ಮಂಡ್ಯ: ಚುನಾವಣೆ ಬಳಿಕ ಮಂಡ್ಯದಲ್ಲಿ ಆಣೆ ಪ್ರಮಾಣ ಪಾಲಿಟಿಕ್ಸ್ ಮುಂದುವರಿದಿದ್ದು, ನಾಗಮಂಗಲ ಕ್ಷೇತ್ರದ ಜೆಡಿಎಸ್ (JDS) ಪರಾಜಿತ ಅಭ್ಯರ್ಥಿ ಸುರೇಶ್ ಗೌಡ (Suresh Gowda) ರನ್ನು ಆಣೆ ಪ್ರಮಾಣಕ್ಕೆ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಆಹ್ವಾನಿಸಿದ್ದಾರೆ.
ಕಾಂಗ್ರೆಸ್ (Congress) ಜೊತೆ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದರ ಪರಿಣಾಮ ನನ್ನ ಸೋಲು ಆಯ್ತು ಎಂದು ಸುರೇಶ್ ಗೌಡ ಆರೋಪ ಮಾಡಿದ್ದರಿಂದ ಸುರೇಶ್ ಗೌಡರನ್ನ ಪ್ರಮಾಣಕ್ಕೆ ಎಲ್.ಆರ್.ಶಿವರಾಮೇಗೌಡ ಆಹ್ವಾನ ಮಾಡಿದ್ದಾರೆ. ನಾಗಮಂಗಲ ಕ್ಷೇತ್ರ (Nagamangala Constituency) ದಲ್ಲಿ ಜೆಡಿಎಸ್ ಸೋಲಿಸೋದಕ್ಕೆ ಶಿವರಾಮೇಗೌಡ ಒಳ ಒಪ್ಪಂದ ಮಾಡಿಕೊಂಡಿದ್ರು, ಮೂರು ವರ್ಷದಿಂದ ಕುತಂತ್ರ ನಡೆಯುತ್ತಿತ್ತು. ನನ್ನನ್ನ ಸೋಲಿಸೋದಕ್ಕಾಗಿಯೇ ಶಿವರಾಮೇಗೌಡ್ರು ಪತ್ನಿಯನ್ನ ಬಿಜೆಪಿಯಿಂದ ಕಣಕ್ಕಿಳಿಸಿ ಷಡ್ಯಂತ್ರ ಮಾಡಿ ನನ್ನನ್ನು ಸೋಲಿಸಲಾಯಿತು ಎಂದು ಸುರೇಶ್ ಗೌಡ ಆರೋಪ ಮಾಡಿದ್ದರು.
Advertisement
Advertisement
ಸುರೇಶ್ ಗೌಡ ಆರೋಪಕ್ಕೆ ಎಲ್.ಆರ್.ಶಿವರಾಮೇಗೌಡ ಕೆಂಡಾಮಂಡಲವಾಗಿದ್ದು, ನಾನು ನಮ್ಮ ಅಪ್ಪನಿಗೆ ಹುಟ್ಟಿರೋದು, ಸುರೇಶ್ ಗೌಡನ ಅಪ್ಪನಿಗಲ್ಲ. ಗೆಲ್ಲೋದಕ್ಕಾಗಿಯೇ ನನ್ನ ಪತ್ನಿಯನ್ನ ಚುನಾವಣೆಯಲ್ಲಿ ಬಿಜೆಪಿ (BJP) ಯಿಂದ ಸ್ಪರ್ಧೆ ಮಾಡಿಸಿದ್ದೆ. ಆದರೆ ಗೆಲ್ಲೋದಕ್ಕೆ ಸಾಧ್ಯವಾಗಲಿಲ್ಲ ಎಂದು ಇದೇ ವೇಳೆ ಶಿವರಾಮೇಗೌಡ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಒಂದು ಕರೆಗೆ ಕರಗಿದ ಕನಕಪುರದ ಬಂಡೆ – ತಡರಾತ್ರಿ ನಡೆದಿದ್ದು ಏನು?
Advertisement
ಜೆಡಿಎಸ್ ಸೋಲಿಸಲು ನಾನು ಚಲುವರಾಯಸ್ವಾಮಿ ಜೊತೆ ಒಪ್ಪಂದ ಮಾಡಿಕೊಂಡಿಲ್ಲ ಆರೋಪ ಮಾಡಿರುವ ಸುರೇಶ್ ಗೌಡ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ. ನಾನು ಯಾರೊಂದಿಗೂ ಒಪ್ಪಂದ ಮಾಡಿಕೊಂಡಿಲ್ಲ ಪ್ರಮಾಣ ಮಾಡುತ್ತೇನೆ. ಅವರೇ ದಿನಾಂಕವನ್ನ ನಿಗದಿ ಮಾಡಲಿ, ಇಲ್ಲ ನನಗೆ ಹೇಳಿದ್ರೂ ಡೇಟ್ ಫಿಕ್ಸ್ ಮಾಡ್ತೀನಿ. ತಾಕತ್ತಿದ್ರೆ ಆಣೆ ಪ್ರಮಾಣಕ್ಕೆ ಬರಲಿ ಎಂದು ಶಿವರಾಮೇಗೌಡ ಆಹ್ವಾನ ಮಾಡಿದ್ದಾರೆ.