದ್ಯದ ವೇಳೆ ನಡೆದ ಮಾತಿನ ಚಕಮಕಿ ಬಳಿಕ ಕೊಹ್ಲಿಯನ್ನ ಮತ್ತೆ ಕೆಣಕಿದ್ದರು.

Naveen ul Haq 2

ಇದರಿಂದ ಕೊಹ್ಲಿ ಮತ್ತು ಆರ್‌ಸಿಬಿ ಫ್ಯಾನ್ಸ್‌ (RCB Fans) ಕೆಂಡಾಮಂಡಲವಾಗಿದ್ದರು. ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು. ಇದೇ ವೇಳೆ ಮುಂಬೈ ಮತ್ತು ಲಖನೌ ನಡುವಿನ ಎಲಿಮಿನೇಟರ್-1 ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡುತ್ತಿದ್ದ ನವೀನ್ 4 ಓವರ್‌ ಗಳಲ್ಲಿ 38 ರನ್ ನೀಡಿದರೂ 4 ವಿಕೆಟ್ ಕಬಳಿಸಿ ಮುಂಬೈ ತಂಡವನ್ನು ಒಂದು ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿಸಿದ್ದರು. ರೋಹಿತ್ ಶರ್ಮಾರನ್ನ ಔಟ್‌ ಮಾಡಿದ ನಂತರ ನವೀನ್ ಉಲ್ ಹಕ್ ಕಿವಿ ಮುಚ್ಚಿಕೊಂಡು, ಕೆ.ಎಲ್‌ ರಾಹುಲ್‌ ಸ್ಟೈಲ್‌ ಕಾಪಿ ಮಾಡಿ ಸಂಭ್ರಮಿಸಿದ್ದರು.

LSGvsMI 3 1

ಅದೇ ರೀತಿಯಲ್ಲಿ ಮುಂಬೈ ಇಂಡಿಯನ್ಸ್ ಆಟಗಾರರು ಪಂದ್ಯ ಗೆದ್ದ ಬಳಿಕ ರೆಸ್ಟ್‌ ರೂಮ್‌ನಲ್ಲಿ ಕುಳಿತಿದ್ದಾಗ, ಮೂರು ಮಾವಿನ ಹಣ್ಣುಗಳನ್ನು ಮೇಜಿನ ಮೇಲೆ ಇಟ್ಟುಕೊಂಡು ಕಿವಿ, ಕಣ್ಣು, ಬಾಯಿ ಮುಚ್ಚಿಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಫೋಟೋ ಸದ್ದು ಮಾಡುತ್ತಿದ್ದಂತೆ ಆರ್‌ಸಿಬಿ ಹಾಗೂ ವಿರಾಟ್‌ ಕೊಹ್ಲಿ ಅಭಿಮಾನಿಗಳು ನವೀನ್‌ನನ್ನ ಸಿಕ್ಕಾಪಟ್ಟೆ ಟ್ರೋಲ್‌ ಮಾಡಿದ್ದಾರೆ.

LSGvsMI 4 1

ಮತ್ತೊಂದೆಡೆ ಆರ್‌ಸಿಬಿ ತಂಡವನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಸೋಲಿಸಿ, ಪ್ಲೇ ಆಫ್‌ಗೆ ಬರದಂತೆ ಮಾಡಿದ ಗುಜರಾತ್‌ ಟೈಟಾನ್ಸ್‌, ಪ್ಲೇ ಆಫ್‌ ಮೊದಲ ಪಂದ್ಯದಲ್ಲಿ ಸೋತಿದ್ದು ಅಭಿಮಾನಿಗಳಿಗೆ ಡಬಲ್‌ ಖುಷಿ ಕೊಟ್ಟಿದೆ. ಆರ್‌ಸಿಬಿ ಅಭಿಮಾನಿಗಳೂ ಸಹ ಇದರಿಂದ ಸಿಎಸ್‌ಕೆಗೆ ಸಪೋರ್ಟ್‌ ಮಾಡಿದ್ದಾರೆ. ಇದನ್ನೂ ಓದಿ: IPL 2023: ಧೋನಿಯಿಂದ ಉದ್ದೇಶಪೂರ್ವಕವಾಗಿ ಸಮಯ ವ್ಯರ್ಥ- ಲಾಸ್ಟ್ 5 ಓವರ್‌ಗೂ ಮುನ್ನ ನಡೆದಿದ್ದೇನು?

Share This Article